Ad Widget

ಕೂರ್ನಡ್ಕ: ಹೊಳೆಗೆ ಬಿದ್ದು ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಇಂದು ಪತ್ತೆ

ಜು.6 ರಂದು ಆಲೆಟ್ಟಿ ಗ್ರಾಮದ ಕೂರ್ನಡ್ಕ ಎಂಬಲ್ಲಿ ನಾರಾಯಣನ್ ಎಂಬ ವ್ಯಕ್ತಿ ಪಾಲದಿಂದ ಬಿದ್ದು ನಾಪತ್ತೆಯಾಗಿದ್ದರು. ಸುಳ್ಯ ಪ್ರಕೃತಿ ವಿಕೋಪ ತಂಡದಿಂದ ನಿರಂತರ 3 ದಿನಗಳಿಂದ ಕಾರ್ಯಚರಣೆ ನಡೆಸುತ್ತಿದ್ದರು. ಇಂದು ಮಧ್ಯಾಹ್ನ ವೇಳೆಗೆ ಆಲೆಟ್ಟಿ ಗ್ರಾಮದ ನೆಡ್ಚಿಲ್ ಎಂಬಲ್ಲಿ ನಾರಾಯಣ ಅವರ ಮೃತದೇಹ ಸಿಕ್ಕಿದೆ ಎಂದು ತಿಳಿದುಬಂದಿದೆ.

. . . . . . .

ಎಸ್ ಡಿ ಆರ್ ಫ್ , ಪೈಚಾರ್ ಮುಳುಗು ತಜ್ಞರು , ವಿಖಾಯ ತಂಡ , ಅಗ್ನಿಶಾಮಕ ದಳ , ಹಾಗೂ ಕಂದಾಯ ಇಲಾಖಾ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಎಸ್ ಡಿ ಆರ್ ಫ್ ಶೀನ ನಾಯ್ಕ್ , ಕಮಾಡೆಂಟ್ ಶರತ್ ಕುಮಾರ್, ಹೋಂ ಗಾರ್ಡ್ ಪ್ರಭಾಕರ ಪೈ, ಕಂದಾಯ ಅಧಿಕಾರಿಗಳಾದ ತಹಶೀಲ್ದಾರ್ ಮಂಜುನಾಥ್ , ಕಂದಾಯ ನಿರೀಕ್ಷಕರಾದ ಕೊರಗಪ್ಪ ಹೆಗ್ಡೆ , ಗ್ರಾಮ ಆಡಳಿತಾಧಿಕಾರಿ ಶರತ್ , ಗ್ರಾಮ ಸಹಾಯಕರಾದ ನಾರಾಯಣ , ಆಲೆಟ್ಟಿ ಗ್ರಾಮ ನೋಡೆಲ್ ಅಧಿಕಾರಿಗಳಾದ ಪಿ ಡಬ್ಲ್ಯೂಡಿ ಇಂಜಿನಿಯರ್ ಎ ಪಿ ಲೋಕೇಶ್ , ಹಾಗೂ ಪೋಲೀಸ್ ಠಾಣಾಧಿಕಾರಿ ಈರಯ್ಯ ಸಿಬ್ಬಂದಿಗಳಾದ ಪ್ರಕಾಶ್ ಹಾಗೂ ಸ್ಥಳೀಯರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.ಪೈಚಾರ್ ಮುಳುಗು ತಜ್ಞರ ತಂಡದಲ್ಲಿ ಶರೀಫ್ , ಅಬ್ಬಾಸ್ ಹಾಗೂ ಶಿಯಾಬ್ ಇದ್ದರೆ ವಿಖಾಯ ತಂಡದಲ್ಲಿ ತಾಜುದ್ದೀನ್ ಟರ್ಲಿ , ಅಬ್ದುಲ್ ಖಾದರ್ , ತಾಜುದ್ದಿನ್ ಅರಂತೋಡು , ಮುನೀರ್ ಅರಂತೋಡು ಮತ್ತಿತರರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!