ಸುಳ್ಯ ತಾಲೂಕಿನ ಅತೀ ಹಳೆಯದಾದ ಪರ್ಮಿಟ್ ಹೊಂದಿದ್ದ ಸುಳ್ಯ ಮಂಡೆಕೋಲು ಮಾರ್ಗದಲ್ಲಿ ಚಲಿಸುತ್ತಿದ್ದ ಬಸ್ಸುಗಳು ಧಿಡೀರ್ ಆಗಿ ಸೋಮವಾರ ಮುಂಜಾನೆ ಇನ್ಸ್ ಪೆಕ್ಟರ್ ಇಸ್ಮಾನ್ ನೇತೃತ್ವದಲ್ಲಿ ಸೀಝ್ ಮಾಡಲಾಗಿದೆ ಎಂದು ಪುತ್ತೂರು ಆರ್ ಟಿ ಓ ಅಧಿಕಾರಿಗಳಿಂದ ಅಧಿಕೃತವಾಗಿ ಮಾಹಿತಿ ಲಭ್ಯವಾಗಿದೆ. ಈ ಹಿಂದಿನಿಂದಲೂ ಅಜ್ಜಾವರ ಮಂಡೆಕೋಲು ಅಡೂರು ಗೆ ತೆರಳುತ್ತಿದ್ದ ಕೆಎ-20-ಸಿ-1809 ಖಾಸಗಿ ಬಸ್ಸ್ ಅನಿಲ್ ಛಾತ್ರ ಎಂಬುವವರ ಹೆಸರಿನಲ್ಲಿದ್ದು ಈ ಬಸ್ಸು ಒಂದು ಲಕ್ಷದ ಹನ್ನೆರಡು ಸಾವಿರ ಟ್ಯಾಕ್ಸ್ ಉಳಿಸಿದ್ದು ಇನ್ನೊಂದು ಬಸ್ಸು ಕೆಎ-19-ಸಿ-0329 ಎಂಬ ಸಂಖ್ಯೆಯ ಬಸ್ಸು ಸುಮಾರು ಮೂವತ್ತೋಂಬತ್ತು ಸಾವಿರ ಟ್ಯಾಕ್ಸ್ ಉಳಿಕೆಯಾಗಿದ್ದು ಇವುಗಳಲ್ಲಿ ಒಂದು ಡಿಸೆಂಬರ್ ತಿಂಗಳಿನಲ್ಲಿ ಹಾಗೂ ಇನ್ನೊಂದು ಜನವರಿ ತಿಂಗಳಿನಲ್ಲಿ ಅವಧಿ ಮುಗಿದಿದ್ದು ಈ ಬಸ್ಸುಗಳನ್ನು ಆರ್ ಟಿ ಓ ಅಧಿಕಾರಿಗಳಿಗೆ ದೂರು ಬಂದ ಹಿನ್ನಲೆಯಲ್ಲಿ ಸುಳ್ಯ ಖಾಸಗಿ ಬಸ್ಸು ನಿಲ್ದಾಣದ ಬಳಿಯಲ್ಲಿ ಈ ಎರಡು ಬಸ್ಸುಗಳನ್ನು ಸೀಝ್ ಮಾಡಲಾಗಿದ್ದು ಸೀಝ್ ಆಗಿರುವ ಬಸ್ಸುಗಳು ಚೆನ್ನಕೇಶವ ದೇವಾಲಯದ ಬಳಿಯಲ್ಲಿ ಪೋಲೀಸ್ ಸುಪರ್ದಿಗೆಗೆ ನೀಡಿದ್ದು ಈ ಕುರಿತು ಕಾನೂನು ರೀತಿಯಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಹಾಗೂ ಪರವಾನಿಗೆ ಮಾಲಕರು ನೋಟಿಸ್ ಗೆ ಉತ್ತರಗಳು ಸಲ್ಲಿಸಿದ ಬಳಿಕ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿದುಬಂದಿದ್ದು, ಆರ್ ಟಿ ಓ ಅಧಿಕಾರಿಗಳ ದಾಳಿ ಸಂದರ್ಭದಲ್ಲಿ ಬಸ್ಸಿನ ಚಾಲಕರು ಯಾರ ಬಸ್ಸು ಹಾಗೂ ಬಸ್ಸಿನ ಯಾವುದೇ ಪರವಾನಿಗೆ ಪತ್ರ ನೀಡದೇ ಇರುವ ಹಿನ್ನಲೆಯಲ್ಲಿ ಈ ಬಸ್ಸುಗಳನ್ನು ಸೀಝ್ ಮಾಡಲಾಗಿದೆ ಎಂದು ಅಧಿಕಾರಿಗಳಾದ ವಿಶ್ವನಾಥ್ ಅಜಿಲ , ಹಾಗೂ ದೀಪಕ್ ರವರು ತಿಳಿಸಿದ್ದಾರೆ.
- Friday
- November 1st, 2024