Ad Widget

ಕನಕಮಜಲು: ಯುವಕ ಮಂಡಲದ ವತಿಯಿಂದ ಉಚಿತ ಹಲಸಿನ ಹಣ್ಣು ವಿತರಣೆ


ಕನಕಮಜಲಿನಲ್ಲಿ ಯುವಜನ ವಿಕಾಸ ಕೇಂದ್ರ ಕನಕಮಜಲು ಇದರ ವತಿಯಿಂದ ರಾಜ್ಯ ಹೆದ್ದಾರಿ ಬದಿಯಲ್ಲಿ ಉಚಿತ ಹಲಸಿನಹಣ್ಣು ವಿತರಣಾ ಕಾರ್ಯ ಇಂದು ನಡೆಯುತ್ತಿದೆ. ಗ್ರಾಮಾಂತರ ಭಾಗಗಳಲ್ಲಿ ಯಥೇಚ್ಛವಾಗಿ ಬೆಳೆಯುತ್ತಿರುವ ಹಲಸಿನ ಹಣ್ಣು ಮಳೆಗಾಲ ಆರಂಭವಾದಂತೆ ಒಂದೇ ಬಾರಿಗೆ ಹಣ್ಣಾಗಿ ಕೊಳೆತು ಹಾಳಾಗಿ ಹೋಗುತ್ತಿದೆ. ಇದನ್ನು ಮನಗಂಡ ಕನಕಮಜಲು ಯುವಕ ಮಂಡಲದವರು ಹಲಸಿನ ಹಣ್ಣುಗಳನ್ನು ಸಂಗ್ರಹಿಸಿ ಕನಕಮಜಲಿನ ಆನೆಗುಂಡಿ ಎಂಬಲ್ಲಿ ಮತ್ತು ಕನಕಮಜಲು ಗ್ರಾಮ ಪಂಚಾಯತಿ ಎದುರು ಹೆದ್ದಾರಿಯಲಿ ಸಂಚರಿಸುವವರಿಗೆ ಮತ್ತು ಅಗತ್ಯವಿರುವ ಇತರರಿಗೆ ಉಚಿತವಾಗಿ ಹಂಚುತ್ತಿದ್ದಾರೆ.
ಈ ಸಂದರ್ಭದಲ್ಲಿ ಕನಕಮಜಲು ಗ್ರಾ. ಪಂ. ಉಪಾಧ್ಯಕ್ಷರಾದ ಶ್ರೀಧರ ಕುತ್ಯಾಳ, ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀಮತಿ ಸರೋಜಿನಿ, ಯುವಕ ಮಂಡಲದ ಅಧ್ಯಕ್ಷ ರಾದ ಜಯಪ್ರಸಾದ್ ಕಾರಿಂಜ ಕಾರ್ಯದರ್ಶಿಯಾದ ಬಾಲಚಂದ್ರ ನೆಡಿಲು, ಹಾಗೂ ಯುವಕ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading