ಅಮರಪಡ್ನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶೇಣಿಯಲ್ಲಿ ಗ್ರಾಮ ಪಂಚಾಯಿತಿ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಮತ್ತು ಶಿಕ್ಷಣ ಇಲಾಖೆಯ ಜಂಟಿ ಅನುದಾನ ರೂ 5.30ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸುಸಜ್ಜಿತ ಶೌಚಾಲಯ ಕಟ್ಟಡವನ್ನು ಅಮರಮೂಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪದ್ಮಪ್ರಿಯಾರವರು ಉದ್ಘಾಟಿಸಿ, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಶ್ರೀ ಮಾಧವ ಪಿಂಡಿಬನರಿಗೆ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಈಸಿಒ ಶ್ರೀಮತಿ ನಳಿನಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಯಾನಂದ ಪತ್ತುಕುಂಜ, ಸದಸ್ಯರುಗಳಾದ ಅಶೋಕ್ ಚೂಂತಾರು,ಸೀತಾ ಹೆಚ್, ಮೀನಾಕ್ಷಿ ಚೂಂತಾರು, ವೆಂಕಟ್ರಮಣ ಇಟ್ಟಿಗುಂಡಿ , ಹೂವಪ್ಪ ಗೌಡ ಆರ್ನೋಜಿ, ಕ್ರಷ್ಣಪ್ರಸಾದ್ ಮಾಡಬಾಕಿಲು, ಮಾಜಿ ಗ್ರಾಮ ಪಂಚಾಯಿತಿ ಸದಸ್ಯೆ ನಿರ್ಮಲಾ ರೈ, ಶಾಲಾ ಮುಖ್ಯ ಶಿಕ್ಷಕ ಪ್ರಭಾಕರ ಮಾಡಬಾಕಿಲು, ನಿವ್ರತ ಮುಖ್ಯ ಶಿಕ್ಷಕಿ ರಮಾ ಕಿಶೋರಿ, ಲೋಕನಾಥ್ ಬೊಳುಬೈಲು, ಗುತ್ತಿಗೆದಾರರು ಹರಿಪ್ರಸಾದ್ ಎಲಿಮಲೆ, ಶಾಲಾ ಶಿಕ್ಷಕರು, ಪೊಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಜಲಧಿ ಇವೆಂಟ್ಸ ರವರಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಒಂದು ವರ್ಷದ ಖರ್ಚು ಭರಿಸಲು ಚೆಕ್ ವಿತರಣೆ ಹಾಗೂ ಗುತ್ತಿಗೆದಾರರಾದ ಹರಿಪ್ರಸಾದ್ ಎಲಿಮಲೆರವರನ್ನು ಸನ್ಮಾನಿಸಲಾಯಿತು. ಶಾಲಾ ಶಿಕ್ಷಕಿ ಶ್ರೀಮತಿ ಮಂಗಳಾ ಕಾರ್ಯಕ್ರಮ ನಿರೂಪಿಸಿ ,ಶಿಕ್ಷಕ ರಂಗಯ್ಯ ವಂದಿಸಿದರು.