Ad Widget

ಕುಕ್ಕೆಶ್ರೀ ದೇವಳದಲ್ಲಿ ಚಂಪಾಷಷ್ಠಿ ಜಾತ್ರಾ ಪ್ರಯುಕ್ತ ಅಖಂಡ ಭಜನೋತ್ಸವ


ಸುಬ್ರಹ್ಮಣ್ಯ: ಮಹಾತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಪ್ರಯುಕ್ತ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅಖಂಡ ಭಜನೋತ್ಸವ ಸೋಮವಾರ ಆರಂಭವಾಯಿತು. ಸೋಮವಾರ ಸೂರ್ಯೋದಯದಿಂದ ಮಂಗಳವಾರ ಸೂರ್ಯೋದಯದ ತನಕ ಶ್ರೀ ದೇವಳದ ಧರ್ಮಸಮ್ಮೇಲನ ಮಂಟಪದಲ್ಲಿ ನಡೆಯುವ ಭಜನೋತ್ಸವವನ್ನು ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯೆ ವನಜಾ.ವಿ.ಭಟ್, ಶೋಭಾ ಗಿರಿಧರ್, ಗ್ರಾ.ಪಂ.ಸದಸ್ಯರಾದ ರಾಜೇಶ್ ಎನ್.ಎಸ್, ಗಿರೀಶ್ ಆಚಾರ್ಯ ಪೈಲಾಜೆ, ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಶಿಷ್ಠಾಚಾರ ಅಧಿಕಾರಿ ಜಯರಾಮ ರಾವ್, ಶಿಷ್ಠಾಚಾರ ವಿಭಾಗದ ನವೀನ್, ಭಜನೋತ್ಸವದ ಮುಖ್ಯ ಉಸ್ತುವಾರಿಗಳಾದ ರಾಜಲಕ್ಷ್ಮಿ ಶೆಟ್ಟಿಗಾರ್, ಯೋಗೀಶ್.ಎಂ.ವಿಟ್ಲ, ಮುಖ್ಯಗುರು ಕೆ.ಯಶವಂತ ರೈ, ಉಪನ್ಯಾಸಕ ರತ್ನಾಕರ.ಎಸ್, ಪತ್ರಕರ್ತರಾದ ಲೋಕೇಶ್ ಬಿ.ಎನ್, ಪ್ರಕಾಶ್ ಸುಬ್ರಹ್ಮಣ್ಯ, ಶ್ರೀ ದೇವಳದ ಶಿವಸುಬ್ರಹ್ಮಣ್ಯ ಭಟ್, ಪುರುಷೋತ್ತಮ್, ಬಾಲಕೃಷ್ಣ.ಆರ್, ಅಶೋಕ್ ಅತ್ಯಡ್ಕ, ಮುಕಾಂಬಿಕಾ ಮಾರರ್, ಶೋಭಾ, ಭಾನುಮತಿ, ಮಮತಾ ಬಾಲಕೃಷ್ಣ ಉಪಸ್ಥಿತರಿದ್ದರು.
ಬಳಿಕ ವಿವಿಧ ತಂಡಗಳಿಂದ ಭಜನೆ ಆರಂಭಗೊಂಡಿತು. ಆರಂಭದಲ್ಲಿ ಶ್ರೀ ದೇವಳದ ನೌಕರರ ವೃಂದದವರು ಭಜನಾ ಸೇವೆ ನೆರವೇರಿಸಿದರು. ಬಳಿಕ ರಘು ಬಿಜೂರಯ ಮತ್ತು ತಂಡ, ಕಾಟುಕುಕ್ಕೆ ಮಹಿಳಾ ಭಜನಾ ತಂಡ ಭಜನೆ ನೆರವೇರಿಸಿದರು. ಭಜನೆ ನೆರವೇರಿಸಿದ ತಂಡದ ಎಲ್ಲಾ ಸದಸ್ಯರಿಗೆ ಕುಕ್ಕೆ ದೇವಳದಿಂದ ಶಾಲು ಹೊದಿಸಿ ದೇವರ ಪ್ರಸಾದ ನೀಡಲಾಯಿತು.ಅಲ್ಲದೆ ಪ್ರತಿ ತಂಡಕ್ಕೆಶ್ರೀ ದೇವಳದಿಂದ ಪ್ರಮಾಣ ಪತ್ರ ನೀಡಲಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading