ಕಳಂಜ ಗ್ರಾಮದ ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿಯಲ್ಲಿ ಜ.01ರಂದು ತಂಟೆಪ್ಪಾಡಿ ಶಾಲೆಯಲ್ಲಿ 12 ವರ್ಷ ಸೇವೆ ಸಲ್ಲಿಸಿರುವ ಪ್ರಸಿದ್ಧ ಚೆಂಡೆ ವಾದಕರಾಗಿದ್ದ ಬಾಬು ಮಾಸ್ಟರ್ ರವರನ್ನು ನೆನಪಿಸುವ ಸಲುವಾಗಿ “ಬಾಬು ಮಾಸ್ಟರ್ ನೆನಪು” ಕಾರ್ಯಕ್ರಮ ಹಾಗೂ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಮೇಳದವರಿಂದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ ಯಕ್ಷಗಾನ ಬಯಲಾಟ ನಾಗ ಸಂಜೀವನ ನಡೆಯಲಿದೆ.
ಸಭಾ ಕಾರ್ಯಕ್ರಮವು ಸಂಜೆ ಗಂಟೆ 5.30ಕ್ಕೆ ನಡೆಯಲಿದ್ದು, “ಬಾಬು ಮಾಸ್ಟರ್ ನೆನಪು” ಕಾರ್ಯಕ್ರಮದ ಸಂಸ್ಮರಣಾ ಭಾಷಣವನ್ನು ಶ್ರೀ ಟಿ.ವಾಸುದೇವ ಆಚಾರ್ ಕಿಲಂಗೋಡಿ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಲಿಂಗಪ್ಪ ಗೌಡ ತಂಟೆಪ್ಪಾಡಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಪಟ್ಲ ಸತೀಶ್ ಶೆಟ್ಟಿ, ನಿವೃತ್ತ ಉಪನ್ಯಾಸಕರಾದ ಶ್ರೀ ಅನಂತ ಪದ್ಮನಾಭ ಗೋಪಾಲಕಜೆ, ಗೌರವ ಉಪಸ್ಥಿತಿಯಲ್ಲಿ ಕಳಂಜ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಪ್ರಶಾಂತ್ ಕುಮಾರ್ ಕಿಲಂಗೋಡಿ ಇರಲಿದ್ದಾರೆ. ಸಂಜೆ ಗಂಟೆ 6.30ರಿಂದ ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ಪಾವಂಜೆ ಮೇಳದವರಿಂದ ನಾಗ ಸಂಜೀವನ ಯಕ್ಷಗಾನ ಬಯಲಾಟ ನಡೆಯಲಿದೆ.
- Thursday
- November 21st, 2024