ಡಿಸೆಂಬರ್ 20, 21, 22ರಂದು ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮಿಗಳು ಸುಳ್ಯ ತಾಲೂಕಿನಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಅವರ ಆಗಮನ ಸುಳ್ಯದ ನಮ್ಮ ಕುಲ ಬಾಂಧವರಿಗೆ ಒದಗಿ ಬಂದ ಯೋಗ ಭಾಗ್ಯವೆಂದು ಪರಿಗಣಿಸಿ, ನಾವೆಲ್ಲರೂ ಏಕ ಮನಸ್ಸಿನಿಂದ ಒಗ್ಗಟ್ಟಾಗಿ ಪೂಜ್ಯರ ಆಗಮನದ ಪೂರ್ವ ಸಿದ್ಧತೆಗಾಗಿ ತಯಾರಾಗಬೇಕಾಗಿದ್ದು, ಪೂಜ್ಯ ಸ್ವಾಮೀಜಿಗಳ ಸರ್ವ ಕಾರ್ಯಗಳಲ್ಲಿ ಭಾಗವಹಿಸಿ, ಜವಾಬ್ದಾರಿ ನಿರ್ವಹಿಸಬೇಕಾಗಿ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರ ಡಾ. ರೇಣುಕಾಪ್ರಸಾದ್ ಕೆ. ವಿ. ಮನವಿ ಮಾಡಿದ್ದಾರೆ.
- Saturday
- November 23rd, 2024