ಸಾಮರಸ್ಯ ವಿಭಾಗ ಸುಬ್ರಹ್ಮಣ್ಯ ಇದರ ಆಶಯದಂತೆ ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸುಬ್ರಹ್ಮಣ್ಯ ಇದರ ಸಹಯೋಗದೊಂದಿಗೆ ಸುಬ್ರಹ್ಮಣ್ಯ ಗ್ರಾಮದ ವಾಲಗದಕೇರಿಯ ಹಿಂದೂ ಬಂಧುಗಳ ಮನೆಯಂಗಳದಲ್ಲಿ ದೀಪಾವಳಿಯ ಸಡಗರ ಹಿಂದೂ ಸಮಾಜದ ಎಲ್ಲಾ ಬಂಧುಗಳೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸುವ ಸಂಕಲ್ಪ ತುಡರ್ ಸಾಮರಸ್ಯದ ಜ್ಯೋತಿ ಕಾರ್ಯಕ್ರಮ ಇಂದು ನಡೆಯಿತು.ಚಿತ್ರದುರ್ಗದ ಶಿವಚರಣ ಮಾದಾರ ಚೆನ್ನಯ್ಯ ಗುರು ಪೀಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಹಾಗೂ ಸಚಿವರಾದ ಎಸ್. ಅಂಗಾರ ರವರ ಉಪಸ್ಥಿತಿಯಲ್ಲಿ ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಗರ್ಭಗುಡಿಯಿಂದ ಜ್ಯೋತಿ ತಂದು ನಂತರ ರಥಬೀದಿಯಿಂದ ಜ್ಯೋತಿಯ ಭವ್ಯ ಶೋಭಾಯಾತ್ರೆಯಲ್ಲಿ ಸಾಗಿ ವಾಲಗದಕೇರಿಯ ಮನೆಗಳಲ್ಲಿ ಹಣತೆಗಳ ಹಚ್ಚಿ ಗೋ ಪೂಜೆ ನಡೆಯಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.ಜಾನಪದ ಕಲಾವಿದ ರಮೇಶ್ ಮೆಟ್ಟಿನಡ್ಕ ನೇತೃತ್ವದ ತಂಡದವರಿಂದ ಚೆನ್ನು ಕುಣಿತ ಹಾಗೂ ಕಂಗೀಲು ನೃತ್ಯ ಪ್ರದರ್ಶನಗೊಂಡಿತು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ದಕ್ಷಿಣ ಪ್ರಾಂತ ಸಂಚಾಲಕ ನ.ಸೀತಾರಾಮ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿ, ಆದಿದ್ರಾವಿಡ ಸಮುದಾಯದ ಪ್ರಮುಖರಾದ ಹುಕ್ರ ವಾಲಗದಕೇರಿ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎ.ವಿ.ತೀರ್ಥರಾಮ, ಸುಳ್ಯ ಮಂಡಲ ಬಿ.ಜೆ.ಪಿ. ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾದ ವಿನಯ್ ಕುಮಾರ್ ಕಂದಡ್ಕ, ಕೇಂದ್ರೀಯ ರಬ್ಬರ್ ಮಂಡಳಿಯ ನಿರ್ದೇಶಕರಾದ ಮುಳಿಯ ಕೇಶವ ಭಟ್, ಪ್ರಮುಖರಾದ ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ, ಚಂದ್ರಶೇಖರ ತಳೂರು, ಕಜಂಪಾಡಿ ಸುಬ್ರಹ್ಮಣ್ಯ ಭಟ್, ಸುಭಾಷ್ ಕಳಂಜ, ಪ್ರಸನ್ನ ಕುಮಾರ್ ದರ್ಬೆ, ದಿನೇಶ್ ಸಂಪ್ಯಾಡಿ, ಮನೋಜ್, ಮೋನಪ್ಪ ಮಾನಾಡು ಇನ್ನಿತರರು ಉಪಸ್ಥಿತರಿದ್ದರು.