ವರದಿ : ಮಿಥುನ್ ಕರ್ಲಪ್ಪಾಡಿ
ಕಳೆದ ಐದು ವರ್ಷಗಳಿಂದ ಮುಚ್ಚಿದ್ದ ಇಂದಿರಾ ಕ್ಯಾಂಟೀನ್ ಮತ್ತೆ ತೆರೆದುಕೊಂಡಿದೆ. ಹಸಿವು ಮುಕ್ತ ಮಾಡಬೇಕು ಎನ್ನುವ ಪರಿಕಲ್ಪನೆಯೊಂದಿಗೆ ರಾಜ್ಯ ಸರಕಾರ ಕೈಗೊಂಡಿರುವ ಈ ಯೋಜನೆ ಅತೀ ಕಡಿಮೆ ದರದಲ್ಲಿ ಹೊಟ್ಟೆ ತುಂಬಾ ಊಟ ಹಾಕುತ್ತಿದೆ ಇಂದಿರಾ ಕ್ಯಾಂಟಿನ್. ಇದೀಗ ಸುಳ್ಯದ ಜನತೆ ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.
ಇಂದಿರಾ ಕ್ಯಾಂಟಿನ್ ಎಲ್ಲಿದೆ? ಏನೆಲ್ಲಾ ಸಿಗುತ್ತೆ ಗೊತ್ತೆ ?
ಇಂದಿರಾ ಕ್ಯಾಂಟೀನ್ ನಲ್ಲಿ ಮುಂಜಾನೆ 7:30 ರಿಂದ 10:30ರ ತನಕ ಸೋಮವಾರದಿಂದ ಶನಿವಾರ ತನಕ ಇಡ್ಲಿ ಸಾಂಬಾರ್ ಹಾಗೂ ಪಲಾವ್ ಕೇವಲ ಐದು ರೂಪಾಯಿಗಳಿಗೆ ಸಿಗುತ್ತಿದೆ. ಭಾನುವಾರ ಒಂದು ದಿನ ಇಡ್ಲಿ , ಕೇಸರಿ ಬಾತ್ ನೀಡಲಾಗುತ್ತಿದೆ. ಅದೇ ರೀತಿ ಮಧ್ಯಾಹ್ನ 12:30ರಿಂದ 3 ರ ತನಕ ಅನ್ನ ಸಾರು, ಪಲ್ಯ, ಸಾಂಬಾರು , ಉಪ್ಪಿನ ಕಾಯಿ , ಬೆಳ್ತಿಗೆ ಹಾಗೂ ಕುಚ್ಚಲು ಅಕ್ಕಿಯ ಊಟವು ಸಿಗುತ್ತಿದ್ದು ಹೊಟ್ಟೆ ತುಂಬಾ ಊಟ ಮಾಡಬಹುದಾಗಿದೆ. ಹಾಗೂ ರಾತ್ರಿ ಕೂಡಾ ಇಲ್ಲಿ ಊಟ ನೀಡುತ್ತಿದ್ದೇವೆ. ಸುಳ್ಯ ನಗರಕ್ಕೆ ಕೆಲಸ ಕಾರ್ಯಗಳಿಗೆ ಆಗಮಿಸುವವರು ಇಂದಿರಾ ಕ್ಯಾಂಟಿನ್ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಸಿಬ್ಬಂದಿ ಪಾಂಡುರಂಗ ತಿಳಿಸಿದ್ದಾರೆ.
ಈಗ ಕೇವಲ ಎಂಬತ್ತರಿಂದ ನೂರರ ಒಳಗೆ ಮಾತ್ರ ಊಟಗಳು ಹೋಗುತ್ತಿದ್ದು ಆಸ್ಪತ್ರೆಗೆ ಬರುವ ರೋಗಿಗಳ ಕುಟುಂಬಸ್ಥರು , ವಿದ್ಯಾರ್ಥಿಗಳು ಮಾತ್ರ ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದು ಇನ್ನಷ್ಟು ಹೆಚ್ಚಿನ ಜನತೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ಆಗಲಿ ಎಂದು ಹೇಳುತ್ತಾರೆ. ಇಲ್ಲಿ 3 ಜನ ಉದ್ಯೋಗಿಗಳು ಕೆಲಸ ನಿರ್ವಹಿಸುತ್ತಿದ್ದು ಮೇನೇಜರ್ ಆಗಿ ಪ್ರಶಾಂತ್ ಅಂಬಿಗ, ಕ್ಯಾಶಿಯರ್ ಪಾಂಡುರಂಗ, ಅಡುಗೆ ಭಟ್ಟರಾಗಿ ಸಂಜೀವ ಇವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶುಚಿ ರುಚಿಯಾದ ಅಹಾರವನ್ನು ಇಲ್ಲಿ ಉಣಬಡಿಸುತ್ತಿದ್ದಾರೆ.
ಸುಳ್ಯ ತಾಲೂಕು ಕಛೇರಿಯ ಹಿಂಬದಿ, ಕೋರ್ಟ್ ನಿಂದ ಎದುರು ಭಾಗದಲ್ಲಿ ಈ ಇಂದಿರಾ ಕ್ಯಾಂಟೀನ್ ಕಾರ್ಯಚರಿಸುತ್ತಿದೆ.
ಇಂದಿರಾ ಕ್ಯಾಂಟೀನ್ ಸುಳ್ಯದ ಹೃದಯ ಭಾಗದಲ್ಲಿ ಇದ್ದರೆ ಜನತೆಗೆ ಇನ್ನೂ ಉಪಯೋಗ ಹೆಚ್ಚು, ಜತೆಗೆ ಈಗ ಊಟ, ತಿಂಡಿ ಮಾತ್ರ ದೊರೆಯುತ್ತಿದ್ದು ಚಾ,ಕಾಪಿ ಕೂಡ ದೊರೆತರೇ ಉತ್ತಮ ಎಂದು ಫಲಾನುಭವಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.