Ad Widget

ಅನ್ನಭಾಗ್ಯ ‘ನೇರ ನಗದು’: ಇಂದು ಚಾಲನೆ ನೀವು ಬಿಪಿಎಲ್ ಪಡಿತರ ಚೀಟಿದಾರರೇ ಹಾಗಿದ್ದರೆ ಹೇಗೆ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಲಿದೆ ಎಂದು ತಿಳಿಯಲು ಈ ವರದಿಯನ್ನು ಓದಿ.

. . . . . . . . .

ಜು .10ರಂದು ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರುಇಂದು ಜು.10 ಚಾಲನೆ ನೀಡಲಿದ್ದಾರೆ.ವಿಧಾನಸೌಧದ ಮೂರನೇ ಮಹಡಿಯಲ್ಲಿನ ಸಮ್ಮೇಳನ ಸಭಾಂಗಣದಲ್ಲಿ ಇಂದು ಸಂಜೆ 5ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಬಿಪಿಎಲ್ ಪಡಿತರ ಫಲಾನುಭವಿಗಳಿಗೆ ನಗದು ನೀಡುವ ಯೋಜನೆಯನ್ನು ಸಿಎಂ ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದಲ್ಲಿ 1.28 ಕೋಟಿ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಕುಟುಂಬಗಳ ಪಡಿತರ ಚೀಟಿದಾರರು ಇದ್ದಾರೆ. ಇದರಲ್ಲಿ ಶೇ.99 ರಷ್ಟು ಕಾರ್ಡುಗಳು ಆಧಾರ್ ಜೋಡಣೆ ಹೊಂದಿವೆ ಎಂದು ರಾಜ್ಯ ಸರಕಾರ ತಿಳಿಸಿದ್ದು ,ಶೇ.82 ರಷ್ಟು ಪಡಿತರ ಚೀಟಿಗಳು ಅಂದರೆ 1.06 ಕೋಟಿ ಪಡಿತರ ಚೀಟಿಗಳು. ಸಕ್ರಿಯ ಬ್ಯಾಂಕ್ ಖಾತೆಗಳೊಂದಿಗೆ ಜೋಡಣೆಯಾಗಿವೆ. ಈ ಕಾರ್ಡುದಾರರ ಖಾತೆಗಳಿಗೆ ನಗದು ವರ್ಗಾವಣೆ ಮಾಡಲಾಗುವುದು, ಉಳಿದ ಕಾರ್ಡುದಾರರಿಗೆ ಖಾತೆ ತೆರೆಯಲು ಮಾಹಿತಿ ನೀಡಲಾಗುವುದು.1.27 ಕೋಟಿ ಕಾರ್ಡುಗಳಲ್ಲಿ ಒಬ್ಬ ಸದಸ್ಯರನ್ನು ಕುಟುಂಬದ ಮುಖ್ಯಸ್ಥರೆಂದು ಗುರುತಿಸಲಾಗಿದ್ದು ಅವರ ಖಾತೆಗೆ ನಗದು ವರ್ಗಾಯಿಸಲಾಗುವುದು. ಶೇ.94 ರಷ್ಟು ಮುಖ್ಯಸ್ಥರು ಮಹಿಳೆಯರು ಹಾಗೂ ಶೇ.5 ರಷ್ಟು ಕುಟುಂಬಗಳಿಗೆ ಪುರುಷ ಮುಖ್ಯಸ್ಥರಿದ್ದಾರೆ ಎಂದು ಪ್ರಕಟಣೆಯಲ್ಲಿ ಮಾಹಿತಿನೀಡಲಾಗಿದೆ.ಹಣ ವರ್ಗಾವಣೆ ಹೇಗೆ ? ಪ್ರತಿಯೊಬ್ಬರ ಪಡಿತರ ಚೀಟಿಗೆ ಈಗಾಗಲೇ ಆಧಾರ್ ನಂಬರ್ ಜೋಡಣೆಯಾಗಿದ್ದು ಈ ಜೋಡಣೆ ಆಧಾರದಲ್ಲಿ ಮನೆಯ ಗೃಹಿಣಿಯನ್ನು ಗುರುತಿಸಿ ಅವರ ಆಧಾರ್ ಜೋಡಣೆ ಆದ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ ಆಗಲಿದೆ ಎಂದು ತಿಳಿದು ಬಂದಿದ್ದು ಇಂದು ಸಂಜೆ ಅಥವಾ ನಾಳೆ ನಮಗೆ ಅಧಿಕೃತ ಮಾಹಿತಿ ದೊರೆಯಲಿದೆ ಎಂದು ಸುಳ್ಯ ಆಹಾರ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading