Ad Widget

ಚೊಕ್ಕಾಡಿ ವಿದ್ಯಾ ಸಂಸ್ಥೆಗಳು ಕುಕ್ಕುಜಡ್ಕ : ನೂತನ ಶೌಚಾಲಯ ಕಟ್ಟಡ ಉದ್ಘಾಟನೆ, ಸಾಧಕರಿಗೆ ಸನ್ಮಾನ, ಕೆದಂಬಾಡಿ ರಾಮಯ್ಯ ಗೌಡ ನಾಟಕ ಪ್ರದರ್ಶನ

ಚೊಕ್ಕಾಡಿ ವಿದ್ಯಾ ಸಂಸ್ಥೆಗಳು ಕುಕ್ಕುಜಡ್ಕ ಮತ್ತು ಅಮರ ತರಂಗ ಸುಳ್ಯ ಇದರ ಸಹಯೋಗದೊಂದಿಗೆ ಜಿಂದಾಲ್ ಅಲ್ಯೂಮಿನಿಯಂ ಕಂಪನಿಯ ಉದಾರ ಕೊಡುಗೆಯಾದ ನೂತನ ಶೌಚಾಲಯ ಕಟ್ಟಡ ಉದ್ಘಾಟನೆ, ಸಾಧಕರಿಗೆ ಸನ್ಮಾನ, ಅಮರ ಸುಳ್ಯದ ಸಮರ ನಾಯಕ ಕೆದಂಬಾಡಿ ರಾಮಯ್ಯ ಗೌಡ ನಾಟಕ ಪ್ರದರ್ಶನವು ನವಂಬರ್ 30ರಂದು ಕುಕ್ಕುಜಡ್ಕ ವಿದ್ಯಾಸಂಸ್ಥೆಯ ಸುವರ್ಣ ರಂಗ ಸಭಾಭವನದಲ್ಲಿ ನಡೆಯಿತು. ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್ ಅಂಗಾರ ರವರು ಜಿಂದಾಲ್ ಅಲ್ಯೂಮಿನಿಯಂ ಕಂಪೆನಿಯವರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ನೂತನ ಶೌಚಾಲಯ ಕಟ್ಟಡವನ್ನು ಉದ್ಘಾಟಿಸಿ, ಶಾಲೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಮಾತ್ರವಲ್ಲದೆ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಡಲಾಗುವುದು. ಆದರೆ ಪೋಷಕರು ತಮ್ಮ ಮಕ್ಕಳನ್ನು ನಗರ ಪ್ರದೇಶದ ಶಾಲೆಗೆ ಕಳುಹಿಸುವ ಬದಲಿಗೆ ತಮ್ಮ ಊರಿನ ಶಾಲೆಗಳಿಗೆ ಕಳುಹಿಸುವ ಮನಸ್ಸು ಮಾಡಬೇಕಾಗಿದೆ ಎಂದು ಹೇಳಿದರು.

. . . . . .

ಅಮರಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪದ್ಮಪ್ರಿಯ ಮೇಲ್ತೋಟ ಅಧ್ಯಕ್ಷತೆ ವಹಿಸಿದ್ದರು. ಆಹಾರ ಸರಬರಾಜು ಇಲಾಖೆಯ ಪಡಿತರ ವ್ಯವಸ್ಥೆಯ ಜನ ಜಾಗೃತಿ ಸಮಿತಿಯ ಜಿಲ್ಲಾ ಸದಸ್ಯ ರಾಧಾಕೃಷ್ಣ ಬೊಳ್ಳೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಸುಳ್ಯ ಅಮರ ತರಂಗದ ಅಧ್ಯಕ್ಷ ಕೆ ಆರ್ ತೇಜಕುಮಾರ್ ಕುಡೆಕಲ್ಲು, ಜಿಂದಾಲ್ ಅಲ್ಯೂಮಿನಿಯಂ ಕಂಪನಿಯ ಹಿರಿಯ ವ್ಯವಸ್ಥಾಪಕ, ಕಾನೂನು ಸಲಹೆಗಾರರಾದ ನಾಗೇಂದ್ರ ಅವರು ಶಾಲೆಗೆ ಇನ್ನಷ್ಟು ಅನುದಾನವನ್ನು ಒದಗಿಸಿಕೊಡುವುದಾಗಿ ತಿಳಿಸಿದರು. ಸಾಹಿತಿ ಹಾಗೂ ಸಂಶೋಧಕ ಎ ಕೆ ಹಿಮಕರ, ಚೊಕ್ಕಾಡಿ ಸೊಸೈಟಿಯ ಅಧ್ಯಕ್ಷ ಕೇಶವ ಕರ್ಮಾಜೆ, ಚೊಕ್ಕಾಡಿ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷರಾದ ಅಣ್ಣಾಜಿ ಗೌಡ ಪೈಲೂರು, ನಿರ್ದೇಶಕರಾದ ಆನಂದ ಚಿಲ್ಪಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಮಕ್ಕಳಿಗೆ ಕ್ರೀಡಾ ತರಬೇತಿ ನೀಡಿದ ಹಾಗೂ ರಾಷ್ಟ್ರ ಮಟ್ಟದ ಕಿರುಚಿತ್ರ ಸ್ಪರ್ಧೆಯಲ್ಲಿ ಪ್ರಶಸ್ತಿ ವಿಜೇತರಾದ ತೇಜಸ್ವಿ ಕಡಪಳ ಹಾಗೂ ಶಾಲಾ ಶೌಚಾಲಯ ನಿರ್ಮಾಣದಲ್ಲಿ ಸಹಕಾರ ನೀಡಿದ ಜಿಂದಾಲ್ ಕಂಪೆನಿಯ ಕಾನೂನು ಸಲಹೆಗಾರರಾದ ಶ್ರೀ ನಾಗೇಂದ್ರ ಭಟ್ ರವರನ್ನು ಶಾಲಾ ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು.
ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಜಿಲ್ಲಾ ಮಟ್ಟದಲ್ಲಿ ವಿಜೇತರಾದ ಚೊಕ್ಕಾಡಿ ಪ್ರೌಢಶಾಲಾ ವಿದ್ಯಾರ್ಥಿನಿಯರಾದ ಕುಮಾರಿ ರಚಿತಾ, ಮಾನ್ಯ, ವರ್ಷಿಣಿ, ಅನನ್ಯ, ಹಸ್ತಾ, ರೇಣುಕಾ, ಜಲಧಿ
ಅತ್ಲೆಟಿಕ್ಸ್ ನಲ್ಲಿ ಜಿಲ್ಲಾ ಮಟ್ಟದಲ್ಲಿ ಪದಕ ವಿಜೇತರಾದ
ಕುಮಾರಿ ರಮ್ಯ, ಭಾನವಿ ಹಾಗೂ ಪುನೀತ್ ರಾಜ್
ಜಿಲ್ಲಾ ಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ವಿಜೇತರಾದ ಯಶ್ವಿತ್, ಮನ್ವಿತ್ ಪ್ರತಿಭಾ ಕಾರಂಜಿಯಲ್ಲಿ ವಿಜೇತ ವಿದ್ಯಾರ್ಥಿನಿ ಶ್ರೀಹಸ್ತಾ ಹಾಗೂ ಯೋಗದಲ್ಲಿ ದಾಖಲೆ ಮಾಡಿದ ತನ್ವಿ ಇವರನ್ನು ಶಾಲಾ ಆಡಳಿತ ಮಂಡಳಿಯ ವತಿಯಿಂದ ಗೌರವಿಸಲಾಯಿತು. ಹಾಗೂ ಅಮರ ಸುಳ್ಯದ ಕ್ರಾಂತಿಯಲ್ಲಿ ಗುರುತಿಸಿಕೊಂಡ ಊರಿನ ಹೋರಾಟಗಾರರ ಕುಟುಂಬದ ಸದಸ್ಯರಾದ ಗುಡ್ಡೆಮನೆ ರಾಧಾಕೃಷ್ಣ ಹಾಗೂ ಬೊಳ್ಳೂರು ಜಯರಾಮ ಗೌಡ ಅವರನ್ನು ಸನ್ಮಾನಿಸಲಾಯಿತು. ಚೊಕ್ಕಾಡಿ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿಯಾದ ತೇಜಸ್ವಿ ಕಡಪಳ ಅವರು ಸ್ವಾಗತಿಸಿ,
ಚೊಕ್ಕಾಡಿ ಪ್ರೌಢ ಶಾಲೆ ಕುಕ್ಕುಜಡ್ಕದ ಮುಖ್ಯೋಪಾಧ್ಯಾಯರಾದ ಸಂಕೀರ್ಣ ಚೊಕ್ಕಾಡಿಯವರು ವಂದಿಸಿದರು. ಶಿಕ್ಷಕರಾದ ಹರಿಪ್ರಸಾದ್ ಅವರು ಕಾರ್ಯಕ್ರಮ ನಿರೂಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!