ಮಕ್ಕಳು ಇಂದಿನ ಯುವ ಜನಾಂಗದಲ್ಲಿ ತಮ್ಮ ಭವಿಷ್ಯವನ್ನು ರೂಪಿಸುವಂತಹ ಕೈಗಳು ಪ್ರಸ್ತುತ ಜಂಗಮವಾಣಿಯಂತಹ ಕಂಪ್ಯೂಟರ್, ದೂರದರ್ಶನ, ಇಂತಹ ಹಲವಾರು ಸಾಮಾಜಿಕ ಮಾಧ್ಯಮದೊಂದಿಗೆ ವಾಲುತ್ತಿದ್ದಾರೆ. ಪುಸ್ತಕಗಳನ್ನು ಓದುವ ಆ ಪುಟ್ಟ ಕೈಗಳು ತಂತ್ರಜ್ಞಾನದ ಕಡೆಗೆ ದಾಪುಗಾಲು ಹಾಕುತ್ತಿದೆ. “ ಪುಸ್ತಕಗಳಿಗಿಂತ ಅತ್ಯುತ್ತಮ ಮಿತ್ರ ಬೇರಾರಿಲ್ಲ” ಆದರೆ ಹಿಂದಿನ ಯುಗದಲ್ಲಿ ಶಾಲೆಯನ್ನು ಬಿಟ್ಟು ಸಂಜೆಯ ತಂಪಗಿನ ವಾತಾವರಣದ ಜಗಲಿಯಲ್ಲಿ ಕುಳಿತು ಬರೆಯುವ, ಓದುವ, ಸನ್ನಿವೇಶಗಳು ಇಂದಿನ ಜಾಯಮಾನದಲ್ಲಿ ಮೂಲೆಗುಂಪಾಗುತ್ತಿರುವುದಲ್ಲದೆ ಪುಸ್ತಕದ ಜೊತೆ ಹಸಿವು ನೀರಡಿಕೆಯನ್ನು ಮರೆಸುವಂತಹ ಜಗಲಿಯ ಆಟಗಳು ಚೆನ್ನೆ ಮಣೆ,ಹಾವೇಣಿ, ಕಣ್ಣ ಮುಚ್ಚಾಲೆ,ಪಗಡೆಯಾಟ, ಹೊರಾಂಗಣ ಆಟಗಳಾದ ಲಗೋರಿ, ಕುಂಟೆಬಿಲ್ಲ, ಇವು ಮರೆಯಾಗುತ್ತಿವೆ. ಪುಸ್ತಕದ ಬದಲಾಗಿ ತಂತ್ರಜ್ಞಾನಯುತ ಬಳಕೆಯ ವಸ್ತುಗಳು ಮಕ್ಕಳ ಕೈ ಸೇರಿದೆ. ಇದರಿಂದಾಗಿ ಹೆತ್ತವರಿಗೆ ತಲೆನೋವುವಾಗುತ್ತಿದಲ್ಲದೆ. ಮೊಬೈಲ್ ಕೈ ಸೇರಿಲ್ಲ ಅಂದರೆ ಮಕ್ಕಳ ಕೋಪವು ಉಟೋಪಚಾರಗಳವರೆಗೂ ಇಂದಾಗಿವೆ. ಇಂತಹ ಕಾಲದಲ್ಲಿ ಓದುವ ಪ್ರವೃತ್ತಿಯತ್ತ ಮಕ್ಕಳನ್ನು ಸೆಳೆಯುವುದು ಬಹಳ ದೊಡ್ಡ ಸವಾಲಾಗಿದೆ..!
ಮಕ್ಕಳಿಗೆ ಒಂದನೇ ತರಗತಿ ನಂತರ ಕನ್ನಡ ಹಾಗೂ ಇಂಗ್ಲಿಷ್ ಎರಡು ಭಾಷೆಯ ಪುಸ್ತಕಗಳನ್ನು ಓದಲು ನೀಡಿದರೆ ಅತ್ಯುತ್ತಮ ದಿನಕ್ಕೊಂದು ಕಥೆಗಳು, ಚಿತ್ರಕಥೆಗಳಲ್ಲದೆ ಸಾಹಿತ್ಯ ಬಗೆಗಿನ ಪುಸ್ತಕ ಭಂಡಾರ ಇನ್ನಿತರ ಅನೇಕ ಪುಸ್ತಕಗಳತ್ತ ಚಿತ್ತ ಗಮನವನ್ನು ನೀಡುವ ಪ್ರಯತ್ನವನ್ನು ಪೋಷಕರು ಮಾಡಬೇಕಾದಲ್ಲದೆ ಹೇಗೆ “ಮನೆಯ ಅಂಗಳದಲ್ಲಿ ಹೂವಿನ ಮೊಗ್ಗುಗಳು ಅರಳುತ್ತದೆಯೋ” ಅದೇ ರೀತಿ ನಿಮ್ಮ ಮನೆಯ ಮಕ್ಕಳಿಗೆ ಬರೆಯಲು, ಓದಲು ಹೆಚ್ಚೆಚ್ಚು ಸಮಯ ಮೀಸಲಿಡಿ.ಅವರೊಂದಿಗೆ ಓದಿದ್ದನ್ನು ಗ್ರಹಿಸಲು ಬರೆಯಲು ಸ್ಪೂರ್ತಿಯನ್ನು ನೀಡಿ. ಇದರಿಂದಾಗಿ ಮಕ್ಕಳಿಗೆ ಅಕ್ಕರೆಯ ಪ್ರೋತ್ಸಾಹ ಸಿಗುವುದರಿಂದ ಅವರ ಮನಸ್ಸು ಅರಳುತ್ತಾ ಹೋಗುವುದಲ್ಲದೆ. ಮೊದ ಮೊದಲಿಗೆ ಪುಸ್ತಕಗಳನ್ನ ನಾಲ್ಕು ಸಾಲುಗಳತ್ತ ಓದಲು ಹೇಳಿ. ತುಸು ಹೆಚ್ಚು ಹೊಗಳಿಕೆಯ ನುಡಿಗಳಿಂದ ಕ್ರಮೇಣ ಸಾಲುಗಳು ಪುಟುಗಳಾಗಿ ಮಾರ್ಪಾಡು ಹೊಂದುವುದರಲ್ಲಿ ಸಂಶಯವಿಲ್ಲ…
ಕಿಶನ್ ಎಂ
ಪವಿತ್ರ ನಿಲಯ ಪೆರುವಾಜೆ…✍️