ಪ್ರತಾಪ ಯುವಕಮಂಡಲ ಹಾಗೂ ಚೈತ್ರ ಯುವತಿ ಮಂಡಲ ಅಜ್ಜಾವರ ದ್ವಿತೀಯ ವರ್ಷದ ಕಂಡದ ಗೌಜಿ ಕೇಸರ್ದ ಪರ್ಬ ಕಾರ್ಯಕ್ರಮ ಅಜ್ಜಾವರ ವಿಷ್ಣುಮೂರ್ತಿ ಒತ್ತೆಕೋಲ ಗದ್ದೆಯಲ್ಲಿ ಇಂದು ಜರುಗಿತು. ಶಾಸಕಿ ಕು. ಭಾಗೀರಥಿ ಮುರುಳ್ಯ ಕಾರ್ಯಕ್ರಮ ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿ ನನಗೂ ಆಸೆಯಿದೆ ಗದ್ದೆಯಲ್ಲಿ ಇಂದು ಇರಲು, ಆದರೆ ನಮಗೆ ಬೇರೆ ಕಾರ್ಯಕ್ರಮ ಇರುವ ಹಿನ್ನಲೆಯಲ್ಲಿ ಅಸಾಧ್ಯವಾಗಿದೆ. ಹಿಂದಿನ ಕಾಲದಲ್ಲಿ ಗದ್ದೆ ಎಲ್ಲರ ಮನೆಗಳಲ್ಲಿ ಇತ್ತು ಆದರೆ ಇಂದು ನಾವು ಪ್ರಕೃತಿ ಚಿಕಿತ್ಸೆ ಪಡೆದುಕೊಳ್ಳಲು ಹಣ ನೀಡಬೇಕಿದೆ. ಆದರೆ ಹಿಂದಿನ ಕಾಲದಲ್ಲಿ ಅಂತಹ ಅನಿವಾರ್ಯ ಇರಲಿಲ್ಲ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಭಾಷಣಕಾರರಾದ ಅಜಿತ್ ಗೌಡ ಐವರ್ನಾಡು ಮಾತನಾಡಿ ತುಳು ಸಂಸೃತಿ ಮತ್ತು ಮಕ್ಕಳು ಕಲಿಯಬೇಕಾದ ಮಣ್ಣಿನ ಗುಣಗಳ ಬಗ್ಗೆ ವಿವರಿಸುತ್ತಾ , ಭೂಮಿ ಹಾಗೂ ತಂದೆ ತಾಯಿಯನ್ನು ಗೌರವಿಸಬೇಕು ಎಂದು ಹೇಳಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರತಾಪ ಯುವಕ ಮಂಡಲ ಅಧ್ಯಕ್ಷರಾದ ಗುರುರಾಜ್ ಅಜ್ಜಾವರ ವಹಿಸಿದ್ದರು . ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸತ್ಯವತಿ ಬಸವನಪಾದೆ , ಉಪಾಧ್ಯಕ್ಷರಾದ ಲೀಲಾ ಮನಮೋಹನ್ , ಮನ್ಮಥ ಎ ಎಸ್ , ವೆಂಕಟ್ರಮಣ ಅತ್ಯಾಡಿ , ಸವೇರಾ ರೈ ಗದ್ದೆಯ ಮಾಲಕರು, ಮುದ್ದಪ್ಪ ಗೌಡ ಕುಡೆಂಬಿ , ಲೋಕೇಶ್ ಮಾವಿನಪಳ್ಳ , ಗೌರೀಶ್ ಅಡ್ಪಂಗಾಯ , ಅನಿಲ್ ರಾಜ್ ಕರ್ಲಪ್ಪಾಡಿ , ಮಾಲತಿ ಸೂರ್ಯ , ಶಶ್ಮಿ ಭಟ್ ಅಜ್ಜಾವರ , ಭವ್ಯ ಭುವನ್ , ಚನಿಯ ಕಲ್ತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು ಚನಿಯ ಕಲ್ತಡ್ಕ ಸ್ವಾಗತಿಸಿ ವಂದಿಸಿದರು ರಮೇಶ್ ಮೇದಿನಡ್ಕ, ನವೀನ್ ಬಾಂಜಿಕೋಡಿ ಕಾರ್ಯಕ್ರಮ ನಿರೂಪಿಸಿದರು . ಈ ಸಂದರ್ಭದಲ್ಲಿ ನೂತನವಾಗಿ ಸುಳ್ಯ ಕ್ಷೇತ್ರದ ಸಾಸಕರಾಗಿ ಚುಣಾಯಿತರಾದ ಶಾಸಕಿ ಕು. ಭಾಗೀರಥಿ ಮುರುಳ್ಯ ಹಾಗೂ ವಿಷ್ಣು ಮೂರ್ತಿ ಒತ್ತೆಕೊಲ ಗದ್ದೆಯ ಮಾಲಾಕರಾದ ಸವೇರಾ ರೈ ಇವರನ್ನು ಪ್ರತಾಪ ಯುವಕ ಮಂಡಲ ಮತ್ತು ಚೈತ್ರ ಯುವತಿ ಮಂಡಲದ ವತಿಯಿಂದ ಸನ್ಮಾನಿಸಲಾಯಿತು.