ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮರ್ವತ್ತಡ್ಕ ಎಂಬಲ್ಲಿ ತ್ಯಾಜ್ಯ ಎಸೆದ ದರ್ಖಾಸ್ತು ನಿವಾಸಿ ತ್ಯಾಗರಾಜು ಎಂಬವರಿಗೆ ರೂ 5000.00 ದಂಡ ವಿಧಿಸಿದ ಘಟನೆ ಜು.3 ರಂದು ನಡೆದಿದೆ.
ಜು.2ರಂದು ಐವರ್ನಾಡು ಗ್ರಾಮ ಪಂಚಾಯತ್ ವತಿಯಿಂದ ನಡೆಯುವ ಮಾಸಿಕ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗ್ರಾಮಸ್ಥರು ಮರ್ವತ್ತಡ್ಕದಲ್ಲಿ ಎಸೆದಿದ್ದ ತ್ಯಾಜ್ಯ ತುಂಬಿದ್ದ ಬ್ಯಾಗ್ ಪರಿಶೀಲಿಸಿ ಎಸೆದವರನ್ನು ಪತ್ತೆಹಚ್ಚಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ಯಾಮ್ ಪ್ರಸಾದ್ ಎಂ ಆರ್ ರವರು ರೂ 5000.00 ದಂಡ ವಿಧಿಸಿ ತ್ಯಾಜ್ಯ ಎಸೆದವರಿಂದಲೇ ತ್ಯಾಜ್ಯವನ್ನು ವಿಲೇವಾರಿಗೊಳಿಸಿದರು.