Ad Widget

ಮಳೆಗಾಲ ಎಂಬುದು ಪ್ರಕೃತಿಗೆ ಮೆರುಗು

ಮಳೆಗಾಲವೆಂದರೆ ಯಾರಿಗೆ ಇಷ್ಟವಿಲ್ಲವೆಂದು ಹೇಳಲು ಸಾಧ್ಯವಿಲ್ಲದ ಮಾತು. ಪ್ರಕೃತಿಗೆ ಹೊಸ ಹುರುಪು ತನವನ್ನು ತಂಪನ್ನು ಇಳಿಸಿ ಇಂಪನ್ನು ನೀಡುವುದು. ಕಪ್ಪೆರಾಯನು ಕೂಗು ಬಾನಿಗೆ ಕಂಪಿಸುವಂತೆ ಮಳೆ ಬರಲು…ಆಹಾ..! ಆಹಾ..! ಪ್ರಕೃತಿಯು ಹಸಿರು ತನವನ್ನು ನೋಡಲು ಬಹುಚಂದ. ಈ ಮಳೆಯ ಬಗ್ಗೆ ಎಷ್ಟು ವರ್ಣಿಸಿದರು ಸಾಲದು ನಾನಂತು ಇಷ್ಟಪಡುವೆ….!ಈ ಭೂಮಿಯ ಮೇಲೆ ಎಲ್ಲವೂ ಮಳೆಯನ್ನು ಅವಲಂಬಿತವಾಗಿದೆ. ತುಂಬಾ ದಿನದಿಂದ ಸುಡು ಸುಡು ಬಿಸಿಲ ಬೇಗೆಯಿಂದ ಉರಿಯುತ್ತಿದ್ದ ನೆಲವು ಒಂದು ಹನಿವು ಬಿದ್ದಾಗ ತನಗಿನ್ನೂ ತಂಪು ಎಂದು ಕೂಗುತ್ತದೆ. ” ಹಸಿರಿಲ್ಲದೆ ಉಸಿರಿಲ್ಲ , ಮಳೆಯಿಲ್ಲದೆ ಬೇಳೆಯಿಲ್ಲ ” ಎಂಬ ಮಾತಿನಂತೆ ಮಳೆ ಬಂದರೆ ಉಳುವವನೇ ಭೂಮಿಯ ಒಡೆಯ ರೈತನ ದಿನನಿತ್ಯದ ಕಾಯಕವು ಆತನಿಗೆ ನೆಮ್ಮದಿಯಿಂದ ಮಾಡಲು ಬಹುಸುಲಭ. ಜೋರಾದ ಮಳೆಯ ಇಳೆಗೆ ಬರುವಾಗ ಒಂದು ಕೈಯಲ್ಲಿ ಒಂದು ಎಲೆ ಅಡಿಕೆ. ಒಂದು ಚಾ ಇದ್ದರೆ ಅರೇ ಅರೆ ವಾ…ಅದೇ ಸ್ವರ್ಗ ಎನಿಸುತ್ತದೆ..ಮಳೆಗಾಲದ ಪ್ರಾರಂಭದಲ್ಲೇ ಚಿಣ್ಣರ ಕಲರವ ಶುರು ಹಾಗೂ ಶಾಲಾ ಕಾಲೇಜ್ ಗಳು ಬಾಗಿಲು ತೆರೆಯುತ್ತವೆ. ಎಲ್ಲಿಯೋ ಮೂಲೆ ಸೇರಿದ ಹಿಂದಿನ ವರ್ಷದ ಬಣ್ಣ ಬಣ್ಣದ ಕೊಡೆಯನ್ನು ಬಿಡಿಸಿ ಹೋಗುವ ಖುಷಿ ಬೇರೆ. ಅದಲ್ಲದೆ ಮಳೆ ಜೋರಾಗಿ ಬರಲಿ ಎಂದು ಹೇಳುವ ಮಕ್ಕಳು ರಜೆಗಾಗಿ ಪರಿತಪಿಸುವ ಸಂದರ್ಭ. ವಿದ್ಯಾರ್ಥಿಗಳ ಪಾಲಿಗೆ ಮಳೆರಾಯನೇ ದೇವರು ಎಂಬಂತೆ. ಆಗ ರಜೆಯು ಖುಷಿ ನೀಡುತ್ತಿತ್ತು ಮನೆಯವರ ಸಹಾಯದಿಂದ ಕಾಗದದ ದೋಣಿಯನ್ನು ಮಾಡಿ ಮನೆಯ ಅಂಗಳದಲ್ಲಿ ಬಿಡುತ್ತಿದ್ದ ಮಜಾವೇ ಖುಷಿ ಎನಿಸುತ್ತಿತ್ತು.ಆದರೆ ಈಗ ಕಾಲ ಬದಲಾಗಿದೆ ಮನುಜನ ಹೇಯ ಕೃತ್ಯದಿಂದ ಪ್ರಕೃತಿ ಮಾತೆಯು ಮುನಿಸಿಕೊಂಡು ಕಾಲ ಕಾಲಕ್ಕೆ ಮಳೆ ಬೇಳೆಯಿಲ್ಲದೆ ಒಮ್ಮೆ ಅತಿವೃಷ್ಟಿ ಇನ್ನೊಮ್ಮೆ..! ಅನಾವೃಷ್ಟಿ. ಹೀಗೆ ಮನುಜ ಮಾಡುವ ತಪ್ಪುಗಳನ್ನು ಕ್ಷಮಿಸಿ ಬಿಡು ದೇವಾ..ಕಾಲ ಕಾಲಕ್ಕೆ ಮಳೆಯನ್ನು ಬರುವಂತೆ ಮಾಡಿ ನಿಸರ್ಗವನ್ನು ಪಚ್ಚ ಹಸುರು ಹಾಸಿಗೆಯಂತೆ ಕಂಗೋಳಿಸುವಂತೆ ಮಾಡು ಮಾತೆ….

. . . . .

ಕಿಶನ್ ಎಂ ಪವಿತ್ರನಿಲಯ ಪೆರುವಾಜೆ ✍️..

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!