Ad Widget

ಕಾಯಕಲ್ಪಕ್ಕೆ ಕಾಯುತ್ತಿದೆ ಸರಕಾರಿ ಆಸ್ಪತ್ರೆಯ ರಸ್ತೆ

. . . . . .

ಸುಳ್ಯದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಿನಂಪ್ರತಿ ನೂರಾರು ರೋಗಿಗಳು ಭೇಟಿ ನೀಡುತ್ತಾರೆ. ಎಲ್ಲರಿಗೂ ಚಿಕಿತ್ಸೆ ನೀಡುವ ಈ ಆಸ್ಪತ್ರೆಯ ರಸ್ತೆಗೆ ಯಾರೂ ಚಿಕಿತ್ಸೆ ನೀಡುವವರಿಲ್ಲ ಎಂಬುದು ಖೇದಕರ ಸಂಗತಿ.

ಹಲವು ವರ್ಷಗಳಿಂದ ಈ ಆಸ್ಪತ್ರೆಗೆ ತೆರಳುವ ರಸ್ತೆ ನಾದುರಸ್ತಿಯಲ್ಲಿದೆ. ಹಲವು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅಟೋ ರಿಕ್ಷಾ, ಕಾರು, ಅಂಬ್ಯುಲೆನ್ಸ್ ಗಳು ಈ ರಸ್ತೆಯನ್ನೇರಿ ಆಸ್ಪತ್ರೆಗೆ ರೋಗಿಗಳನ್ನು ದಾಖಲಿಸಲು ಹರಸಾಹಸ ಪಡಬೇಕಿದೆ. ಅಂತಹ‌ ಗುಂಡಿಗಳು ಕೇವಲ 50 ಮೀಟರ್ ನಲ್ಲಿ ಬಿದ್ದಿವೆ.

ಸುಳ್ಯ ನಗರಕ್ಕೆ ಭೇಟಿ ‌ನೀಡುವ ಬಹುತೇಕ ನಾಗರಿಕರಿಗೆ ಈ ರಸ್ತೆಯ ಪರಿಚಯವಿದೆ. ಜನಪ್ರತಿನಿಧಿಗಳೂ ಈ ಸಮಸ್ಯೆಯನ್ನು ಗಮನಿಸಿದ್ದಾರೆ. ಆದರೆ ಯಾರೊಬ್ಬರೂ ಈ ಕುರಿತಂತೆ ಗಮನ ಹರಿಸದಿರುವುದು ದುರದೃಷ್ಟಕರ.

ಜನಸಾಮಾನ್ಯರಿಗೆ ದೊಡ್ಡ ಆಸ್ಪತ್ರೆಗಳಿಗೆ ದುಡ್ಡು ಕೊಟ್ಟು ಹೋಗವುದು ಕಷ್ಟ. ಸರ್ಕಾರಿ ಆಸ್ಪತ್ರೆಯನ್ನು ಸುಸಜ್ಜಿತಗೊಳಿಸಲಾಗಿದೆ. ಅಸ್ಪತ್ರೆಗೆ ಪೂರಕವಾಗಿರುವ ಈ ರಸ್ತೆಯನ್ನು ತುರ್ತು ದುರಸ್ತಿ ಮಾಡಬೇಕಾದ ಅವಶ್ಯಕತೆಯಿದ್ದು ಇನ್ನಾದರೂ ಸಂಬಂಧಪಟ್ಟವರು ಗಮನಹರಿಸಲಿ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!