2020-21 ನೇ ಸಾಲಿನ ಅಡಿಕೆ ಮತ್ತು ಕಾಳುಮೆಣಸು ಬೆಳೆಗೆ ಸಂಬಂದಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಪ್ರೀಮಿಯಂ ಅನ್ನು ನಮ್ಮ ಸಹಕಾರ ಸಂಘದಲ್ಲಿ ಸ್ವೀಕರಿಸಲು ಆರಂಬಿಸಲಾಗಿದೆ. ಅಡಿಕೆಗೆ ಎಕರೆಗೆ ರೂ 2560/- , ಕಾಳು ಮೆಣಸು ಪ್ರೀಮಿಯಂ ಪ್ರತಿ ಎಕರೆಗೆ 940/-ಪ್ರೀಮಿಯಂ ಪಾವತಿಸಲು ಜೂ.30 ಕೊನೆಯ ದಿನ.ಸದಸ್ಯರು ಸಂಬಂದ ಪಟ್ಟ ಕೃಷಿ ಇರುವ ಪಹಣಿಯ ಸರ್ವೆ ನಂಬರ್ ಮಾಹಿತಿಯನ್ನು ಸಂಘದಿಂದ ನೀಡುವ ಫಾರ್ಮಿನಲ್ಲಿ ಬರ್ತಿ ಮಾಡಿ ನೀಡಬೇಕು. ಕೃಷಿಕ ಬಂಧುಗಳು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಲು ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹರೀಶ್ ಬೂಡುಪನ್ನೆ ತಿಳಿಸಿದ್ದಾರೆ.
- Friday
- November 22nd, 2024