ಮಂತ್ರ ಶ್ಲೋಕವಿಲ್ಲದೆ ಪೂಜಾ ವಿಧಾನಗಳು ಅಪೂರ್ಣವಾಗುವುದಾದರೆ ಸಂಧಿ ಪಾಡ್ದನವಿಲ್ಲದೆ ನೇಮ ಕೋಲಗಳು ಅಪೂರ್ಣವಾಗುವುದಿಲ್ಲವೇ ?? ಹೀಗೊಂದು ಪ್ರಶ್ನೆ ….. ತುಳುನಾಡಿನಲ್ಲಿ ದೈವರಾಧನೆಗೆ ಅತ್ಯಂತ ಪೂಜ್ಯನೀಯ ಸ್ಥಾನಮಾನ ಇದೆ. ದೈವರಾಧನೆಯು ತುಳುನಾಡಿನಲ್ಲಿ ಪ್ರತಿಯೊಬ್ಬರು ಆರಾಧಿಸಿಕೊಂಡು ಬರುತ್ತಿರುವ ಶಕ್ತಿಗಳಾಗಿದ್ದು , ತನ್ನದೆ ಆದ ಕಟ್ಟುಪಾಡುಗಳನ್ನು ಹೊಂದಿದೆ. ದೇವರ ವೈದಿಕ ಪೂಜಾ ವಿಧಾನಗಳಲ್ಲಿ ಮಂತ್ರ ಶ್ಲೋಕಗಳು ಎಷ್ಟು ಮುಖ್ಯವೊ ,ದೈವದ ಕಲದಲ್ಲಿ ಸಂಧಿ ಪಾಡ್ದನಗಳಿಗೆ ಅಷ್ಟೇ ಪ್ರಾಮುಖ್ಯತೆ ಇದೆ. ಒಂದು ದೈವದ ಕೋಲ ನೇಮ ನಡೆಯುವ ಜಾಗದಲ್ಲಿ ಭಯ ಭಕ್ತಿಯ ವಾತಾವರಣ ಪಸರಿಸ ಬೇಕಾದರೆ ಸಂಧಿ ಪಾಡ್ದನಗಳು ಮತ್ತು ಅಲ್ಲಿ ನಡೆಯುವ ಬೇರೆ ಬೇರೆ ಪ್ರಕ್ರಿಯೆಗಳು ಪ್ರಮುಖ ಪಾತ್ರ ವಹಿಸುತ್ತದೆ. ತುಳುನಾಡಿನಲ್ಲಿ ಆರಾಧಿಸಿಕೊಂಡು ಬರುತ್ತಿರುವ ಪ್ರತಿಯೊಂದು ದೈವಗಳಿಗೂ ಅದರದ್ದೇ ಆದ ಇತಿಹಾಸ, ಚರಿತ್ರೆಗಳು ಇವೆ. ಇಂತಹ ಚರಿತ್ರೆಗಳೆ ಸಂಧಿ ಪಾಡ್ದನ ಕನ್ನಡದಲ್ಲಿ ಮಹಾಕಾವ್ಯ. ಯಾವುದೆ ಪೂಜಾ ವಿಧಿ ವಿಧಾನಗಳಲ್ಲಿ ಸರಿಯಾದ ಮಂತ್ರ ಶ್ಲೋಕವಿದ್ದರೆ ಮಾತ್ರ ಪರಿಪೂರ್ಣ. ಹಾಗೆನೆ ದೈವರಾಧನೆ ಕೂಡ. ದೈವದ ಕಲದಲ್ಲಿ ಸಂಧಿ ಪಾಡ್ದನ ಹೇಳಲೇ ಬೇಕು. ಇದು ಯಾವುದು ಇಲ್ಲದೆ ಪರಿಪೂರ್ಣ ಆಗಲು ಸಾಧ್ಯವೇ ಇಲ್ಲ. ಇದು ಇಲ್ಲದೆ ಒಬ್ಬ ನರ್ತಕನಿಗೆ ದೈವದ ಆವಾಹನೆ ಆಗುವುದು ( ಪರಕಾಯ ಪ್ರವೇಶ) ಹೇಗೆ ಎಂಬುವುದು ಯಕ್ಷ ಪ್ರಶ್ನೆ…!!??
ಕೆಲವು ಕಡೆ ಸಂಧಿ ಪಾಡ್ದನಗಳಲ್ಲಿ ಪ್ರಾದೇಶಿಕವಾಗಿ ಭಿನ್ನತೆ ಇರುವುದು ಸಹಜವಾದರೂ ಅದು ದೈವ ನರ್ತಕರಿಗೆ ಪರಂಪರೆಯಿಂದ ತಿಳಿದುಬರುತ್ತದೆ. ಹಿಂದಿನ ಕಾಲದಲ್ಲಿ ದೈವದ ಹಿಂದೆ ಅವರ ಹಿರಿಯರು ತಂಬರೆ ಬಡಿಯುತ್ತಾ ಸಂಧಿ ಪಾಡ್ದನ ಹೇಳುತ್ತಿದ್ದರು. ಆದರೆ ಈವಾಗ ಹಿರಿಯರು ಇಲ್ಲ ಕಿರಿಯರು ಕಲಿತಿಲ್ಲ ( ಎಲ್ಲರೂ ಅಲ್ಲ ) ಕೆಲವು ದೈವನರ್ತಕರು ಮೂಲ ಸಂಪ್ರದಾಯವನ್ನು ಈಗಲೂ ಮುಂದುವರೆಸಿಕೊಂಡು ಹೋಗುತ್ತಿರುವುದು ಪ್ರಶಂಸನೀಯ. ಇನ್ನೂ ಕೆಲವು ಕಡೆ ದೈವರಾಧಕರೆ ನೇಮ ಮಾಡಿಸುವಾಗ ಇಂತಿಷ್ಟು ಸಮಯದಲ್ಲಿ ಮುಗಿಸಬೇಕೆಂಬ ಕಟ್ಟಪ್ಪಣೆ ಮಾಡಿರುತ್ತಾರೆ. ಅಂತಹ ಸಂದರ್ಭದಲ್ಲಿ ಸಂಧಿ ಪಾಡ್ದನ ಹೇಳದೆ ಇರುವುದು ಕೂಡ ಇದೆ. ಆದುದರಿಂದ ದೈವ ನರ್ತಕರು ಅಥವಾ ದೈವ ಚಾಕರಿಮಾಡುವವರು ಅವರು ಕಟ್ಟುವ ದೈವದ ಬಗ್ಗೆ ಮತ್ತು ಆ ಊರಿನ ಕಟ್ಟುಕ್ರಮದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡಿರುವುದು ಅವಶ್ಯಕವಾಗಿದೆ.
*ನನ್ನ* *ಪ್ರಕಾರ* *ದೈವರಾಧಕರು* *ಕಷ್ಟ* *ಪಟ್ಟು* *ಮಾಡಿಸಿದ* *ನೇಮ* / *ಕೋಲ* *ಅಥವಾ* *ದೈವ* *ನರ್ತಕರು* *ಕಟ್ಟಿದ* *ಕೋಲ* / *ನೇಮ* *ಪರಿಪೂರ್ಣವಾಗಬೇಕಾದರೆ* *ಸಂಧಿ* *ಪಾಡ್ದನವೂ* *ಕೂಡ* *ಅತಿ* *ಮುಖ್ಯವೆನಿಸಿಕೊಳ್ಳುತ್ತದೆ* .
✍️ಭಾಸ್ಕರ ಗೌಡ ಜೋಗಿಬೆಟ್ಟು…