ಸುಳ್ಯದ ಬಿಜೆಪಿ ಮುಖಂಡ, ಜಾಲ್ಸೂರು ಶಕ್ತಿ ಕೇಂದ್ರ ಅಧ್ಯಕ್ಷ ಜಯರಾಜ್ ಕುಕ್ಕೆಟ್ಟಿ ಯವರ ಮನೆಗೆ ಜು.11 ರಂದು ಮಧ್ಯಾಹ್ನ ಸಿಡಿಲು ಬಡಿದು ಹಾನಿ ಸಂಭವಿಸಿರುವುದಾಗಿ ತಿಳಿದುಬಂದಿದೆ. ಸಿಡಿಲ ಬಡಿತದ ಸಂದರ್ಭದಲ್ಲಿ ಮನೆಯ ಜಗಲಿ ಹಾಗೂ ಗೋಡೆಯ ಸಿಮೆಂಟ್ ಕಿತ್ತು ಹೋಗಿದೆ. ಸ್ವಿಚ್ ಬೋರ್ಡ್ ಗಳಿಗೆ ಕೂಡ ಹಾನಿಯಾಗಿದೆ. ಜಯರಾಜ್ ಅವರು ಸಿಡಿಲು ಬಡಿದಿರುವ ಜಾಗದಿಂದ ಕೆಲವೇ ಕ್ಷಣಗಳ ಮೊದಲು ತೆರಳಿದ್ದರಿಂದ ಅನಾಹುತ ತಪ್ಪಿದೆ. ಮನೆಯಲ್ಲಿದ್ದವರಿಗೂ ಶಾಕ್ ಹೊಡೆದಂತ ಅನುಭವವಾಗಿದೆ. ಹೆಚ್ಚಿನ ಯಾವುದೇ ಅಪಾಯಗಳು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಗ್ರಾಮ ಪಂಚಾಯತ್ ವತಿಯಿಂದ ಕುಕ್ಕೆಟಿ ನಿವಾಸಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
- Friday
- November 1st, 2024