ಮಾಣಿ – ಮೈಸೂರು ಹೆದ್ದಾರಿಯ ಅಡ್ಕಾರು ಎಂಬಲ್ಲಿ ಅಯ್ಯಪ್ಪ ಸ್ವಾಮಿ ಮಂದಿರದ ಬಳಿಯಲ್ಲಿ ಮಳೆ ನೀರು ರಸ್ತೆಯಲ್ಲಿ ನಿಂತು ವಾಹನ ಅಫಘಾತಗಳಾಗುತ್ತಿದ್ದು ಪೋಲಿಸ್ ಇಲಾಖೆಯು ಬ್ಯಾರಿಕೇಡ್ ಗಳನ್ನು ಅಳವಡಿಸುವಂತೆ ಜಾಲ್ಸೂರು ಗ್ರಾಮ ಪಂಚಾಯತ್ ವತಿಯಿಂದ ಮನವಿ ಸಲ್ಲಿಸಲಾಯಿತು. ಹಾಗೂ ಮಳೆ ನೀರು ರಸ್ತೆಗೆ ಬರದಂತೆ ತಡೆಯಲು ಜೆಸಿಬಿ ಮುಖಾಂತರ ಒಳ ಚರಂಡಿಯನ್ನು ಶೀಘ್ರವಾಗಿ ಸ್ವಚ್ಚಗೊಳಿಸುವಂತೆ ಹೆದ್ದಾರಿ ಇಂಜಿನಿಯರ್ ವಿಭಾಗಕ್ಕೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ವಿಜಯ್ ಅಡ್ಕಾರು ಮತ್ತು ಸಂಧ್ಯಾ ಅಡ್ಕಾರು ಮತ್ತಿತರರು ಉಪಸ್ಥಿತರಿದ್ದರು.
- Wednesday
- May 21st, 2025