Ad Widget

ಜು.05: ಸುಳ್ಯ ರೋಟರಿ ಕ್ಲಬ್ ಪದಗ್ರಹಣ ಸಮಾರಂಭ : ಅಧ್ಯಕ್ಷರಾಗಿ ರೊ. ಆನಂದ ಖಂಡಿಗ- ಕಾರ್ಯದರ್ಶಿಯಾಗಿ ಕಸ್ತೂರಿ ಶಂಕರ್ ನಿಸರ್ಗ

ಸುಳ್ಯ ರೋಟರಿ ಕ್ಲಬ್ ನ 2023-24 ನೇ ಸಾಲಿನ ನೂತನ ಅಧ್ಯಕ್ಷರಾಗಿ ರೊ.ಆನಂದ ಖಂಡಿಗ ಆಯ್ಕೆಗೊಂಡಿದ್ದಾರೆ. ಜು.05 ರಂದು ನೂತನ ಸಮಿತಿಯ ಪದಗ್ರಹಣ ಸಮಾರಂಭ ನಡೆಯಲಿದ್ದು ಪದಗ್ರಹಣ ಅಧಿಕಾರಿಯಾಗಿ ರೊ.ನೋನಲ್ ಜಯರಾಜ್ ಭಂಡಾರಿ, ಆಧ್ಯಕ್ಷರು, ರೋಟರಿಕ್ಲಬ್ ಪುತ್ತೂರು ಇವರು ಆಗಮಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ರೊ .ಲಕ್ಷ್ಮೀ ನಾರಾಯಣ ಮಾಜಿ ಡಿಸ್ಟ್ರಿಕ್ಟ್ ಗವರ್ನರ್ ರೋಟರಿ ಜಿಲ್ಲೆ ೩೧೮೦,ಮೈಸೂರು, ಗೌರವ ಅತಿಥಿಗಳಾಗಿ ರೊ. ಪುರಂದರರೈ ಅಸಿಸ್ಟೆಂಟ್ ಗವರ್ನರ್ ಝೋನ್-೫ ಪುತ್ತೂರು ಮತ್ತು ರೊ ನವೀನ್‌ಚಂದ್ರ ನೈಕ ಝೋನಲ್ ಲೆಫ್ಟಿನೆಂಟ್ ಝೋನ್-೫ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಕ್ಲಬ್ ವತಿಯಿಂದ ತಾಲೂಕಿನ ಪ್ರಾಥಮಿಕ ಹಾಗೂ ಅಂಗನವಾಡಿ ಶಾಲೆಗಳಿಗೆ ಕೊಡುಗೆಗಳನ್ನು ನೀಡಲಾಗುವುದು. ೨೦೨೨-೨೩ ರ ಸಾಲಿನಲ್ಲಿ ರೋಟರಿ ಶಾಲೆಯಲ್ಲಿ ಅತುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು. ಪ್ರತಿ ವರ್ಷದಂತೆ ರೋಟರಿ ಜಿಲ್ಲಾ ಯೋಜನೆಗಳಾದ ಸಮುದಾಯ ಸೇವೆ, ವೃತ್ತಿಸೇವೆ, ಹಾಗೂ ಇತರ ಸೇವೆಗಳ ಅಡಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಮುಖ್ಯ ಯೋಜನೆಯಾಗಿ ಶ್ರೀ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವಂತೆ ಶೌಚಾಲಯ ನಿರ್ಮಾಣ ಮಾಡುವುದಾಗಿ ನಮ್ಮ ಬೋರ್ಡ್ ಮೀಟಿಂಗ್‌ನಲ್ಲಿ ನಿರ್ಣಯಿಸಿದ್ದು ಮುಂದೆ ಶ್ರೀ ಚೆನ್ನಕೇಶವ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ನಗರ ಪಂಚಾಯತ್ ಸಹಕಾರದೊಂದಿಗೆ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು. ಹಾಗೂ ಪರಿಸರ ರಕ್ಷಣೆ ವಿಷಯದಲ್ಲಿ ವನಮಹೋತ್ಸವ ಕಾರ್ಯಕ್ರಮ, ಪರಿಣತರಿಂದ ಶಾಲಾ ಮಕ್ಕಳಿಗೆ ಪರಿಸರ ರಕ್ಷಣೆ ಬಗ್ಗೆ ಮಾಹಿತಿ ನೀಡುವುದು, ರಕ್ತದಾನ ಶಿಬಿರ, ಹಾಗೂ ಇನ್ನಿತರ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ನೂತನ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನೂತನ ಕಾರ್ಯದರ್ಶಿಯಾಗಿ ರೊ. ಕಸ್ತೂರಿ ಶಂಕರ್ ನಿಸರ್ಗ, ಖಜಾಂಜಿ ರೊ. ಶ್ರೀಮತಿ ಆಶಿತ ಕೇಶವ್, ಸಾರ್ಜೆಂಟ್ ರೊ.ಮಾಧವ ಬಿ.ಟಿ, ಸಮುದಾಯ ಸೇವೆ ನಿರ್ದೇಶಕರಾಗಿ ರೊ.ಬಾಲಕೃಷ್ಣ ಎಸ್.ಬಿ ಲ್ಯಾಬ್, ಜಿಲ್ಲಾ ಯೋಜನಾ ನಿರ್ದೇಶಕರಾಗಿ ರೊ.ಡಾ.ಶ್ರೀಕೃಷ್ಣ ಬಿ.ಎನ್, ವೃತ್ತಿ ಸೇವೆ ನಿರ್ದೇಶಕರಾಗಿ ರೊ. ಮಧುಸೂದನ್, ಕ್ಲಬ್ ತರಬೇತಿ ಅಧಿಕಾರಿಯಾಗಿ ರೊ.ಸಿ.ಎ ಗಣೇಶ್ ಭಟ್, ಯೂತ್ ಸರ್ವಿಸ್ ನಿರ್ದೇಶಕರಾಗಿ ರೊ. ಡಾ ಪುರುಷೋತ್ತಮ ಕೆ. ಜಿ, ಐಪಿಪಿ ರೊ. ಚಂದ್ರಶೇಖರ್ ಪೇರಾಲು, ಕ್ಲಬ್ ಸೇವೆ ನಿರ್ದೇಶಕರಾಗಿ ರೊ. ಯೋಗಿತಾ ಗೋಪಿನಾಥ್, ರೊಟರಿ ಫೌಂಡೇಶನ್ ನಿರ್ದೇಶಕರಾಗಿ ರೊ. ಪ್ರಭಾಕರನ್ ನಾಯರ್, ಪೋಲಿಯೊ ಪ್ಲಸ್ ನಿರ್ದೇಶಕರಾಗಿ ರೊ. ಸೀತಾರಾಮ ರೈ ಸವಣೂರು, ಅಂತರಾಷ್ಟ್ರೀಯ ಸೇವಾ ನಿರ್ದೇಶಕರಾಗಿ ರೊ.ಸತೀಶ್ ಕೆ. ಜಿ, ಐ. ಟಿ ಮತ್ತು ವೆಬ್ ಸೇವಾ ನಿರ್ದೇಶಕರಾಗಿ ರೊ. ಸನತ್ ಪೆರಿಯಡ್ಕ, ಸದಸ್ಯತ್ವ ಅಭಿವೃಧ್ದಿ ನಿರ್ದೇಶಕರಾಗಿ ರೊ. ಹರಿರಾಯ ಕಾಮತ್ ಉಪಾಧ್ಯಕ್ಷರಾಗಿ ರೊ. ಡಾ.ರಾಮಮೋಹನ್ ಕೆ. ಎನ್., ರವರು, ಕಾರ್ಯ ನಿರ್ವಹಿಸಲಿದ್ದಾರೆ.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!