Ad Widget

ಗುಲ್ಬರ್ಗದಲ್ಲಿ ಸಜ್ಜನ ಪ್ರತಿಷ್ಠಾನದ ವತಿಯಿಂದ ವ್ಯಕ್ತಿತ್ವ ವಿಕಸನ ವಿಚಾರ ಸಂಕಿರಣ – ಡಾ.ಉಮ್ಮರ್ ಬೀಜದಕಟ್ಟೆ ಉಪನ್ಯಾಸ

ಗುಲ್ಬರ್ಗದ ಸೇಡಂನ ಕರ್ನಾಟಕ ಭವನದಲ್ಲಿ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ(ನೋಂ) ಹಾಗೂ ಆಶ್ರಯ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ(ನೋಂ) ಸೇಡಂ ವತಿಯಿಂದ  “ವ್ಯಕ್ತಿತ್ವ ವಿಕಸನ” ಒಂದು ದಿನದ ವಿಚಾರ ಸಂಕಿರಣ ನಡೆಯಿತು.ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೋಂ) ಯು ರಾಜ್ಯದಾದ್ಯಂತ ಉಚಿತ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡುತ್ತ ಬಂದಿದೆ.

. . . . . . . . .

   ಕಾರ್ಯಕ್ರಮದ ಮುಖ್ಯ ಅತಿಥಿ ಹಾಗೂ ಕೇಂದ್ರ ಬಿಂದು ಡಾ. ಉಮ್ಮರ್ ಬೀಜದಕಟ್ಟೆ ಇವರು ವ್ಯಕ್ತಿತ್ವ ವಿಕಸನ ಎಂಬ (Personality Development) ವಿಷಯದ ಬಗ್ಗೆ ಉಪನ್ಯಾಸ ನೀಡಿದರು.

. . . . . . .

ಗುಲ್ಬರ್ಗದ ಸೇಡಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಮಾಜಕಾರ್ಯ ಅಧ್ಯಯನ ವಿಭಾಗ ಗುಲ್ಬರ್ಗ ವಿಶ್ವವಿದ್ಯಾಲಯದ   ಉಪನ್ಯಾಸಕರಾದ ಡಾ. ರಾಜಶೇಖರ್. ಎಲ್ ಕಟ್ಟಿಮನಿ, ಪುರಸಭೆ ಸೇಡಂನ ಮುಖ್ಯ ಅಧಿಕಾರಿಗಳಾದ  ಬಿ ಪ್ರಹ್ಲಾದ,  ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಬಸವರಾಜ ಎಮ್ ಕೊನೇರಿ, ಆಶ್ರಯ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ(ನೋಂ) ಇದರ ಅಧ್ಯಕ್ಷರಾದ ಶಶಿಕಾಂತ ಬೇಡಸೂರ,  ಆಶ್ರಯನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸೇಡಂ ಇದರ ಕಾರ್ಯದರ್ಶಿಗಳಾದ  ಓಂ ಪ್ರಕಾಶ ಪಾಟೀಲ ತರಹಳ್ಳಿ,  ಸ್ವಾಮಿ ವಿವೇಕಾನಂದ ಕಲಾ ಪದವಿ ಮತ್ತು ಸಮಾಜಕಾರ್ಯ ಸ್ನಾತಕೋತ್ತರ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಸಂದೀಪ ಪ್ಯಾಟಿ ಹಾಗೂ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೋಂ)ಯ ನಿರ್ದೇಶಕರಾದ ಅಯ್ಯುಬ್ ಗೂನಡ್ಕ ಮತ್ತು ಮಂಜುನಾಥ ಆರ್ ಹಿರಿಯೂರು ಮೊದಲಾದವರು ಉಪಸ್ಥಿತರಿದ್ದರು.

  ಈ ಸಂದರ್ಭದಲ್ಲಿ 300 ಕ್ಕೂ ಹೆಚ್ಚು ಸ್ನಾತಕೋತ್ತರ ಹಾಗೂ ಪದವಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ರೇವಣ್ಣ ಸಿದ್ದಪ್ಪ ಪಾಟೀಲ್ ಕಾರ್ಯಕ್ರಮ  ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading