Ad Widget

ಆಯುರ್ವೇದದತ್ತ ಆಕರ್ಷಿತರಾಗುತ್ತಿದ್ದಾರೆ ವಿದೇಶಿಗರು

ನೂರಕ್ಕೂ ಮಿಕ್ಕಿ ವಿದೇಶಿಗರಿಗೆ ಆಯುರ್ವೇದ ಪರಿಚಯಿಸಿದ ಸುಳ್ಯದ ಆಯುರ್ಧಾಮ

ಸುಳ್ಯದ ಹಳೆಗೇಟಿನಲ್ಲಿ ಆಯುರ್ಧಾಮ ಆಯುರ್ವೇದ ಆಸ್ಪತ್ರೆ ಉತ್ತಮ ಸೇವೆ ನೀಡುವುದರ ಮೂಲಕ ದೇಶ ವಿದೇಶಗಳನ್ನೂ ಪ್ರಸಿದ್ಧಿ ಪಡೆದಿದೆ. ಇದೀಗ ವಿವಿಧ ಆಯುರ್ವೇದ ಔಷಧಗಳನ್ನು ತಯಾರಿಸಿ ಮಾರುಕಟ್ಟೆ ನೀಡುತ್ತಿದೆ. ನೂರಾರು ವಿದೇಶಿಗರು ಇಲ್ಲಿಗೆ ಆಗಮಿಸಿ ಆಯುರ್ವೇದದ ಅಧ್ಯಯನ ನಡೆಸಿ ತೆರಳಿದ್ದಾರೆ. ಈಗಾಗಲೇ ಪ್ರಾನ್ಸ್, ಸ್ಪೈನ್, ಯೂನೈಟೆಡ್ ಕಿಂಗ್ಡಮ್, ಅಮೇರಿಕಾ, ಕೆನಡಾ, ಜರ್ಮನಿ, ಬ್ರೆಜಿಲ್, ಚಿಲಿ, ಇಟೆಲಿ ದೇಶದ 102 ಮಂದಿ ಆಗಮಿಸಿ ಆಯುರ್ವೇದ ಕೋರ್ಸ್ ಮಾಡಿ ತೆರಳಿರುತ್ತಾರೆ. ಈ ಬಾರಿ ಆಗಮಿಸಿದ ವಿದೇಶಿ ದಂಪತಿಗಳು ಆಯುರ್ಧಾಮ ದಲ್ಲಿ ದೀಪಾವಳಿ ಆಚರಿಸಿ ಸಂಭ್ರಮಿಸಿದರು.ಸುಮಾರು 12 ವರ್ಷಗಳ ಹಿಂದೆ  ಡಾ.ಹರಿಪ್ರಸಾದ್ ಶೆಟ್ಟಿ ಎಂ. ಅವರು ಆರಂಭಿಸಿದ ಆಸ್ಪತ್ರೆ ಇಂದು ವಿದೇಶಿಗರನ್ನು ಆಕರ್ಷಿಸಿದೆ. ಚಿಕ್ಕಮಕ್ಕಳಿಗೆ ಸ್ಬರ್ಣ ಪ್ರಾಶನ, ಮೂಲವ್ಯಾಧಿ ಮತ್ತು ಪಿಸ್ಟುಲಾ ರೋಗಗಳಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುವ ಮೂಲಕ ತನ್ನ ಹೆಸರನ್ನು ಎತ್ತರಕ್ಕೆ ಏರಿಸಿಕೊಂಡಿದೆ.

. . . . . .

ಆಯುರ್ವೇದ ಬೆಳೆದು ಬಂದ ಹಾದಿ

ಸಾವಿರಾರು ವರ್ಷಗಳಿಂದ ಮನುಷ್ಯ ತನ್ನ ಜೀವನದುದ್ದಕ್ಕೂ ಪ್ರಕೃತಿಯನ್ನೇ ಅವಲಂಬಿಸಿ ಬದುಕಿ ಬಂದವನು. ತನ್ನ ಆರೋಗ್ಯ ಕಾಪಾಡಲು, ಖಾಯಿಲೆಗಳು ಬಂದಾಗ ಪ್ರಕೃತಿ ಯನ್ನೇ ದೇವರು, ವೈದ್ಯರು ಎಂದು ಪೂಜಿಸಿಕೊಂಡು ಬಂದವನು. ಹಳ್ಳಿಮದ್ದು ಎಂಬುದು ವಿಧಾನಕ್ಕೆ ಬದಲಾಗಿ  ಆಯುರ್ವೇದ ಔಷದ ಪದ್ದತಿಯಾಗಿ ಮಾರ್ಪಾಡಾಯಿತು.  ಇತ್ತೀಚೆಗೆ ಆಯುರ್ವೇದ ಕ್ಷೇತ್ರ ಉದ್ಯಮವಾಗಿ ಬೆಳೆಯಲು ಆರಂಭಿಸಿದ ಮೇಲಂತೂ ನಮ್ಮದು ಮೂಢನಂಬಿಕೆ ಎನ್ನುತ್ತಿದ್ದ ವಿದೇಶಿಗರು ಕೂಡ ನಮ್ಮ ದೇಶದತ್ತ ಮುಖ ಮಾಡುವಂತಾಯಿತು.   ನಮ್ಮ ದೇಶಕ್ಕೆ ಬಂದು ಆಳ್ವಿಕೆ ನಡೆಸುತ್ತಿದ್ದಾಗ ಅವರೆಲ್ಲ ನಮ್ಮ ಪದ್ಧತಿ, ಆಚರಣೆಯನ್ನು ಕಂಡು ‘ಇವರೆಲ್ಲ ಮೂಢನಂಬಿಕೆಯವರು, ಮೂರ್ಖರು’ ಎಂದು ಹೀಯಾಳಿಸಿದ್ದರು. ಇದರ ಪರಿಣಾಮವಾಗಿ, ‘ಆಯುರ್ವೇದವೇ ಭಾರತೀಯ ವೈದ್ಯಕೀಯ ಪದ್ಧತಿ’ ಎಂದು ಹೇಳಿಕೊಳ್ಳುವುದಕ್ಕೂ ನಮಗೆ ನಾಚಿಕೆಯಾಗುವಂಥ ಪರಿಸ್ಥಿತಿ ಉಂಟಾಯಿತು. ಆದರೆ ಅದೇ ವೈದ್ಯಕೀಯ ಪದ್ಧತಿಯ ಮಹತ್ವ ತಿಳಿದು ಅದರ ಬಗೆಗಿನ ಕಲ್ಪನೆ ಮುಂದೆ ಬದಲಾಗುತ್ತ ಇಂದು ನಮ್ಮ ‘ಭಾರತೀಯ ಆಯುರ್ವೇದ ಮತ್ತು ಪ್ರಕೃತಿಚಿಕಿತ್ಸಾ ಪದ್ಧತಿ’ ವಿಶ್ವಕ್ಕೆ ವಿಶಿಷ್ಟ ಕೊಡುಗೆಯಾಗಿ ಹೊರಹೊಮ್ಮಿದೆ ಎಂದು ಹೆಮ್ಮೆಯಿಂದ ಹೇಳಿ ಕೊಳ್ಳುವ ಹಂತಕ್ಕೆ ಬಂದಿದ್ದೇವೆ. ಭಾರತದ ಪ್ರಧಾನಮಂತ್ರಿಯವರು ಯೋಗ ಮತ್ತು ಪ್ರಕೃತಿಚಿಕಿತ್ಸೆಯನ್ನು ಪ್ರೋತ್ಸಾಹಿಸುತ್ತ ಬಂದಿದ್ದು ವಿಶ್ವಯೋಗ ದಿನವನ್ನು ಆಚರಿಸಿ ನಮ್ಮ ದೇಶದ ಯೋಗಶಕ್ತಿಯನ್ನು ವಿಶ್ವಕ್ಕೆ ತೋರಿಸಿ ಕೊಟ್ಟಿದ್ದಾರೆ.

ಚರಿತ್ರೆ

ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಖ್ಯಾತಿ ಪಡೆದ ಮಹರ್ಷಿಗಳ ಪೈಕಿ ಚರಕ ಕೂಡ ಒಬ್ಬರು. ಕ್ರಿಸ್ತಪೂರ್ವ 300ರಲ್ಲಿ ಜೀವಿಸಿದ್ದ ಅವರನ್ನು ಆಯುರ್ವೇದ ಪಿತಾಮಹ ಎಂದೂ ಕರೆಯುತ್ತಾರೆ. ಔಷಧ, ಚಿಕಿತ್ಸೆ ಮುಂತಾದ ವಿಷಯಗಳನ್ನೊಳಗೊಂಡ ‘ಚರಕ ಸಂಹಿತೆ’ ಎಂಬ ಗ್ರಂಥ ರಚಿಸುವ ಮೂಲಕ ಅವರು ಮಾನವ ಜಗತ್ತಿಗೆ ಅತ್ಯಮೂಲ್ಯ ಕೊಡುಗೆ ನೀಡಿದ್ದಾರೆ.ಚರಕ ಸಂಹಿತೆಯಲ್ಲಿ 125 ಬಗೆಯ ಜ್ವರಗಳು, ಪಿತ್ತಕಾಮಾಲೆ, ಮಧುಮೇಹ (ಡಯಾಬಿಟೀಸ್), ಕ್ಷಯ (ಟಿಬಿ), ಕುಷ್ಠರೋಗ, ಸಿಡುಬು (ಮೈಲಿ ಬೇನೆ), ಮಾನಸಿಕ ಕಾಯಿಲೆಯಂತಹ ನೂರಾರು ಕಾಯಿಲೆಗಳ ವಿವರಣೆಗಳನ್ನು ನೀಡಿದ್ದಾರೆ. ಸುಮಾರು 600 ಗಿಡಮೂಲಿಕೆಗಳು, ಪ್ರಾಣಿ ಹಾಗೂ ಖನಿಜಗಳನ್ನು ಬಳಸಿ, ಬೆರೆಸಿ ಔಷಧ ತಯಾರಿಸುವ ವಿಧಾನಗಳನ್ನು ಇದರಲ್ಲಿ ವಿವರಿಸಲಾಗಿದೆ.ಆಯುರ್ವೇದ ಪದ್ದತಿಯನ್ನು ಅಭಿವೃದ್ಧಿಪಡಿಸಿದ ಕೀರ್ತಿ ಇವರದು. ಆ ಕಾಲದಲ್ಲಿ ಲಭ್ಯವಿದ್ದ ವೈದ್ಯ ಪದ್ಧತಿಗಳನ್ನೆಲ್ಲ ಎಂಟು ಭಾಗಗಳಲ್ಲಿ ವಿಂಗಡಿಸಿ, ಅವನ್ನು ಅಷ್ಟಾಂಗ ಆಯುರ್ವೇದ ಎಂದು ಹೆಸರಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!