ಎನ್ನೆಂಸಿ: ವ್ಯವಹಾರ ಆಡಳಿತ ವಿಭಾಗದಿಂದ ದೀಕ್ಷಾ ಟ್ರೇಡರ್ಸ್ ಗೆ ಭೇಟಿ

. . . . . . . . .

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ವತಿಯಿಂದ ಪ್ರಥಮ ಬಿಬಿಎ ವಿದ್ಯಾರ್ಥಿಗಳಿಗೆ ಸುಳ್ಯದ ಜಟ್ಟಿಪಳ್ಳದಲ್ಲಿರುವ ದೀಕ್ಷಾ ಟ್ರೇಡರ್ಸ್ ಗೆ ವ್ಯವಹಾರ ಭೇಟಿ ಕಾರ್ಯಕ್ರಮವನ್ನು ಡಿಸೆಂಬರ್ 08 ರಂದು ಆಯೋಜಿಸಲಾಗಿತ್ತು. ದೀಕ್ಷಾ ಟ್ರೇಡರ್ಸ್ ನ ಮಾಲಕರಾದ ಮಾಧವ ರಾವ್ ವಿದ್ಯಾರ್ಥಿಗಳೊಂದಿಗೆ ತಮ್ಮ‌ ಸುದೀರ್ಘ ಕಾಲದ ವ್ಯವಹಾರ ಜ್ಞಾನವನ್ನು ಹಂಚಿಕೊಂಡರು. ವ್ಯವಹಾರದಲ್ಲಿ ಇರಬೇಕಾದ ಜಾಣ್ಮೆ, ವ್ಯವಹಾರದ ಲಾಭ – ನಷ್ಟಗಳನ್ನು ವಿವರಿಸುವುದರೊಂದಿಗೆ, ಕೇವಲ ಸರ್ಕಾರಿ ಉದ್ಯೋಗದ ಕಡೆ ಮಾತ್ರ ಗಮನ ಹರಿಸದೆ ಸ್ವ ಉದ್ಯೋಗದ ಕಡೆ ಕೂಡ ಒಲವು ಹರಿಸಬೇಕು ಎಂದರು. ಬಿಬಿಎ ವಿಭಾಗದ ಮುಖ್ಯಸ್ಥೆ ಶ್ರೀಮತಿ ಅನಂತಲಕ್ಷ್ಮಿ, ಉಪನ್ಯಾಸಕರುಗಳಾದ ಹರಿಪ್ರಸಾದ್ ಎ ವಿ, ಶ್ರೀಮತಿ ಲೀನಾ ವೈ ಎನ್ ಹಾಗೂ ಮೀನಾಕ್ಷಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading