ಅಂಧಕಾರವನ್ನು ಹೊಡೆದೋಡಿಸಿ ಬೆಳಕನ್ನು ತರುವ ಹಬ್ಬ. ನೋವನ್ನು ಖುಷಿಯನ್ನು ತರುವ ಹಬ್ಬ… ಅಜ್ಞಾನವೆಂಬ ಪರಿವನ್ನು ಕಳೆದು ಸುಜ್ಞಾನವೆಂಬ ಜ್ಞಾನ ದೀವಿಗೆಯನ್ನು ತರುವ ಹಬ್ಬ. ಹಣತೆಗಳ ಹಬ್ಬ ಮತ್ತೆ ಬಂದಿದೆ. ಮತ್ತೆ ಸಂಭ್ರಮ ತಂದಿದೆ.
ಮನೆಮನಗಳಲ್ಲಿ ಹರ್ಷವನ್ನು ತುಂಬುವ ಹಬ್ಬ. ದೀಪಾವಳಿ ಬರಿ ಹಬ್ಬವಲ್ಲ… ನಮ್ಮ ಸಂಸ್ಕೃತಿಯ ಪರಂಪರೆಯನ್ನು ಸಾರವನ್ನು ಇನ್ನಷ್ಟು ಹುರುಪು ತುಂಬುವ ಹಬ್ಬವಾಗಿದೆ. ಅದರಲ್ಲೂ ಭಾರತಿಯರಿಗೆ ದೀಪಾವಳಿ ಎಂದರೆ ಬಹು ದೊಡ್ಡ ಹಬ್ಬ. ಇದು ಖುಷಿಯಿಂದ ಕಲಿತು ಬೆರೆತು ಸಂಬಂಧಿಕರು ಸಿಗುವ ಅವಕಾಶ ಹೌದು. ಬಹಳ ದಿನಗಳಿಂದ ಜನರು ಕಾತರದಿಂದ ಕಾಯುತ್ತಿದ್ದ ಕ್ಷಣವೀಗ ಬಂದಿದೆ. ಮುಂಜಾನೆಯೇ ಹೊಸ ಬಟ್ಟೆ ತೊಟ್ಟು ಸಂಭ್ರಮಿಸುವ ಪರಿ ಇದೆಯಲ್ವಾ… ಅದನ್ನು ಬರೀ ಪದಗಳಲ್ಲಿ ಕಟ್ಟಿಕೊಡಲು ಸಾಧ್ಯವೇ ಇಲ್ಲ… ಹಿರಿಯರು ಕಿರಿಯರು ಬಡವಬಲ್ಲಿದ ಈ ಭೇದ ಭಾವವಿಲ್ಲದೆ ಎಲ್ಲರೂ ಸಂಭ್ರಮಿಸುವ ಹಬ್ಬವಿದು.
ಬದುಕಿನ ಅಂಧಕಾರವನ್ನು ತೊಡೆದು ಹಾಕಿ ಖುಷಿಯ ಬೆಳಕನ್ನು ಚೆಲ್ಲುವ ಈ ಹಬ್ಬದ ಸಂಭ್ರಮವೀಗ ಮೇರೆ ಮೀರಿದೆ. ಈ ದೀಪಾವಳಿ ನಿಮ್ಮ ಜೀವನವನ್ನು ಬೆಳಗಲಿ ನಿಮ್ಮ ಬದುಕು ಪ್ರಕಾಶಮಾನ ವಾಗಿರಲಿ ದೀಪದಂತೆ. ಮನೆ ಮನದಲ್ಲಿ ದೀಪವನ್ನು ಹಚ್ಚಿ ನೆಮ್ಮದಿ ತರಲಿ. ಎಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು.
ಕಿಶನ್. ಎಂ., ಪವಿತ್ರ ನಿಲಯ, ಪೆರುವಾಜೆ