ಅಜ್ಜಾವರ ಗ್ರಾಮದ ಕರಿಯಮೂಲೆ ಎಂಬಲ್ಲಿ ಬರೆ ಕುಸಿತದ ಪರಿಣಾಮ ಮಣ್ಣು ಚರಂಡಿಗೆ ಬಿದ್ದಿದ್ದು ಚರಂಡಿಯಲ್ಲಿ ಹರಿಯಬೇಕಾದ ನೀರು ರಸ್ತೆಯಲ್ಲಿ ಹರಿದು ಸಮೀಪದ ಸವಿತಾ ಎಂಬುವವರ ಮನೆಗೆ ಅಪಾಯ ಎದುರಾಗಿದೆ. ಮನೆಯ ಕೆಳ ಭಾಗದಲ್ಲಿ ಪಯಸ್ವಿನಿ ನದಿಯ ನೀರಿನ ಪ್ರವಾಹ ಬಂದಿದ್ದು, ಇತ್ತ ಇನ್ನೊಂದು ಮೇಲೆ ಬದಿಯಲ್ಲಿ ಬರೆ ಕುಸಿತವಾಗಿ ನೀರು ಮನೆ ಕಡೆಗೆ ಹರಿದು ಬರುತ್ತಿದ್ದು ಮನೆ ಮೇಲೆ ಬರೆ ಜರಿಯುವ ಆತಂಕದಲ್ಲಿದೆ. ಮಳೆಯಿಂದ ಜನರಿಗೆ ಆಗುವ ತೊಂದರೆಗಳಿಗೆ ಶೀಘ್ರ ಸ್ಪಂದಿಸಬೇಕೆಂದು ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳ ಆದೇಶವಿದ್ದರು ಪಿಡಬ್ಲ್ಯೂಡಿ ಇಲಾಖೆ ವಿಳಂಬ ಮಾಡುತ್ತಿದೆ. ಅನಾಹುತ ಸಂಭವಿಸುವ ಮೊದಲೇ ಎಚ್ಚೆತ್ತುಕೊಳ್ಳದೇ ಅನಾಹುತ ಸಂಭವಿಸಿದರೆ ಯಾರು ಹೊಣೆ ಜನ ಪ್ರಶ್ನಿಸಿತ್ತಿದ್ದಾರೆ.
- Sunday
- November 24th, 2024