Ad Widget

ಡಿ.10 ರಂದು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ – ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ

ಸುಳ್ಯ ತಾಲೂಕು ೨೬ನೇ ಸಾಹಿತ್ಯ ಸಮ್ಮೇಳನ ಡಿ.10 ರಂದು ನಡೆಯಲಿದ್ದು, ಸುಳ್ಯ ತಾಲೂಕು ೨೬ನೇ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿರುವ ಉಮ್ಮರ್ ಬೀಜದಕಟ್ಟೆ ಕಾರ್ಯಕ್ರಮದ ವಿವರ ನೀಡಿದರು.

. . . . . . .

ಗ್ರಾಮೀಣ ಭಾಗದಲ್ಲಿ ಸಾಹಿತ್ಯ ಸಮ್ಮೇಳನದ ಮಹತ್ವ ಏನು ಅನ್ನುವುದರ ಬಗ್ಗೆ ವಿವರಿಸಿದರು. ಸಂಪಾಜೆ, ಗೂನಡ್ಕ, ಸುಳ್ಯ ತಾಲೂಕಿನ ಹಲವು ಭಾಗಗಳು ಸರಣಿ ಭೂಕಂಪದಿಂದ ಜನ ಭಯಭೀತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಜನರಲ್ಲಿ ಆತ್ಮವಿಶ್ವಾಸ, ಒಗ್ಗೂಡಿವಿಕೆಯ ಅಗತ್ಯ ಇದೆ. ಅಂತಹ ಜನರಿಗೆ ಸಾಹಿತ್ಯದ ಮೂಲಕ ಕನ್ನಡದ ಘೋಷವನ್ನು ಮೊಳಗಿಸಿ ಧೈರ್ಯ ತುಂಬುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಕನ್ನಡ ಭುವನೇಶ್ವರಿಯ ಮೆರವಣಿಗೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು ಬೆಳಗ್ಗೆ ೮.೪೫ರಿಂದ ದೊಡ್ಡಡ್ಕ ಬೈಲೆ ರಸ್ತೆಯಿಂದ ಬೀಜದ ಕಟ್ಟೆ ಮಾರ್ಗವಾಗಿ ಸಜ್ಜನ ಸಭಾಭವನಕ್ಕೆ ಮೆರವಣಿಗೆ ಸಾಗಿ ಬರಲಿದೆ. ಬಳಿಕ ಸಮ್ಮೇಳನಾಧ್ಯಕ್ಷ ಕೆ,ಆರ್, ಗಂಗಾಧರ ಅವರ ಸಮ್ಮುಖದಲ್ಲಿ ಹಿರಿಯ ವಿಮರ್ಶಕರಾದ ಎಸ್‌.ಆರ್‌.ವಿಜಯ ಶಂಕರ್ ಸಮ್ಮೇಳನದ ಉದ್ಘಾಟನೆ ನೆರವೇರಿಸಲಿದ್ದಾರೆ. ಸಚಿವ ಎಸ್‌. ಅಂಗಾರ ಸೇರಿದಂತೆ ಅನೇಕ ಮಂದಿ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಉಮ್ಮರ್ ಬೀಜದ ಕಟ್ಟೆ ತಿಳಿಸಿದರು.

ಇದೇ ವೇಳೆ ಮಾತನಾಡಿದ ಕನ್ನಡ ದ ಖ್ಯಾತ ವಿಮರ್ಷಕ ಎಸ್ ಆರ್ ವಿಜಯಶಂಕರ್ ಅವರು, ಸುಳ್ಯ ತಾಲೂಕು ಅನೇಕ ಮಂದಿ ಬರಹಗಾರರು, ಕಾದಂಬರಿಕಾರರು, ಸಾಹಿತಿಗಳನ್ನು ರಾಜ್ಯಕ್ಕೆ ಪರಿಚಯಿಸಿದೆ. ಕೃಷಿಯನ್ನೇ ನಂಬಿಕೊಂಡಿರುವ ಗ್ರಾಮೀಣ ಭಾಗದಲ್ಲಿ ಶಿಕ್ಷಣವೂ ಸಮೃದ್ಧಿಗೊಂಡಿದೆ. ಇಂತಹ ನೆಲದಲ್ಲಿ ಸಾಹಿತ್ಯ ಸಮ್ಮೇಳನ ನಾಡು ನುಡಿಯ ವಿಚಾರ ಚರ್ಚೆಗೆ ಬರುತ್ತಿರುವುದು ಸಂತಸ ಸಂಗತಿಯಾಗಿದೆ ಎಂದು ತಿಳಿಸಿದರು. ಈ ಸಂದರ್ಭ ಸಮ್ಮೇಳನಕ್ಕೆ ಮೆರುಗು ನೀಡುವ ಉದ್ದೇಶದಿಂದ ಟೀ ಶರ್ಟ್ ಬಿಡುಗಡೆ ಕಾರ್ಯಕ್ರಮ ನೆರವೇರಿತು.

ಪತ್ರಿಕಾಗೋಷ್ಟಿಯಲ್ಲಿ ಆರೀಸ್ ಪಿ ಎಂ, ಆಯೂಬ್ ಗೂನಡ್ಕ, ಮಂಜುನಾಥ್ ಹಿರಿಯೂರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!