ಮರ್ಕಂಜ ಸರಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಅಚ್ಯುತ.ಪಿ ರವರು ಡಿ.31ರಂದು ತಮ್ಮ ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ.
ಶ್ರೀ ಅಚ್ಯುತ.ಪಿ ರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ.ಶಾಲೆ ಬಂಗ್ಲೆಗುಡ್ಡೆ ಕೊಲ್ಲಮೊಗ್ರ, ಪ್ರೌಢ ಶಿಕ್ಷಣವನ್ನು ಸರಕಾರಿ ಪ್ರೌಢ ಶಾಲೆ ಗುತ್ತಿಗಾರಿನಲ್ಲಿ ಪಡೆದು, ಪಿ. ಯು. ಶಿಕ್ಷಣವನ್ನು ಎಸ್.ಎಸ್ ಪಿ.ಯು. ಕಾಲೇಜು ಸುಬ್ರಹ್ಮಣ್ಯದಲ್ಲಿ ಪೂರೈಸಿರುತ್ತಾರೆ. ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆಯಲ್ಲಿ ವಿಜ್ಞಾನ ಪದವಿಯನ್ನು ಪಡೆದ ಅವರು, ಬಿ.ಎಡ್ ಪದವಿಯನ್ನು ಸಿ ಇ ಟಿ ಮಂಗಳೂರಿನಲ್ಲಿ ಪಡೆದರು. 1988ರ ಜೂನ್‌ನಲ್ಲಿ ಗುತ್ತಿಗಾರು ಪ್ರೌಢಶಾಲೆಯಲ್ಲಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ ಅಚ್ಯುತರವರು 8-03-1988ರಿಂದ 17-03- 1996ರವರೆಗೆ ನೆ.ಸ್ಮಾ.ಪ.ಕಾ.ಅರಂತೋಡು ಇಲ್ಲಿ ಹಾಗೂ 1996 ರಿಂದ 26 ವರ್ಷಗಳ ಕಾಲ ಮರ್ಕಂಜ ಪ್ರೌಢಶಾಲೆಯಲ್ಲಿ ಸಹಶಿಕ್ಷಕರಾಗಿ, ಪ್ರಭಾರ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಇವರು ಒಟ್ಟು 34 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 2010-11 ರಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದುಕೊಂಡಿದ್ದರು. ಪುತ್ರಿ ಶ್ರೀಮತಿ ಅಮಿತಾ ಮಹೇಶ್ ಪಿ. ಟಿಸಿಎಸ್ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಅಳಿಯ ಮಹೇಶ್ ಕೂಡ ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿದ್ದಾರೆ. ಪುತ್ರ ಡಾ. ನಿಶಾಂತ ಪಿ. ಬೆಂಗಳೂರಿನಲ್ಲಿ ಜನರಲ್ ಮೆಡಿಸಿನ್ ನಲ್ಲಿ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಅಧ್ಯಯನ ನಡೆಸುತ್ತಿದ್ದಾರೆ.
ಇವರು ಪಾತಿಕಲ್ಲು ದಿ.ಚೆನ್ನಪ್ಪ ಗೌಡ ಮತ್ತು ಯಮುನಾ ಪಾತಿಕಲ್ಲು ದಂಪತಿಯ ಪುತ್ರ. ಅಚ್ಯುತರವರ ಪತ್ನಿ ಶ್ರೀಮತಿ ಪುಷ್ಪಾವತಿ ಗೃಹಿಣಿಯಾಗಿದ್ದಾರೆ.