ಬೆಳ್ಳಾರೆ: ಇಲ್ಲಿನ ಹಿದಾಯತುಲ್ ಇಸ್ಲಾಂ ಮದರಸ, ಝಖರಿಯ್ಯಾ ಜುಮಾ ಮಸ್ಜಿದ್ ಬೆಳ್ಳಾರೆ ವತಿಯಿಂದ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಮದರಸ ಮುಖ್ಯೋಪಾಧ್ಯಾಯರಾದ ಬಹು ಮುಹಮ್ಮದ್ ಮುಸ್ಲಿಯಾರ್ ಧ್ವಜಾರೋಹಣ ನೆರವೇರಿಸಿ ಪ್ರಜಾಪ್ರಭುತ್ವ ಮತ್ತು ಸಂವಿಧಾನ ದ ಕುರಿತು ಮಾತನಾಡಿದರು. ನಂತರ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ಬಹು.ಝೈನುದ್ದೀನ್ ಮುಸ್ಲಿಯಾರ್, ಬಹು.ಹಸೈನಾರ್ ಮುಸ್ಲಿಯಾರ್, ಬಹು.ಶಮೀಮ್ ಹುದವಿ, ಝಖರಿಯ್ಯಾ ಜುಮಾ ಮಸೀದಿ ಆಡಳಿತಾಧಿಕಾರಿ ಸಹಾಯಕರು ಗಳಾದ ಅತಾವುಲ್ಲಾ, ಆಶೀರ್ ಎ,ಬಿ ಹಾಗೂ ಜಮಾಅತರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
- Friday
- November 1st, 2024