Ad Widget

ಚೆಂಬು ಕುದ್ರೆಪಾಯದಲ್ಲಿ ಉಸ್ಮಾನ್ ಕೊಲೆ ಪ್ರಕರಣ, ಆರೋಪಿಗನ್ನು ಹೆಡೆಮುರಿ ಕಟ್ಟಿದ ಪೋಲಿಸ್

ಮಡಿಕೇರಿ ತಾಲೋಕಿನ ಚೆಂಬು ಗ್ರಾಮದ ಕುದ್ರೆಪಾಯದಲ್ಲಿ ಆಸ್ತಿ ವಿವಾದಕ್ಕೆ ಸಂಭಂದಿಸಿ ಸಹೋಧರನಿಗೆ ಚೂರಿ ಇರಿದು ಕೊಲೆಗೈದು ಪರಾರಿಯಾಗಿದ್ದ ಸಹೋದರ ಆರೋಪಿಗಳು ಕೇರಳದಲ್ಲಿ ಸೆರೆ ಸಿಕ್ಕಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

. . . . . . . . .

ಚೆಂಬು ಗ್ರಾಮದ ಕುದ್ರೆಪಾಯ ಎಂಬಲ್ಲಿ ಕೊಲೆಯಾದ ಉಸ್ಮಾನ್ ಹಾಗೂ ಅವರ ಸಹೋದರರು ಹತ್ಯೆ ಆರೋಪಿಗಾಳಾಗಿದ್ದ ಸತ್ತಾರ್ ಮತ್ತು ರಫೀಕ್ ರವರು ಚೂರಿಯಿಂದ ಇರಿದು ರಿಕ್ಷಾದಲ್ಲಿ ಪರಾರಿಯಾಗಿದ್ದರು ಘಟನೆಗೆ ಸಂಭಂದಿಸಿ ಸಹಕರಿಸಿದ ರಿಕ್ಷಾ ಚಾಲಕನನ್ನು ಬಂದಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು, ಆದರೆ ಆರೋಪಿಗಳು ನಾಪತ್ತೆಯಾಗಿದ್ದರು ಪೋಲಿಸರು ಆರೋಪಿಗಳ ಜಾಡು ಹಿಡಿದು ಶೋಧಕಾರ್ಯ ನಡೆಸಿದ್ದರು. ಆರೋಪಿಗಳು ಕೇರಳ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿತ್ತು ಈ ಹಿನ್ನಲೆ ತೀವ್ರ ಕಾರ್ಯಚರಣೆ ನಡೆಸಿದ ಪೋಲಿಸರು ಆರೋಪಿಗಳನ್ನು ಎರ್ನಾಕುಳಂ ಎಂಬಲ್ಲಿ ಸೆರೆ ಹಿಡಿದು ಕರೆತರುತ್ತಿದ್ದಾರೆ ಎಂದು ತಿಳಿದುಬಂದಿದೆ.

. . . . . . .

ಕೊಲೆಯಾದ ಎರಡು ದಿನದಲ್ಲಿ ಪ್ರಕರಣ ಭೇಧಿಸಿ ಹೆಡೆಮುರಿಗಟ್ಟಿದ ಪೋಲಿಸ್.

ಘಟನೆ ನಡೆದ ಬಳಿಕ ಆರೋಪಿಗಳ ಮನೆಯವರ ಪೋನ್ ಆಲಿಕೆ ನಡೆಸುತ್ತಿದ್ದ ಸೈಬರ್ ಪೋಲಿಸರು ಆರೋಪಿಗಳು ತನ್ನ ಮನೆಯವರ ಜೊತೆ ಸಂಪರ್ಕಿಸುತ್ತಿದ್ದ ಜಾಡು ಹಿಡಿದು ಆರೋಪಿಗಳನ್ನು ಪತ್ತೆಗೆ ಕಾರ್ಯಾಚರಣೆ ನಡೆಸಿರಬಹುದು ಎನ್ನಲಾಗುತ್ತಿದ್ದು ಹೆಚ್ಚಿನ ಮಾಹಿತಿ ಪೋಲಿಸರಿಂದಲೇ ತಿಳಿದು ಬರಬೇಕಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading