ಸತ್ಯ ಧರ್ಮದ ನಿಲಯ ಎಂದೇ ಖ್ಯಾತಿಯ ಪ್ರಸಿದ್ಧ ಕ್ಷೇತ್ರ ಧರ್ಮಸ್ಥಳ, ಭಕ್ತರ ಪಾಲಿನ ಪರಮ ಪಾವನ ಕ್ಷೇತ್ರ ಇದಾಗಿದೆ, ಅದೆಷ್ಟೋ ಲಕ್ಷಾಂತರ ಭಗವದ್ಭಕ್ತರ ಬಾಳಿಗೆ ಬೆಳಕನ್ನು ನೀಡಿ ಹರಸಿದ ಧರ್ಮಾಧಿಕಾರಿಗಳಾದ ಪೂಜನೀಯ ಡಾ.ವೀರೆಂದ್ರ ಹೆಗ್ಗಡೆಯವರು ನಡೆದಾಡುವ ಮಂಜುನಾಥ ಸ್ವಾಮಿ ಎನ್ನುವುದರಲ್ಲಿ ಎರಡು ಮಾತಿಲ್ಲ. ನಡೆದಾಡುವ ಮಂಜುನಾಥ ಸ್ವಾಮಿ ಎಂಬ ಪೂಜನೀಯ ಭಾವನೆ ಹೊಂದಿರುವ ಲಕ್ಷಾಂತರ ಭಕ್ತರ ಮನಸ್ಸಿಗೆ ಘಾಸಿ ಮಾಡುವ ಹೇಯ ಕೃತ್ಯ ಕಾಣದ ದುಷ್ಟಶಕ್ತಿಗಳಿಂದ ನಡೆಯುತ್ತಿದೆ. ಧರ್ಮಸ್ಥಳದ ಹೆಸರು ಹೇಳುವುದಕ್ಕೆ ಭಯ ಪಡುವ ಮನಸ್ಸುಗಳನ್ನು ಒಡೆದು ಶಾಂತಿ ಕದಡುವ ಪ್ರಯತ್ನ ನಿರಂತರವಾಗಿ ಕೆಲವು ತುಚ್ಚ ಮನಸ್ಸಿನ ಅಂಧರಿಂದ ನಡೆಯುತ್ತಿದೆ. ಕ್ಷೇತ್ರದ ಅಭಿವೃದ್ಧಿ ಪರ ಕಾರ್ಯಗಳು ಹಾಗೂ ಖಾವಂದರ ಸಮಾಜಮುಖಿ ಕಾರ್ಯ ಚಿಂತನೆಗಳ ವೈಖರಿಯನ್ನು ಕಂಡು ಸಹಿಸದ ಕೆಲ ವ್ಯಕ್ತಿಗಳು ಅಪ ಪ್ರಚಾರ ಮಾಡಿ ಇಲ್ಲ ಸಲ್ಲದ ಆರೋಪಗಳನ್ನು ಮಾಡುವ ಮೂಲಕ ಪೂಜ್ಯ ಖಾವಂದರ ತೇಜೋವಧೆ ಮಾಡಲು ಹೊರಟಿರುವುದಲ್ಲದೆ ಲಕ್ಷಾಂತರ ಭಕ್ತಾದಿಗಳ ನಂಬಿಕೆಗೆ ದ್ರೋಹ ಎಸಗುವ ಕಾರ್ಯಕ್ಕೆ ಮುಂದಾಗಿರುವದನ್ನು ಸುಳ್ಯ ತಾಲೂಕು ಭಜನಾ ಪರಿಷತ್ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.
ಒಬ್ಬ ಅಮಾಯಕ ಹೆಣ್ಣು ಮಗಳ ಹತ್ಯೆಯಾಗಿರುವುದನ್ನು ಕೂಡ ನಾವು ಸಹಿಸುವುದಿಲ್ಲ. ಕೃತ್ಯದ ಹಿಂದೆ ಎಷ್ಟೇ ಪ್ರಭಾವಿ ವ್ಯಕ್ತಿಗಳಿದ್ದರೂ ಕಾನೂನಾತ್ಮಕವಾಗಿ ತನಿಖೆ ನಡೆಸಿ ತಪ್ಪಿತಸ್ಥ ಆರೋಪಿಗಳನ್ನು ಬಂಧಿಸಿ ಸೂಕ್ತ ಶಿಕ್ಷೆಗೊಳಪಡಿಸಬೇಕು. ಕೊಲೆ ಪ್ರಕರಣದ ಕುರಿತು ನ್ಯಾಯಯುತವಾದ ಹೋರಾಟಕ್ಕೆ ನಾವೂ ಸಂಪೂರ್ಣ ವಾಗಿ ಬೆಂಬಲಿಸಲು ಬದ್ಧರಿದ್ದೇವೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಸೌಜನ್ಯ ಪ್ರಕರಣದಲ್ಲಿ ಸುಖಾ ಸುಮ್ಮನೆ ಸುಳ್ಳಿನ ಕತೆಯನ್ನು ಕಟ್ಟಿಕೊಂಡು ವೈಯುಕ್ತಿಕವಾಗಿ ತಾನು ನಾಯಕನಾಗಿ ಮೆರೆಯಬೇಕೆಂಬ ಕಾರಣಕ್ಕಾಗಿ ಕ್ಷೇತ್ರದ ಬಗ್ಗೆ ಮತ್ತು ಪೂಜ್ಯರ ಮೇಲೆ ಅವಾಚ್ಯ ಶಬ್ದಗಳನ್ನು ಬಳಕೆ ಮಾಡಿ ಪೂಜ್ಯರ ಘನತೆ ಗೌರವಕ್ಕೆ ಚ್ಯುತಿ ತರುವ ವ್ಯಕ್ತಿಗಳು ಇನ್ನಾದರೂ ಸತ್ಯಕ್ಕೆ ದೂರವಾದ ವಿಷಯಗಳನ್ನು ಬಿತ್ತರಿಸಿ ಮುಗ್ಧ ಮನಸ್ಸಿನ ಭಕ್ತರನ್ನು ಹಾದಿ ತಪ್ಪಿಸುವ ಕಾರ್ಯ ತಂತ್ರ ನಿಲ್ಲಿಸಬೇಕು ಎಂದು ಹೇಳಿದರು.
ಧರ್ಮದ ಉಳಿವಿಗಾಗಿ ಸಾಮಾನ್ಯ ಜನರ ಸ್ವಾಭಿಮಾನದ ಬದುಕಿಗಾಗಿ ದುಷ್ಪಟಮುಕ್ತ ಸುದೃಢ ಸಮಾಜದ ನಿರ್ಮಾಣಕ್ಕಾಗಿ ಮುಂದಿನ ಯುವ ಪೀಳಿಗೆಗೆ ಸಂಸ್ಕಾರ ಸಂಸ್ಕೃತಿಗಳ ಅರಿವಿಗಾಗಿ ಇಡೀ ರಾಜ್ಯದಲ್ಲಿ ಭಜನೆ ಯ ಕ್ರಾಂತಿಯ ಹರಿಕಾರರಾಗಿ ಅದೆಷ್ಟೋ ದೇವಸ್ಥಾನದ ಭಜನಾ ಮಂದಿರ ಶ್ರದ್ಧಾ ಕೇಂದ್ರ ಗಳ ಸರ್ವತೋಮುಖ ಅಭಿವೃದ್ಧಿಗೆ ಪಣತೊಟ್ಟು ಧರ್ಮದ ರಕ್ಷಣೆಗೆ ತನ್ನನ್ನು ತಾನೇ ಸಮರ್ಪಿಸಿಕೊಂಡಿರುವ ಪೂಜ್ಯ ಧರ್ಮಾಧಿಕಾರಿಯವರ ವಿರುದ್ಧ ಇದನ್ನೇ ಮುಂದುವರಿಸಿಕೊಂಡು ಹೋದಲ್ಲಿ ನಾವು ಸಹಿಸಲು ಸಾಧ್ಯವಿಲ್ಲ. ನಾವು ನಂಬಿಕೊಂಡು ಬರುತ್ತಿರುವ ಕ್ಷೇತ್ರ ಹಾಗೂ ಪೂಜನೀಯ ಖಾವಂದರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕುತಂತ್ರಕ್ಕೆ ತಕ್ಕ ಉತ್ತರ ನೀಡಲು ಸಿದ್ಧರಿದ್ದೇವೆ, ನಮ್ಮ ಭಜನಾ ಪರಿಷತ್ ವತಿಯಿಂದ ಇಡೀ ತಾಲೂಕಿನ ಭಜಕ ಬಾಂಧವರನ್ನು ಒಟ್ಟು ಸೇರಿಸಿಕೊಂಡು ನ್ಯಾಯಯುತವಾಗಿ ಪ್ರತಿಭಟನೆ ನಡೆಸಲು ಹಿಂಜರಿಯುವುದಿಲ್ಲ. ಕ್ಷೇತ್ರದ ಹಾಗೂ ಪೂಜ್ಯರ ಬಗ್ಗೆ ಸತ್ಯಕ್ಕೆ ದೂರವಾದ ಆರೋಪ ಮಾಡಿರುವ ವ್ಯಕ್ತಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷೇತ್ರದ ಹಾಗೂ ಪೂಜ್ಯರ ಕ್ಷಮೆ ಯಾಚಿಸಬೇಕು. ಸೌಜನ್ಯ ಪ್ರಕರಣದಲ್ಲಿ ನಿಜವಾದ ಆರೋಪಿಗಳಿಗೆ ಶಿಕ್ಷೆಯಾಗಬೇಕೆಂದು ನಮ್ಮೆಲ್ಲರ ಒಕ್ಕೊರಲ ಆಗ್ರಹವಾಗಿದೆ ಎಂದು ಭಜನ ಪರಿಷತ್ ರಾಜ್ಯ ಅಧ್ಯಕ್ಷರಾದ ಬಾಲಕೃಷ್ಣ ಪಂಜ , ಭಜನಾ ಪರಿಷತ್ ಅಧ್ಯಕ್ಷರಾದ ವಿಶ್ವನಾಥ ರೈ , ಯತೀಶ್ ರೈ ದುಗಲಡ್ಕ , ಸತೀಶ್ ಟಿ ಎನ್ , ವೆಂಕಟ್ರಮಣ ಡಿ ಜಿ ಮತ್ತಿತರರು ಉಪಸ್ಥಿತರಿದ್ದರು.