ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಜಿ. ಕೃಷ್ಣಪ್ಪರವರ ವಿರುದ್ಧ ಕಾಂಗ್ರೆಸ್ ಮುಖಂಡರು ದೈವದ ಮೊರೆ ಹೋಗಿದ್ದು ಮತದಾನ ಸಮಯದಲ್ಲಿ ತಾವು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆನ್ನುವ ಆರೋಪದ ಹಿನ್ನಲೆಯಲ್ಲಿ ಉಚ್ಚಾನೆಗೊಂಡ ಕಾಂಗ್ರೆಸ್ ಮುಖಂಡರು ಕೋಡಿಂಬಾಳದ ಪ್ರಸಿದ್ಧ ಮಜ್ಜಾರು ಕ್ಷೇತ್ರಕ್ಕೆ ಆಗಮಿಸಿ ಹರಕೆ ಹೇಳಿದ್ದಾರೆಂದು ತಿಳಿದು ಬಂದಿದೆ. ಕೋಡಿಂಬಾಳದ ಪ್ರಸಿದ್ಧ ಮಜ್ಜಾರು ರಾಜನ್ ದೈವದ ಸನ್ನಿಧಿಯಲ್ಲಿ ಹರಕೆ ಹೇಳಿದ್ದು, ತಮ್ಮನ್ನು ಪಕ್ಷದಿಂದ ಪಕ್ಷ ವಿರೋಧಿ ಎಂಬ ಕಾರಣ ನೀಡಿ ಉಚ್ಛಾಟನೆ ಮಾಡಲಾಗಿದ್ದು ಆದರೆ ನಾವುಗಳು ಯಾವುದೇ ತರಹದ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಜಿ.ಕೃಷ್ಣಪ್ಪ ರವರ ಕುಮ್ಮಕ್ಕಿನಿಂದ ನಮ್ಮನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಹೇಳಿದ್ದಾರೆ.
ಕೃಷ್ಣಪ್ಪ ಅವರು ದೈವಸ್ಥಾನಕ್ಕೆ ಬಂದು ಪ್ರಮಾಣ ಮಾಡಲಿ. ಅವರೇ ಸುಳ್ಯದಲ್ಲಿ ಪಕ್ಷವನ್ನು ಸೋಲಿಸಿ ನಮ್ಮ ಮೇಲೆ ಆಪಾದನೆ ಮಾಡುತ್ತಿದ್ದಾರೆ ನಾವು ಇನ್ನೋರ್ವ. ಆಕಾಂಕ್ಷಿ ಅಭ್ಯರ್ಥಿಯಾಗಿದ್ದ ನಂದಕುಮಾರ್ ಅವರನ್ನು ಬೆಂಬಲಿಸದಿರಲು ಅವರೇನು ಕಾಂಗ್ರೆಸ್ ಪಕ್ಷದ ವ್ಯಕ್ತಿಯಲ್ಲವೇ ಎಂದು ಈ ಸಂದರ್ಭದಲ್ಲಿ ಕೃಷ್ಣಪ್ಪ ವಿರುದ್ದ ವಿಷಾಧ ವ್ಯಕ್ತಪಡಿಸಿದರು.ನಂದಕುಮಾರ್ ರನ್ನು ಬೆಂಬಲಿಸಿದ್ದೇವೆ ಎನ್ನುವ ಕಾರಣದಿಂದ ನಮ್ಮನ್ನು ಪಕ್ಷ ವಿರೋಧಿಗಳು ಎಂದು ಹೇಳಲಾಗುತ್ತಿದ್ದು ಕಡಬ ತಾಲೂಕಿನಲ್ಲಿ ಕಾಂಗ್ರೆಸ್ ಬಲಪಡಿಸಲು ನಾವು ಸತತವಾಗಿ ದುಡಿದಿದ್ದೇವೆ. ಪಕ್ಷಕ್ಕಾಗಿ ನಾವು ಹಗಲಿರುಳೆನ್ನದೆ ಕೆಲಸ ಮಾಡಿದ್ದೇವೆ ಎಂದು ಕಾಂಗ್ರೆಸ್ ಮುಖಂಡರಾದ ಬಾಲಕೃಷ್ಣ ಬಳ್ಳೇರಿ, ಸುಧೀರ್ ದೇವಾಡಿಗ, ಶ್ರೀಮತಿ ಉಷಾ ಅಂಚನ್, ಆಶಾ ಲಕ್ಷ್ಮಣ್ ಎಂಬವವರು ದೈವದ ಮೊರೆ ಹೋಗಿ ದೈವದ ಮುಂದೆ ಕಣ್ಣೀರಿಟ್ಟು ದೇವರ ಮುಂದೆ ಬಂದು ಹೇಳಲಿ ನಾವು ಪಕ್ಷ ವಿರೋಧಿ ಕೆಲಸ ಮಡಿದ್ದೇವೆ ಎಂದು ಅವರು ದೈವದ ಬಳಿಯಲ್ಲಿ ತಮ್ಮ ನೋವನ್ನು ತೋಡಿಕೊಂಡರು.