ಸುಬ್ರಹ್ಮಣ್ಯ: ಮಕ್ಕಳ ಜ್ಞಾನ ವೃದ್ದಿಗೆ ಆಯುರ್ವೇದಿಕ್ ಮತ್ತು ಔಷಧೀಯ ಗುಣಗಳುಳ್ಳ ಬ್ರಾಹ್ಮಿ ಎಲೆಯ ರಸ ಉತ್ತಮ.ಇದನ್ನು ನಾವೇ ತಯಾರಿಸಿ ಕುಡಿಸಬೇಕು.ಇದರಿಂದ ಮಕ್ಕಳ ಜ್ಞಾನ ವೃದ್ಧಿಯಾಗುತ್ತದೆ.ಅಲ್ಲದೆ ದೇಸಿ ದನದ ಹಳೆಯ ತುಪ್ಪವನ್ನು ಮಕ್ಕಳಿಗೆ ಕೊಡಬಹುದು. ಒಂದೆಲಗ ರಸ ಕೂಡಾ ಜ್ಞಾನವೃದ್ದಿಗೆ ಪೂರಕ.ಇವೆಲ್ಲವೂ ನಮ್ಮ ಹಿರಿಯ ಅನುಸರಿಸಿಕೊಂಡು ಬಂದ ಆಚರಣೆಗಳಾಗಿವೆ ಇವುಗಳನ್ನು ನಾವುಗಳು ಪಾಲಿಸುವುದು ಅತ್ಯಗತ್ಯ. ಪೋಷಕರು ಮಕ್ಕಳ ಜ್ಞಾನ ವೃದ್ದಿಗೆ ಬೇಕಾದ ವ್ಯವಸ್ಥೆಗಳ ಬಗ್ಗೆ ತಿಳಿದುಕೊಂಡು ಮುಂದಡಿಯಿಡಬೇಕು.ಇದರಿAದಾಗಿ ಮಕ್ಕಳಲ್ಲಿ ವಿದ್ಯಾ ಸಂಪತ್ತು ಬೆಳಗಲು ಸಾಧ್ಯ ಎಂದು ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶಿವರಾಮ ರೈ ಹೇಳಿದರು.
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಕ್ಕೊಳಪಟ್ಟ ಎಸ್.ಎಸ್.ಪಿ.ಯು ಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ಏಕತಾನತೆಯ ಮತ್ತು ನಿರ್ಮಲ ಮನಸಿನಿಂದ ಅಧ್ಯಾಯನ ಮಾಡಿದರೆ ಉತ್ತಮ ಅಂಕ ಪಡೆಯಲು ಸಾಧ್ಯವಿದೆ.ಪೋಷಕರು ವಿದ್ಯಾರ್ಥಿಗಳಿಗೆ ಉತ್ತಮ ಜ್ಞಾನ ಸಂಪಾದನೆಗೆ ಬೇಕಾದ ಸ್ಪೂರ್ತಿಯನ್ನು ತುಂಬಬೇಕು ಎಂದರು.
ಅಭಿನಂದನಾ ಬೋರ್ಡ್ ನಿಂದ ಸ್ಪೂರ್ತಿ:
ಕಾಲೇಜಿನ ಮುಂಭಾಗ ವಿಶಿಷ್ಠ ಶ್ರೇಣಿ ಪಡೆದ ವಿದ್ಯಾರ್ಥಿಗಳ ಪೋಟೋ ಇರುವ ಅಭಿನಂದನಾ ಬೋರ್ಡ್ ಅಳವಡಿಸುವುದರಿಂದ ಸಾಧಕ ವಿದ್ಯಾರ್ಥಿಗಳಿಗೆ ಮತ್ತಷ್ಟು ಸಾಧನೆ ಮಾಡಲು ಸ್ಪೂರ್ತಿ ದೊರಕುತ್ತದೆ.ಅದೇ ರೀತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತಾವೂ ಕೂಡಾ ಇದಕ್ಕಿಂತ ಮಿಗಿಲಾದ ಸಾಧನೆ ಮಾಡಿ ಹೆಚ್ಚು ಅಂಕ ಪಡೆಯಬೇಕೆನ್ನುವ ಉತ್ಸಾಹ ಮೂಡುವಂತೆ ಮಾಡುತ್ತದೆ.ಅಲ್ಲದೆ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಸಾರ್ವಜನಿಕರಿಗೆ ದೂರ ದೂರುಗಳಲ್ಲಿ ಇದ್ದು ಕ್ಷೇತ್ರಕ್ಕೆ ಬರುವ ಹಿರಿಯ ವಿದ್ಯಾರ್ಥಿಗಳಿಗೆ ಕಾಲೇಜಿನ ಸಾಧನೆ ತಿಳಿಯಲು ಈ ವ್ಯವಸ್ಥೆ ಅನುಕೂಲವಾಗುತ್ತದೆ.ಈ ವ್ಯವಸ್ಥೆ ಮಾಡಿದ ಪ್ರಾಚಾರ್ಯ ಕಾರ್ಯ ಶ್ಲಾಘನೀಯ ಎಂದು ಶಿವರಾಮ ರೈ ನುಡಿದರು.
ಗೌರವಾರ್ಪಣೆ:
ಸಮಾರಂಭದಲ್ಲಿ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ತರಗತಿಗೆ ಅತ್ಯಧಿಕ ಅಂಕ ಗಳಿಸಿದ ಸಾಧಕರನ್ನು ಮತ್ತು ಸಿಎ ಇಂಟರ್‌ಮೀಡಿಯೆಟ್ ಪರೀಕ್ಷೆ ತೇರ್ಗಡೆಯಾದ ಹಿರಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ವಿಜ್ಞಾನ ವಿಭಾಗದ ನಿಶ್ಮಿತಾ ಕೆ.ವಿ, ಗಣಕ ವಿಜ್ಞಾನದ ದಿವ್ಯಾ ಕೆ.ಎಚ್, ವಾಣಿಜ್ಯ ವಿಭಾಗದ ವಿಶ್ಮಿತಾ.ವಿ, ಕಲಾ ಎ ವಿಭಾಗದ ಸಂಜನಾ ಎನ್.ಎಸ್, ಕಲಾ ಬಿ ವಿಭಾಗದ ಸ್ವಸ್ತಿಕ್ ಡಿ.ಆರ್ ಹಾಗೂ ಸಿಎ ಇಂಟರ್‌ಮೀಡಿಯೇಟ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಹಿರಿಯ ವಿದ್ಯಾರ್ಥಿಗಳಾದ ಗೌತಮಿ ಕೆ.ಎಚ್ ಮತ್ತು ಶಿವಪ್ರಸಾದ್ ಜಿ.ಸಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎನ್.ಎಸ್ ಮುಖ್ಯಅತಿಥಿಗಳಾಗಿದ್ದರು.ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್, ಶಿಕ್ಷಕ ರಕ್ಷಕ ಸಂಘದ ಉಪನ್ಯಾಸಕ ಪ್ರತಿನಿಧಿ ರೇಖಾರಾಣಿ ಸೋಮಶೇಖರ್, ಸಂಘದ ಉಪಾಧ್ಯಕ್ಷ ರಾಜೇಶ್ ಮಾವಿನಕಟ್ಟೆ, ಜತೆ ಕಾರ್ಯದರ್ಶಿ ಶಶಿಧರ್ ಕತ್ತಿಮಜಲು, ಸಂಘದ ಸದಸ್ಯರಾದ ನಳಿನಿ, ಹರೀಶ್ ಗೌಡ, ಪದ್ಮನಾಭ ದೇರಣೆ, ಚಿದಾನಂದ ಕಂದಡ್ಕ, ವೆಂಕಟೇಶ್ ಎಚ್.ಎಲ್, ರವಿ ಒಣಗೂರು ವೇದಿಕೆಯಲ್ಲಿದ್ದರು.
ಕನ್ನಡ ಉಪನ್ಯಾಸಕಿ ಭವ್ಯಶ್ರೀ ಹರೀಶ್ ಕುಲ್ಕುಂದ ದೇವತಾ ಸ್ತುತಿ ಹಾಡಿದರು.ವಾಣಿಜ್ಯಶಾಸ್ತç ಉಪನ್ಯಾಸಕಿ ಜ್ಯೋತಿ.ಪಿ.ರೈ ಸ್ವಾಗತಿಸಿದರು.ವಿದ್ಯಾರ್ಥಿ ಸಂಘದ ಸಂಚಾಲಕ ಜಯಪ್ರಕಾಶ್.ಆರ್ ನೂತನ ಸದಸ್ಯರ ಆಯ್ಕೆ ಪಟ್ಟಿ ವಾಚಿಸಿದರು.ಇತಿಹಾಸ ಉಪನ್ಯಾಸಕ ರತ್ನಾಕರ ಸುಬ್ರಹ್ಮಣ್ಯ ವಂದಿಸಿದರು.ಜೀವಶಾಸ್ತ್ರ ಉಪನ್ಯಾಸಕಿ ಶೃತಿ ಯಾಲದಾಳು ಕಾರ್ಯಕ್ರಮ ನಿರೂಪಿಸಿದರು.ಸಭೆಯಲ್ಲಿ ವಿದ್ಯಾರ್ಥಿಗಳ ಪೋಷಕರು, ಉಪನ್ಯಾಸಕರು, ಬೋಧಕೇತರರು, ರೋರ‍್ಸ್ ಮತ್ತು ರೇಂರ‍್ಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.