ಸುಳ್ಯ ಎಲ್ ಡಿ ಬ್ಯಾಂಕ್ ಪ್ರಕಟಣೆ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ಪ್ರಕಟಣೆಯಂತೆ ರೈತ ಸದಸ್ಯರು ಪಡೆದ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಮತ್ತು ಕೃಷಿ ಪೂರಕ ಸಾಲಗಳಲ್ಲಿ ಜ . 31 ಕ್ಕೆ ಸುಸ್ತಿಯಾಗಿರುವ ಸಾಲಗಳ ಮೇಲಿನ ಬಡ್ಡಿಯನ್ನು ರಾಜ್ಯ ಸರಕಾರ ಮನ್ನಾ ಮಾಡುವ ಯೋಜನೆಯನ್ನು ಕೋವಿಡ್ 19 ಮಹಾಮಾರಿಯ ಸೋಂಕಿನ ಪರಿಣಾಮದಿಂದಾಗಿ ಜೂ . 30 ರ ವರೆಗೆ ವಿಸ್ತರಿಸಿದೆ . ಶೇ . 6,4,3 ರ ಕೃಷಿ ಸಾಲಗಳ ಕಂತು 2020 ಮಾ . 31 ರಿಂದ ಜೂ . 30 ಕ್ಕೆ ವಿಸ್ತರಿಸಿರುತ್ತದೆ . ಬ್ಯಾಂಕಿನ ಸಾಲಗಾರ ಸದಸ್ಯರು ಅಂತಿಮ ದಿನಾಂಕಕ್ಕೆ ಮೊದಲಾಗಿ ಕಂತು ಪಾವತಿಸಿ ಬಡ್ಡಿ ಮನ್ನಾ , ಬಡ್ಡಿ ರಿಯಾಯಿತಿ ಸೌಲಭ್ಯ ಪಡೆಯಬಹುದು . ಗ್ರಾಹಕರ ಅನುಕೂಲಕ್ಕಾಗಿ ಜೂ . 27 ಮತ್ತು 28 ರ ಶನಿವಾರ ಹಾಗೂ ಆದಿತ್ಯವಾರ ಬ್ಯಾಂಕ್ ಕಾರ್ಯನಿರ್ವಹಿಸಲಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ವಿಶ್ವನಾಥ ಬಿಳಿಮಲೆ , ವ್ಯವಸ್ಥಾಪಕರಾದ ಧನ್ ರಾಜ್ ಕೆ.ಸಿ. ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
- Friday
- November 22nd, 2024