Ad Widget

ಸುಳ್ಯದಲ್ಲಿ ಎಸ್.ಡಿ.ಪಿ.ಐ ಸಂಸ್ಥಾಪನಾ ದಿನಾಚರಣೆ


ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಇದರ 12 ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಸುಳ್ಯ ವಿಧಾನ ಸಭೆ ಸಮಿತಿ ವತಿಯಿಂದ ಸುಳ್ಯ ಗಾಂಧಿನಗರ ಪಕ್ಷದ ಕಛೇರಿಯ ಮುಂಭಾಗದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಎಸ್.ಡಿ.ಪಿ.ಐ ಸುಳ್ಯ ವಿಧಾನ ಸಭೆ ಸಮಿತಿ ಅಧ್ಯಕ್ಷ ಅಬ್ದುಲ್ ಕಲಾಂ ಸುಳ್ಯ ಧ್ವಜಾರೋಹಣ ನೆರವೇರಿಸಿದರು. ನಂತರ ಇತ್ತೀಚೆಗೆ ಭಾರತದ ಗಡಿಯಲ್ಲಿ ನಡೆಸಿದ ಚೀನಾದ ಕಿರಾತ ಘಟನೆಯನ್ನು ಖಂಡಿಸಿ ಹುತಾತ್ಮರಾದ ದೇಶದ ವೀರ ಯೋಧರಿಗೆ ಸಂತಾಪ ಸೂಚಿಸಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಅಬ್ದುಲ್ ಕಲಾಂ ಸುಳ್ಯ ಹಾಗೂ ಕಾರ್ಯದರ್ಶಿ ಮುಸ್ತಫಾ ಎಂ. ಕೆ ಅವರು ಸಂದೇಶ ಭಾಷಣ ಮಾಡಿದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸುಳ್ಯ ಡಿವಿಝನ್ ಅಧ್ಯಕ್ಷ ಫೈಝಲ್ ಬೆಳ್ಳಾರೆ, ಪಕ್ಷದ ನಗರಾಧ್ಯಕ್ಷ ಇಕ್ಬಾಲ್ , SDAU ಸುಳ್ಯ ತಾಲೂಕು ಅಧ್ಯಕ್ಷ ಶಾಫಿ ಎಂ. ಆರ್ SDTU ತಾಲೂಕು ಕಾರ್ಯದರ್ಶಿ ಕಬೀರ್ ಮಡಿಕೇರಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. ನಗರ ಸಮಿತಿ ಕಾರ್ಯದರ್ಶಿ ಮುಸ್ತಫ ಚೆಂಗಳ ಸ್ವಾಗತಿಸಿ ವಂದಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!