Ad Widget

ಆಧ್ಯಾತ್ಮಿಕವಾದ ಸಾಂಸ್ಕೃತಿಕ ಜ್ಞಾನದ ಅಭ್ಯುದಯಕ್ಕೆ ಸಾಹಿತ್ಯ ಕೃತಿಗಳ ಪಾತ್ರ ಅನನ್ಯ : ಲಕ್ಷ್ಮೀಶ ತೋಳ್ಪಾಡಿ

. . . . .

ಕೃತಿಗಳ ಮೂಲಕ ಆಧ್ಯಾತ್ಮಿಕ ಪ್ರಭೆಯನ್ನು ಬೆಳಗಿಸುವುದು ಶ್ರೇಷ್ಠ ಕಾರ್ಯ. ಇದರಿಂದ ಜನತೆಯು ಪ್ರಾಚೀನತೆಯ ರೂಡಿ ಸಂಪ್ರದಾಯ ಗಳನ್ನು ಅರಿಯಲು ಪೂರಕವಾಗುತ್ತದೆ.ಪುಸ್ತಕಗಳನ್ನು ಓದುವುದು ಜ್ಞಾನ ಮತ್ತು ಮಾನಸಿಕ ಸಂತಸಕ್ಕೆ ಪೂರಕ.ವಿದ್ಯಾರ್ಥಿಗಳಿಗೆ ಎಳವೆಯಲ್ಲಿಯೇ ಸಾಹಿತ್ಯಾಸಕ್ತಿ ಬೆಳೆಯುವಂತೆ ಮಾಡಬೇಕು.ಇದರಿಂದ ಓದುವಿಕೆ ಮತ್ತು ಜ್ಞಾನಾರ್ಜನೆಯ ಹವ್ಯಾಸ ವೃದ್ದಿಯಾಗುತ್ತದೆ ಎಂದು ಕನ್ನಡದ ಹಿರಿಯ ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜು ಸುಬ್ರಹ್ಮಣ್ಯ, ಜೇಸಿಐ ಸುಬ್ರಹ್ಮಣ್ಯ ಕುಕ್ಕೆಶ್ರೀ, ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ಸುಬ್ರಹ್ಮಣ್ಯ ದ ಎಸ್ ಎಸ್ ಪಿಯು ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ
ಡಾ.ಪ್ರಭಾಕರ ಶಿಶಿಲರ ವಿಶಿಷ್ಟ ಕಾದಂಬರಿ ಚದಗ್ನಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.ಸಾಹಿತ್ಯವು ಜೀವನದ ಆಗುಹೋಗುಗಳನ್ನು ಮತ್ತು ಅನುಭವಗಳನ್ನು ಬಿತ್ತರಿಸುವ ಮಾದ್ಯಮ.ಅನುಭವಗಳಿಂದ ಇತರರಿಗೆ ಪ್ರಯೋಜನವಾಗುತ್ತದೆ.ಸಾಹಿತ್ಯ ಕ್ಷೇತ್ರ ಮತ್ತು ಪುಸ್ತಕಗಳು ನಮ್ಮ ಜೀವನದ ಸುಗಮತೆಗೆ ದಾರಿದೀಪಗಳಾಗಿವೆ.ಆದುದರಿಂದ ಪುಸ್ತಕಗಳನ್ನು ಹೆಚ್ಚು ಹೆಚ್ಚು ಓದುವತ್ತ ಗಮನ ನೀಡುವುದು ಉತ್ತಮ.ಪುಸ್ತಕಗಳು ಸದಾ ಸಂಪತ್ತುಗಳು ಅವುಗಳನ್ನು ಶೇಖರಿಸುವುದು ನಮ್ಮ ದಿನಚರಿಯಾಗಬೇಕು ಎಂದರು

ಸಾಹಿತ್ಯದಿಂದ ನೈತಿಕ ಮೌಲ್ಯ ಔನತ್ಯ: ಡಾ.ನಿಂಗಯ್ಯ

ವೈಚಾರಿಕ ಬದುಕಿನಿಂದ ಜೀವನ ಪಾವನ. ಯುವ ವಿದ್ಯಾರ್ಥಿಗಳಲ್ಲಿ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಜ್ಞಾನದ ಅಭ್ಯುದಯಕ್ಕೆ ಸಾಹಿತ್ಯ ಪ್ರಧಾನ.ಅನುಭವದ ಆಧಾರದಲ್ಲಿ ನಿರ್ಮಿತ ಸಾಹಿತ್ಯಗಳು ಬದುಕಿನಲ್ಲಿನೈತಿಕ ಮೌಲ್ಯಗಳನ್ನು ಹೆಚ್ಚಿಸುತ್ತದೆ.ಸಾಹಿತ್ಯದ ನೀತಿ ಸಂಪನ್ನತೆಯ ಜ್ಞಾನವನ್ನು ಸರ್ವರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಹೇಳಿದರು.
ಸಾಹಿತಿ ಡಾ.ಪ್ರಭಾಕರ ಶಿಶಿಲ, ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್, ಜೇಸಿಐ ಸುಬ್ರಹ್ಮಣ್ಯ ಕುಕ್ಕೆಶ್ರೀ ಯ ಅಧ್ಯಕ್ಷ ದೀಪಕ್ ನಂಬಿಯಾರ್, ರೋಟರಿ ಕ್ಲಬ್ ಅಧ್ಯಕ್ಷ ಗೋಪಾಲ್ ಎಣ್ಣೆಮಜಲು, ಕಾರ್ಯದರ್ಶಿ ರವಿ ಕಕ್ಕೆಪದವು, ಉಪನ್ಯಾಸಕಿಯರಾದ ಜಯಶ್ರೀ ವಿ.ದಂಬೆಕೋಡಿ, ರೇಖಾರಾಣಿ ಸೋಮಶೇಖರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಸಾಹಿತಿ, ಬರಹಗಾರ ಹಾಗೂ ಯಕ್ಷಗಾನ ಕಲಾವಿದ ಡಾ.ಪ್ರಭಾಕರ ಶಿಶಿಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!