Ad Widget

ಸುಳ್ಯದ ಸಮಸ್ಯೆಗಳಿಗೆ ಧ್ವನಿ ಎತ್ತದೇ ಶಾಸಕರ ಬಗ್ಗೆ ಜನ ಭ್ರಮ ನಿರಸನರಾಗಿದ್ದಾರೆ – ಅರ್ಹರಿಗೆ ಗೃಹಲಕ್ಷ್ಮಿ ಯೋಜನೆ ತಲುಪುವಂತಾಗಲು ಕಾಂಗ್ರೆಸ್ ಪ್ರಯತ್ನ : ಎಂ. ವೆಂಕಪ್ಪ ಗೌಡ

ಕಾಂಗ್ರೆಸ್ ಸರಕಾರ ಜಾರಿಗೆ ತಂದ ಗೃಹಲಕ್ಷ್ಮಿ ಯೋಜನೆಯನ್ನು ನಗರ ವ್ಯಾಪ್ತಿಯಲ್ಲಿ ಅರ್ಹ ಪ್ರತಿ ಮನೆಗಳಿಗೆ ತಲುಪಿಸುತ್ತೇವೆ. ಹಾಗೂ ಸುಳ್ಯದ ಜನತೆಯ ಬೇಡಿಕೆ ಹಾಗೂ ಸಮಸ್ಯೆಗಳ ಬಗ್ಗೆ ವಿಧಾನಸಭೆಯ ಅಧಿವೇಶನದಲ್ಲಿ ಧ್ವನಿ ಎತ್ತದೇ ಇರುವುದರಿಂದ ನಿರೀಕ್ಷೆ ಇಟ್ಟಿದ್ದ ಜನ ಭ್ರಮನಿರಶನಗೊಂಡಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಎಂ.ವೆಂಕಪ್ಪ ಗೌಡ ಹೇಳಿದರು.

. . . . . . .

ಅವರು ಸುಳ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಗೃಹಲಕ್ಷ್ಮೀ ಯೋಜನೆಯ ಅರ್ಜಿ ಸ್ವೀಕಾರ ಆರಂಭಗೊಂಡಿದ್ದು, ಆಗಸ್ಟ್ 15 ರಂದು ಯೋಜನೆಗೆ ಚಾಲನೆ ಸಿಗಲಿದೆ. ನಗರ ಪಂಚಾಯತ್‌ನಲ್ಲಿ 2 ಕೌಂಟರ್‌ಗಳು ಹಾಗೂ ತಾಲೂಕು ಕಚೇರಿ ಎದುರಿನ ಕರ್ನಾಟಕ ಒನ್, ಇತರೆಡೆ ಇರುವ ಗ್ರಾಮ ಒನ್,ಬಾಪೂಜಿ ಕೇಂದ್ರಗಳಲ್ಲಿ ಅರ್ಜಿ ನೋಂದಣಿ ನಡೆಯಲಿದೆ. ಎಲ್ಲಾ ಕೇಂದ್ರಗಳಿಗೆ ನಾವು ಭೇಟಿ ಕೊಟ್ಟು ಸಮಸ್ಯೆಗಳನ್ನು ಸರಿಪಡಿಸುತ್ತಿದ್ದೇವೆ. ಹಳೆಯ ರೇಶನ್ ಕಾರ್ಡ್ ಇದ್ದವರ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಆಹಾರ ಇಲಾಖೆಯ ಕಛೇರಿಯಲ್ಲಿ ಬದಲಾವಣೆ ಮಾಡಿಕೊಡುತ್ತಾರೆ. ಗಂಡಸರು ಯಜಮಾನ ಎಂದಿದ್ದಲ್ಲಿ ಸಮಸ್ಯೆ ಇದೆ, ಅದನ್ನು ನಾವು ಚರ್ಚಿಸಿ ಸರಿಪಡಿಸುತ್ತೇವೆ. ತೆರಿಗೆ ಪಾವತಿದಾರರನ್ನು ಹೊರತು ಪಡಿಸಿ ಎಪಿಎಲ್ ನವರಿಗೂ ಅವಕಾಶ ಇದೆ. ಮಕ್ಕಳು ತೆರಿಗೆ ಪಾವತಿಸುತ್ತಿದ್ದರೇ ಸಮಸ್ಯೆ ಇಲ್ಲ. ಸುಳ್ಯ ನಗರದಲ್ಲಿ ಬಾಡಿಗೆ ಮನೆ ಸೇರಿ ಸುಮಾರು 10 ಸಾವಿರ ಇರಬಹುದು. ನಗರದ ಎಲ್ಲಾ ಅರ್ಹ ಫಲಾನುಭವಿಗಳಿಗೆ ತಲುಪುವಂತಾಗಲು ಬ್ಯಾನರ್ ಅಳವಡಿಕೆ, ವಾರ್ಡ್ ಮಟ್ಟದಲ್ಲಿ ತಿಳುವಳಿಕೆ ಸಭೆ, ಮನೆಮನೆ ಸಂಪರ್ಕವನ್ನು ನ.ಪಂ. ಸದಸ್ಯರುಗಳ ನೇತೃತ್ವದಲ್ಲಿ ಪ್ರತಿ ವಾರ್ಡ್ ಮಟ್ಟದಲ್ಲಿ ಮಾಡಲು
ತೀರ್ಮಾನಿಸಿದ್ದೇವೆ. ಆ ಮೂಲಕ ಸುಳ್ಯ ನಗರದಲ್ಲಿ ಅತೀ ಹೆಚ್ಚು ಜನ ಸೌಲಭ್ಯ ಪಡೆಯುವಂತಾಗಬೇಕು. ಜು. 30 ರಿಂದ ವಾರ್ಡ್ ಮಟ್ಟದ ಸಭೆ ಆರಂಭಿಸುತ್ತಿದ್ದು, ದುಗಲಡ್ಕದಿಂದ ಪ್ರಥಮವಾಗಿ ಚಾಲನೆ ನೀಡಲಿದ್ದೇವೆ. ಗೃಹಲಕ್ಷ್ಮಿಗೆ ಅರ್ಜಿ ಹಾಕಲು ಮನೆಯೊಡತಿಯೇ ಬರಬೇಕಾಗಿಲ್ಲ, ಮನೆಯ ಇತರ ಸದಸ್ಯರು ಬಂದರೂ ಆಗುತ್ತದೆ. ಅವರ ಆಧಾರ್ ಕಾರ್ಡ್, ರೇಶನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಹಾಗೂ ಫೋನ್ ತರಬೇಕಾಗುತ್ತದೆ ತಂದರೆ ಸಾಕು. ಗ್ರಾಮ ಮಟ್ಟದಲ್ಲಿ ನೆಟ್ವರ್ಕ್ ತೊಂದರೆಗಳಿದ್ದರೇ ಸುಳ್ಯದಲ್ಲಿ ಬಂದು ನೋಂದಣಿ ಮಾಡಲು ಅವಕಾಶ ನೀಡುತ್ತೇವೆ. ನಾವು ನಗರದಲ್ಲಿ ಮಾಡಿದಂತೆ ಎಲ್ಲಾ ಕಾಂಗ್ರೆಸ್ ನಾಯಕರು ಗ್ರಾಮ ಮಟ್ಟದಲ್ಲಿ ಮಾಡಿ ಯೋಜನೆಯ ಜನರಿಗೆ ಮುಟ್ಟಿಸಬೇಕು ಎಂದರು.

ಶಾಸಕಿ ಭಾಗೀರಥಿ ಮುರುಳ್ಯ ಅವರು ಮಳೆ ಹಾನಿಯಾದಲ್ಲಿಗೆ ಹೋಗುತ್ತಿರುವುದನ್ನು ಸ್ವಾಗತಿಸುತ್ತೇವೆ. ಬೆಂಡೋಡಿ ಸೇತುವೆ ನಾವೇ ಮಾಡಿದ್ದು, ಅವರು ನಿರೀಕ್ಷೆಯಂತೆ ಕಾರ್ಯ ಮಾಡುತ್ತಿಲ್ಲ. ಮೊನ್ನೆ ನಡೆದ ವಿಧಾನಸಭೆಯ ಅಧಿವೇಶನದಲ್ಲಿ ಸುಳ್ಯದ ಹಾಗೂ ಜನತೆಯ ಬೇಡಿಕೆಯ ಬಗ್ಗೆ ಧ್ವನಿ ಎತ್ತಬೇಕಾಗಿತ್ತು. ಬೆಳೆ ವಿಮೆಯ ಬಗ್ಗೆ ಮಾತನಾಡಿಲ್ಲ. ಅದರ ಬಗ್ಗೆ ಆಡಳಿತ ಪಕ್ಷದವರಾಗಿ ಪ್ರಶ್ನೆ ಮಾಡಿದ ಪುತ್ತೂರು ಶಾಸಕರಾದ ಅಶೋಕ್ ರೈಯವರು ಯೋಜನೆ ಬರುವಂತೆ ಮಾಡಿದ್ದಾರೆ. ವಿಮೆ ಕಂತು ಪಾವತಿಗೆ ಆದೇಶವಾಗಿದೆ. 110ಕೆವಿ ವಿಳಂಬ, ಅಡಿಕೆ ಹಳದಿ ರೋಗದ ಬಗ್ಗೆ ಧ್ವನಿ ಎತ್ತದೇ ಜನ ಅವರ ಬಗ್ಗೆ ಭ್ರಮ ನಿರಸನಗೊಳ್ಳುವಂತೆ ಮಾಡಿದ್ದಾರೆ. ಬೆಳೆ ವಿಮೆ ಕಂತು ಸ್ವೀಕರಿಸಲು ಆದೇಶವಾಗಿದ್ದು, ಇತ್ತೀಚೆಗೆ ನನ್ನ ಬಗ್ಗೆ ಟೀಕೆ ಮಾಡಿದ ಹರೀಶ್ ಕಂಜಿಪಿಲಿ ತಿಳಿದುಕೊಳ್ಳಲಿ ಎಂದರು.

ಉಡುಪಿ ಪ್ರಕರಣವನ್ನು ನಾವು ಖಂಡಿಸುತ್ತೇವೆ. ಆದರೆ ಇದರಲ್ಲಿ ಬಿಜೆಪಿಯ ನಾಯಕಿಯರು ನಡೆದುಕೊಂಡ ರೀತಿ ಸರಿಯಲ್ಲ. ಅವರೆಲ್ಲಾ ವಿದ್ಯಾರ್ಥಿಗಳು ಅಲ್ಲಿ ಧರ್ಮವನ್ನು ಎಳೆದು ತರುವುದು ಸರಿಯಲ್ಲ. ಆದರೆ ಇವರು ಮಣಿಪುರದ ಬಗ್ಗೆ ಮಾತನಾಡುತ್ತಿಲ್ಲ. ಅಲ್ಲಿ ಕೂಡ ಹೆಣ್ಣಿನ ಮೇಲೆ ಸಾಮೂಹಿಕ ಅತ್ಯಾಚಾರವಾಗುತ್ತಿದೆ, ಬೆತ್ತಲೆ ಮೆರವಣಿಗೆಯಾಗುತ್ತಿದೆ. ಅದು ನಿಮ್ಮ ಕಣ್ಣಿಗೆ ಕಾಣುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ವಿದ್ಯುತ್ ಹಾಗೂ ಹಾಲಿನ ದರ (ರೂ.5) ಬಿಜೆಪಿ ಅವಧಿಯಲ್ಲಿಯೇ ಏರಿಕೆಗೆ ತೀರ್ಮಾನವಾಗಿತ್ತು. ಈಗ ಬಿಜೆಪಿ ಟೀಕೆ ಮಾಡುವುದು ಸರಿಯಲ್ಲ ಎಂದರು.

ಗೋಷ್ಠಿಯಲ್ಲಿ ನಗರ ಪಂಚಾಯತ್ ವಿಪಕ್ಷ ನಾಯಕ ಬಾಲಕೃಷ್ಣ ಭಟ್ ಕೊಡೆಂಕೇರಿ, ಸದಸ್ಯ ಡೇವಿಡ್ ಧೀರಾ ಕ್ರಾಸ್ತಾ, ಕಾಂಗ್ರೆಸ್ ಮುಖಂಡರಾದ ಗೋಕುಲ್‌ದಾಸ್ ಹಾಗೂ ಭವಾನಿಶಂಕರ ಕಲ್ಮಡ್ಕ ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!