ರೈಟ್ ಟು ಲಿವ್ ಕೋಟೆ ಫೌಂಡೇಷನ್ (Right to live kote foundation) ವತಿಯಿಂದ ಸುಳ್ಯದ ಜೂನಿಯರ್ ಕಾಲೇಜಿನ ಹೈ ಸ್ಕೂಲ್ ವಿಭಾಗಕ್ಕೆ ವಿದ್ಯಾರ್ಥಿನಿಯರಿಗಾಗಿ ಶೌಚಾಲಯ ಕೊಡುಗೆಯಾಗಿ ನೀಡಲಾಯಿತು.
ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ಶೌಚಾಲಯ ಕಟ್ಟಡ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲರಾದ ಮೋಹನ್, ಉಪಪ್ರಾಂಶುಪಾಲರಾದ ಪ್ರಕಾಶ್ ಮೂಡಿತಾಯ, ರೈಟ್ ಟು ಲಿವ್ ಕೋಟೆ ಫೌಂಡೇಶನ್ ನ ಪ್ರದೀಪ್ ಉಬರಡ್ಕ, ಎಸ್ ಡಿ ಯಂ ಸಿ ಅಧ್ಯಕ್ಷೆ ರಾಜೇಶ್ವರಿ ಕಾಡುತೋಟ, ಶಿಕ್ಷಕರಾದ ಸುಂದರ್ ಕೇನಾಜೆ, ದಿವಾಕರ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
- Sunday
- November 24th, 2024