✍️ ಭಾಸ್ಕರ ಜೋಗಿಬೆಟ್ಟು
ಭಾರಿ ಮಳೆ ಸುರಿಯುತ್ತಿರುವುದರಿಂದ ಜೋಗಿಬೆಟ್ಟು ಮಂಞನಕಾನ ಸಂಪರ್ಕ ಮಾಡುವ ರಸ್ತೆಯು ಹದೆಗೆಟ್ಟು ಈ ಭಾಗದ ಜನರಿಗೆ ಬಹಳ ತೊಂದರೆಯುನ್ನು ಉಂಟುಮಾಡುತ್ತಿದೆ. ಸುಮಾರು ಮೂವತ್ತಕ್ಕೂ ಹೆಚ್ಚು ಮನೆಗಳನ್ನು ಸಂಪರ್ಕಿಸುವ ಈ ರಸ್ತೆಯ ಅಧೋಗತಿಯನ್ನು ನೋಡುವವರು ಕೇಳುವವರು ಯಾರು ಇಲ್ಲದಂತಾಗಿದೆ. ಸರಿಯಾದ ಚರಂಡಿ ವ್ಯವಸ್ತೆ ಇಲ್ಲದೆ ಮಳೆಯ ನೀರು ಭಾರಿ ಪ್ರಮಾಣದಲ್ಲಿ ರಸ್ತೆಯಲ್ಲೇ ಹರಿಯುವುದರಿಂದ ರಸ್ತೆ ಕೊಚ್ಚಿ ಹೋಗುತ್ತಿದೆ.ರಸ್ತೆಯ ಮಧ್ಯ ಭಾಗದಲ್ಲಿಯೇ ದೊಡ್ಡ ದೊಡ್ಡ ಹೊಂಡಗಳಾಗಿರುವುದರಿಂದ ವಾಹನ ಸವಾರರಿಗೆ ಚಾಲನೆ ಮಾಡುವುದೆ ಸವಾಲಾಗಿದೆ. ಅಲ್ಲದೆ ರಸ್ತೆಯು ಸಂಪೂರ್ಣವಾಗಿ ಕೆಸರುಮಯವಾಗಿದ್ದು , ನಡೆದುಕೊಂಡು ಹೋಗಲು ಕೂಡ ಅಸಾಧ್ಯವಾಗಿದೆ. ಈ ಭಾಗದಲ್ಲಿ ಹಲವಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಶಾಲಾ ಕಾಲೇಜುಗಳಿಗೆ ಹೋಗುವುದಕ್ಕೂ ಭಾರಿ ತೊಂದರೆಯಾಗುತ್ತಿದೆ.
ಕಳೆದ ವರ್ಷವೂ ಊರವರಿಂದಲೇ ದುರಸ್ತಿ …!!
ವಿಶೇಷವೇನೆಂದರೆ ಕಳೆದ ವರ್ಷ ಕೂಡ ಇದೆ ರಸ್ತೆಯನ್ನು ಊರಿನ ಜನರೆ ತಮ್ಮ ಸ್ವಂತ ಖರ್ಚಿನಲ್ಲಿ ಎರಡು ಲೋಡು ಕೆಂಪು ಕಲ್ಲು ಹಾಸಿ ರಸ್ತೆ ದುರಸ್ತಿ ಮಾಡಿದ್ದರು. ಆದರೆ ಈ ವರ್ಷವು ಕೂಡ ರಸ್ತೆಯು ಅಧೋಗತಿಗೆ ತಲುಪಿದೆ. ಪ್ರತಿ ವರ್ಷವೂ ಈ ರಸ್ತೆ ಕೆಸರುಮಯವಾಗುವುದು ರೂಢಿಯಾಗಿಸಿಕೊಂಡಿದೆ. ಇದಲ್ಲದೆ ಈ ರಸ್ತೆಗೆ ಐವತ್ತು ವರ್ಷಕ್ಕಿಂತಲೂ ಅಧಿಕ ವರ್ಷದ ಇತಿಹಾಸ ಇದೆ. ಇಂತಹ ಹಳೆಯ ರಸ್ತೆಗಳು ಇನ್ನೂ ದುರಸ್ತಿ ಕಾಣದಿರುವುದು ಮಾತ್ರ ಅಚ್ಚರಿಯ ಸಂಗತಿಯಾಗಿದೆ…!!