Ad Widget

ನಿನಾದ ಸಾಂಸ್ಕೃತಿಕ ಕೇಂದ್ರದಿಂದ ಕಲಾವಿದರ ತಂಡ ರಚನೆಗಾಗಿ ಆಸಕ್ತ ಉದಯೋನ್ಮುಖ ಕಲಾವಿದರಿಗೆ ಆಹ್ವಾನ

ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ ಕಳಂಜ ಕಳೆದ ನಾಲ್ಕು ವರ್ಷಗಳಲ್ಲಿ ವಿವಿಧ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆಯೋಜಿಸುತ್ತಿದ್ದು, ಇದೀಗ ನಿನಾದ ತನ್ನದೇ ಆದ ಕಲಾವಿದರ ತಂಡ ರಚನೆಗಾಗಿ ಸುಳ್ಯ, ಪುತ್ತೂರು ಹಾಗೂ ಕಡಬ ಪರಿಸರದ ಉದಯೋನ್ಮುಖ ಹಾಗೂ ನುರಿತ ಕಲಾವಿದರನ್ನು ಒಗ್ಗೂಡಿಸಿ ವಿವಿಧ ತಂಡಗಳನ್ನು ರಚಿಸಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹಲವು ಪ್ರದರ್ಶನಗಳನ್ನು ನೀಡುವ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ಸಂಗೀತ, ನೃತ್ಯ, ನಾಟಕ, ಹಾಡು ಮತ್ತು ಯಕ್ಷಗಾನಗಳಲ್ಲಿ ಆಸಕ್ತಿ ಹೊಂದಿರುವವರು ಜ.01 ಆದಿತ್ಯವಾರದಂದು ಮಧ್ಯಾಹ್ನ 2.00ರಿಂದ 2.45ರ ವರೆಗೆ ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ ಇಲ್ಲಿಗೆ ಬಂದು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಹಾಗೂ ತಮ್ಮ ಬರುವಿಕೆಯನ್ನು ವಾಟ್ಸಾಪ್ ಮೂಲಕ ತಿಳಿಸುವಂತೆ ನಿನಾದ ಸಾಂಸ್ಕೃತಿಕ ಕೇಂದ್ರದ ವಸಂತ ಶೆಟ್ಟಿ ಬೆಳ್ಳಾರೆಯವರು ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ವಸಂತ ಶೆಟ್ಟಿ ಬೆಳ್ಳಾರೆ ಮೊಬೈಲ್‌ ಸಂಖ್ಯೆ 9958697823 ಹಾಗೂ ಪ್ರಮೋದ್ ಕುಮಾರ್ ರೈ ಮೊಬೈಲ್‌ ಸಂಖ್ಯೆ 9448625463 ಸಂಪರ್ಕಿಸುವಂತೆ ತಿಳಿಸಲಾಗಿದೆ. ಬಳಿಕ ಮಧ್ಯಾಹ್ನ 3.00ರಿಂದ ಖ್ಯಾತ ಗಾಯಕ ಹಾಗೂ ನಿರ್ದೇಶಕ ಶ್ರೀ ರಾಜಗುರು ಹೊಸಕೋಟೆ ಹಾಗೂ ರಂಗ ನಿರ್ದೇಶಕಿ ಶ್ರೀಮತಿ ನಯನಸೂಡ ಅವರ ಜೊತೆಗೆ “ಪರಸ್ಪರ” ಕಾರ್ಯಕ್ರಮ ನಡೆಯಲಿದೆ. ಸಂಜೆ 4.00ರಿಂದ 5.00ರ ವರೆಗೆ ಶ್ರೀ ರಾಜಗುರು ಮತ್ತು ತಂಡದಿಂದ “ರಂಗಗೀತೆ” ನಡೆಯಲಿದೆ. ಆ ಬಳಿಕ ಸಂಜೆ 5.30ರಿಂದ “ಬಾಬು ಮಾಸ್ಟರ್ ನೆನಪು” ಕಾರ್ಯಕ್ರಮ ಹಾಗೂ 6.30 ರಿಂದ ಸತೀಶ್ ಶೆಟ್ಟಿ ಪಟ್ಲ ನೇತೃತ್ವದ ಪಾವಂಜೆ ಮೇಳದವರಿಂದ “ನಾಗಸಂಜೀವನ” ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಲಾಸಕ್ತರು ಉಪಸ್ಥಿತರಿರುವಂತೆ ಸಂಘಟಕರು ವಿನಂತಿಸಿದ್ದಾರೆ.

. . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!