ಸುಳ್ಯ ತಾಲೂಕಿನಾದ್ಯಂತ ಮಂಗಗಳ ಹಾವಳಿ ವ್ಯಾಪಕವಾಗಿದ್ದು ಕೃಷಿಕರ ನಿದ್ದೆಗೆಡಿಸಿದೆ. ಅಡಿಕೆಗೆ ಹಳದಿರೋಗ, ಎಲೆಚುಕ್ಕಿ ರೋಗ, ಕೊಳೆರೋಗದಿಂದ ಕಂಗೆಟ್ಟ ಕೃಷಿಕರಿಗೆ ಮಂಗಗಳ ಹಾವಳಿ ವ್ಯಾಪಕವಾಗಿ ತೊಂದರೆ ಕೊಡುತ್ತಿದೆ.
ಇದೀಗ ಸುಳ್ಯ ನಗರದಲ್ಲೂ ಮಂಗಗಳ ಹಾವಳಿ ಬಗ್ಗೆ ದೂರುಗಳು ಬರುತ್ತಿದ್ದು ಅರಣ್ಯ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಕೆಲ ಕೃಷಿಕರು ಮಂಗಗಳನ್ನು ಹಿಡಿದು ಒಂದೆಡೆಯಿಂದ ಇನ್ನೊಂದೆಡೆಗೆ ಬಿಡುತ್ತಿರುವುದು ಕೂಡ ಸಮಸ್ಯೆಯಾಗುತ್ತಿದೆ. ಇವುಗಳೇ ಈಗ ಪೇಟೆಗೆ ಕಡೆಗೆ ಆಹಾರ ಅರಸಿ ಬಂದು ತೊಂದರೆ ನೀಡುತ್ತಿದೆ. ಕೆರೆಮೂಲೆ, ಗಾಂಧಿನಗರ ಹಾಗೂ ರಥಬೀದಿವರೆಗೂ ಬರುವ ಮಂಗಗಳು ಅಂಗಡಿ ಮನೆಗಳಿಗೆ ನುಗ್ಗಿ ಹಾನಿ ಮಾಡುತ್ತಿದೆ. ಸುಳ್ಯ ತಾಲೂಕಿನಲ್ಲಿ ಮಂಕಿಪಾರ್ಕ್ ನಿರ್ಮಾಣಕ್ಕೆ ಸರಕಾರ ಇನ್ನೂ ಕ್ರಮ ಕೈಗೊಳ್ಳದಿರುವುದರಿಂದ ಇಂತಹ ಸಮಸ್ಯೆಗಳು ಹೆಚ್ಚಾಗುತ್ತಿದೆ ಜನ ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಸರಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದೆ.