Ad Widget

ಕಾಂಗ್ರೆಸ್‌ನ ದುರಾಡಳಿತ ಮುಂದುವರಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ಎಚ್ಚರಿಕೆ – ಹರೀಶ್ ಕಂಜಿಪಿಲಿ

ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ಭಾರತೀಯ ಜನ ಪಾರ್ಟಿ ಸುಳ್ಯ ವಿಧಾನ ಸಭಾ ಕ್ಷೇತ್ರ ಸಮಿತಿ ವತಿಯಿಂದ ಸುಳ್ಯ ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಯಿತು. ಕಾರ್ಯಕರ್ತರನ್ನುದ್ದೇಶಿಸಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿ, ಬೆಳಗಾವಿ ಚಿಕ್ಕೋಡಿಯ ಪರಮಪೂಜ್ಯ ಆಚಾರ್ಯ ಜೈನಮುನಿ ಕಾಮಾನಂದ ನಂದಿ ಮಹಾರಾಜ್ ಬರ್ಬರ ಹತ್ಯೆ ಖಂಡನೀಯ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಹಂತಕರಿಗೆ ಉಗ್ರ ಶಿಕ್ಷೆ ವಿಧಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಮೈಸೂರು ಟಿ. ನರಸಿಂಹ ಪುರದ ಹಿಂದು ಧರ್ಮದ ಕಾರ್ಯವನ್ನು ಸಕ್ರೀಯವಾಗಿ ಮಾಡುತ್ತಿದ್ದ ಯುವ ಬ್ರಿಗೇಡ್ ಸಂಚಾಲಕ ವೇಣುಗೋಪಾಲ ನಾಯಕನ ಬರ್ಬರ ಹತ್ಯೆ ಅಮಾನವೀಯ ಇದನ್ನು ಉಗ್ರವಾಗಿ ಖಂಡಿಸುತ್ತೇವೆ. ಕಾಂಗ್ರೆಸ್‌ನ ದುರಾಡಳಿತ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದರು.ಎ.ವಿ. ತೀರ್ಥರಾಮ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಂದ 50 ದಿನಗಳೊಳಗೆ ರಾಜ್ಯದಲ್ಲಿ ಹಲವಾರು ಅಮಾಯಕರ ಹತ್ಯೆಗಳು ನಡೆದಿವೆ. ಸಾರ್ವಜನಿಕರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಜನಸಾಮಾನ್ಯರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ರಾಜ್ಯದಲ್ಲಿ ಇನ್ನು ಮುಂದೆ ಅರಾಜಕತೆ ಮತ್ತು ದುರಾಡಳಿತ ಮುಂದುವರಿದರೆ ಮುಂದಿನ ದಿನಗಳಲ್ಲಿ ಬಿ.ಜೆ.ಪಿ. ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದರು. ಪ್ರತಿಭಟನೆ ಬಳಿಕ ಸುಳ್ಯ ತಾಲೂಕು ಕಚೇರಿಗೆ ಭೇಟಿ ನೀಡಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

. . . . . . .

ರಾಜ್ಯಪಾಲರಿಗೆ ಸಲ್ಲಿಸಿದ ಮನವಿಯಲ್ಲಿ ಬೇಡಿಕೆಗಳನ್ನು ಆಗ್ರಹಿಸಿ,

1. ಬೆಳಗಾವಿ ಚಿಕ್ಕೋಡಿಯ ಪರಮಪೂಜ್ಯ ಆಚಾರ್ಯ ಜೈನಮುನಿ ಕಾಮಾನಂದ ನಂದಿ ಮಹಾರಾಜ್‌ ಬರ್ಬರ ಹತ್ಯೆ ಖಂಡನೀಯ. ಈ ಹತ್ಯೆಯ ಬಗ್ಗೆ ಸಮಗ್ರ ತನಿಖೆ ನಡೆಸಿ, ಆರೋಪಿಗಳಿಗೆ ಉಗ್ರ ಶಿಕ್ಷೆ ವಿಧಿಸಲು ಸರಕಾರವು ಸೂಕ್ತ ಕ್ರಮ ಕೈಗೊಳ್ಳಬೇಕು.

2. ಮೈಸೂರು ಟಿ.ನರಸಿಮರದ ಹಿಂದು ಧರ್ಮದ ಕಾರ್ಯವನ್ನು ಸಕ್ರೀಯವಾಗಿ ಮಾಡುತ್ತಿದ್ದ. ಯುವ ಬ್ರಿಗೇಡ್ ಸಂಚಾಲಕ ವೇಣುಗೋಪಾಲ ನಾಯಕನ ಬರ್ಬರ ಹತ್ಯೆ ಅಮಾನವೀಯ. ಇದನ್ನು ಉಗ್ರವಾಗಿ ಖಂಡಿಸುತ್ತೇವೆ.

3. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಡಬಲ್ ಮರ್ಡರ್ ಸೇರಿದಂತೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಅಸ್ತಿತ್ವಕ್ಕೆ ಬಂದ 50 ದಿನಗಳೊಳಗೆ ರಾಜ್ಯದಲ್ಲಿ ಹಲವಾರು ಅಮಾಯಕರ ಹತ್ಯಾ ಪ್ರಕರಣಗಳು ನಡೆದಿದ್ದು, ಸಾರ್ವಜನಿಕರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ ಅಲ್ಲದೆ ಜನಸಾಮಾನ್ಯರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ತೀರಾ ಹದಗೆಟ್ಟ ಪರಿಣಾಮದಿಂದಾಗಿ ಮತಾಂಧರು ಮತ್ತು ದುಷ್ಕರ್ಮಿಗಳು ತಲೆ ಎತ್ತುತ್ತಿದ್ದಾರೆ. ಕಾಂಗ್ರೆಸ್ ಸರಕಾರದ ದುರ್ಬಲ ಆಡಳಿತದಿಂದಾಗಿ ಪೊಲೀಸ್‌ ಇಲಾಖೆ ನಿಷ್ಕ್ರಿಯವಾದಂತಾಗಿದೆ. ಇನ್ನು ಮುಂದೆ ಈ ರೀತಿಯ ಹೇಯ ಕೃತ್ಯಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು.

4. ಈ ಸರಕಾರದಲ್ಲಿ ರಾಜಕೀಯ ಪ್ರೇರಿತ ವರ್ಗಾವಣೆ ದಂಧೆ ಮಿತಿಮೀರಿದ್ದು, ಇದೇ ಕಾರಣಕ್ಕಾಗಿ ಮೈಸೂರಿನಲ್ಲಿ ಕ.ರಾ.ರ.ಸಾ.ಸಂಸ್ಥೆಯ ನಿರ್ವಹಕನೊಬ್ಬ ಆತ್ಮಹತ್ಯೆಗೆ ಪ್ರಯತ್ನಿಸಿರುವುದು ದುರದೃಷ್ಟಕರ, ಮಂತ್ರಿಗಳು ದ್ವೇಷರಾಜಕಾರಣದ ಕೀಳು ಮನೋಭಾವವನ್ನು ಕೈಬಿಡಬೇಕು.

5. ಕಾಂಗ್ರೆಸ್ ಆಡಳಿತದಲ್ಲಿ ದಿನಬಳಕೆ ವಸ್ತುಗಳ ಬೆಲೆ, ವಿದ್ಯುತ್ ಬಿಲ್‌, ಬಸ್‌ ದರ, ಮುದ್ರಾಂಕ ಶುಲ್ಕ, ಹಾಲಿನ ದರಸೇರಿದಂತೆ ಜೀವನ ನಿರ್ವಹಣೆಯ ಅವಶ್ಯಕ ಸೌಲಭ್ಯಗಳ ದರ ಏರಿಕೆಯನ್ನು ತಕ್ಷಣ ನಿಯಂತ್ರಿಸಬೇಕು.

6. ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ರಾಷ್ಟ್ರೀಯತೆ ಮತ್ತು ಹಿಂದೂ ವಿರೋಧಿ ನೀತಿಯ ಧೋರಣೆಯನ್ನು ಅನುಸರಿಸುತ್ತಿದ್ದು, ಹಿಂದಿನ ಬಿ.ಜೆ.ಪಿ.ಸರಕಾರದ ಆಡಳಿತದಲ್ಲಿ ಜಾರಿಗೊಳಿಸಿದ ಬಲವಂತದ ಮತಾಂತರ ನಿಷೇಧ ಕಾಯ್ದೆ ಮತ್ತು ಗೋಹತ್ಯಾ ನಿಷೇಧ ಕಾಯ್ದೆ ಹಾಗೂ ರಾಷ್ಟ್ರೀಯ ಶಿಕ್ಷಣ ಅನುಷ್ಠಾನ ನೀತಿಯ ರದ್ದುಗೊಳಿಸಿರುವುದನ್ನು ಖಂಡಿಸುತ್ತೇವೆ

7. ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್‌ ಘೋಷಣೆ ಮಾಡಿರುವ 5 ಗ್ಯಾರಂಟಿಗಳನ್ನು ರಾಜ್ಯದ ಜನರನ್ನು ಗೊಂದಲಕ್ಕೊಳಪಡಿಸದೆ ನಿಷ್ಕರ್ಗವಾಗಿ ಜಾರಿಗೊಳಿಸಬೇಕು.

8. ರಾಜ್ಯ ಸರಕಾರದ ಬಜೆಟ್‌ನಲ್ಲಿ ಬಹು ಸಂಖ್ಯಾತ ಹಿಂದೂಗಳನ್ನು ನಿರ್ಲಕ್ಷಿಸಿ, ಕೇವಲ ಒಂದು ವರ್ಗವನ್ನು ಓಲೈಕ ಮಾಡಿರುವುದು ಖಂಡನೀಯ. ರಾಜ್ಯದಲ್ಲಿ ಇನ್ನು ಮುಂದೆಯೂ ಅರಾಜಕತೆ ಮತ್ತು ದುರಾಡಳಿತ ಮುಂದುವರಿದರೆ ಮುಂದಿನ ದಿನಗಳಲ್ಲಿಬಿ.ಜೆ.ಪಿ.ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು.

ಜಿಲ್ಲಾ ಉಪಾಧ್ಯಕ್ಷ ವೆಂಕಟ್ ದಂಬೆಕೊಡಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಸ್. ಎನ್. ಮನ್ಮಥ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವೆಂಕಟ್ ವಳಲಂಬೆ ವಿನಯ್ ಕುಮಾರ್ ಕಂದಡ್ಕ, ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ಶೀಲಾ ಅರುಣ್ ಕುರುಂಜಿ , ಬುದ್ದನಾಯ್ಕ್ , ಸುಪ್ರೀತ್ ಮೊಂಟಡ್ಕ , ಲತೀಶ್ ಗುಂಡ್ಯ , ಸಂತೊಷ್ ಕುತ್ತಮೊಟ್ಟೆ , ಸುನೀಲ್ ಕೇರ್ಪಳ ಸತ್ಯವತಿ ಬಸವನಪಾದೆ , ಹರೀಶ್ ರೈ ಉಬರಡ್ಕ , ಗುರುದತ್ ನಾಯಕ್ ದೀಪಕ್ ಕುತ್ತಮೊಟ್ಟೆ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!