Ad Widget

ಅಡ್ಕಾರು: ಸಾವಿರಾರು ರೂ. ನಗದು ಕಳ್ಳತನ _ ಪೊಲೀಸ್ ದೂರು ದಾಖಲು

ಜಾಲ್ಸೂರು ಗ್ರಾಮದ ಅಡ್ಕಾರು ಎಂಬಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮನೆಯ ಬೀಗ ಮುರಿದು ಸಾವಿರಾರು ರೂ. ನಗದು ಕಳ್ಳತನ ಮಾಡಿರುವ ಘಟನೆ ಜು.1ರಂದು ನಡೆದಿದೆ. ಈ ಬಗ್ಗೆ ಮನೆ ಮಾಲಕ ಪೊಲೀಸ್ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಅಡ್ಕಾರಿನ ಮಹಮ್ಮದ್ ನಜೀಬ್ ಅವರು ತಮ್ಮ ಹೆಂಡತಿಯ ತವರು ಮನೆಯಾದ ಪುತ್ತೂರಿಗೆ ಜು.1ರಂದು ಸಂಜೆ ಮನೆಗೆ ಬೀಗ ಹಾಕಿ ತೆರಳಿದ್ದರೆನ್ನಲಾಗಿದೆ. ಮರುದಿನ ಜು.2ರಂದು ಬೆಳಿಗ್ಗೆ ಪುತ್ತೂರಿನಿಂದ ಮರಳಿ ಮನೆಗೆ ಬಂದಾಗ ಮನೆಯ ಬಾಗಿಲಿನ ಲಾಕ್ ಮುರಿದಿದ್ದು, ಒಳಗೆ ಹೋಗಿ ನೋಡಿದಾಗ ಮನೆಯ ಕವಾಟಿನಲ್ಲಿ ಇರಿಸಿದ್ದ ಸುಮಾರು ಎಂಭತ್ತು ಸಾವಿರ ರೂ. ನಗದು ಹಾಗೂ ಹಾಗೂ ನಜೀಬ್ ಅವರ ತಾಯಿಯ ಕೋಣೆಯ ಕವಾಟಿನಲ್ಲಿ ಇರಿಸಿದ್ದ ಹದಿನೈದು ಸಾವಿರ ರೂ. ನಗದು ಸೇರಿ ಒಟ್ಟುತೊಂಭತ್ತೈದು ಸಾವಿರ ರೂ. ನಗದು ಹಣ ಕಳವಾಗಿದೆಮನೆಯಲ್ಲಿ ಯಾರೂ ಇಲ್ಲದ ವೇಳೆಗೆ ಕಳ್ಳರ ಗುಂಪು ಮನೆಯ ಬೀಗ ಮುರಿದು ಈ ಕೃತ್ಯ ಎಸಗಿದ್ದು, ಇತ್ತೀಚೆಗಷ್ಟೇ ಅಡ್ಕಾರಿನಲ್ಲಿ ಇನ್ನೆರಡು ಮನೆಗಳಲ್ಲಿ ಕಳ್ಳತನ ಪ್ರಕರಣ ನಡೆದಿತ್ತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading