ಗುತ್ತಿಗಾರು ಗ್ರಾಮ ಪಂಚಾಯತ್ ವತಿಯಿಂದ ಗ್ರಾಮ ಪಂಚಾಯತ್ ಆವರಣದಲ್ಲಿ ನಿರ್ಮಿಸಲಾದ ಘನತ್ಯಾಜ್ಯ ವಿಲೇವಾರಿ ಘಟಕದ ಉದ್ಘಾಟನೆಯನ್ನು ಸಚಿವರಾದ ಎಸ್. ಅಂಗಾರರವರು ನೆರವೇರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸಚಿವರಾದ ಎಸ್. ಅಂಗಾರ ಹಾಗೂ ವಿವಿಧ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ವೈದ್ಯಾಧಿಕಾರಿ ಡಾ.ಚೈತ್ರಬಾನು, ಗುತ್ತಿಗಾರು ಪಿ.ಡಿ.ಓ. ಬಿ.ಧನಪತಿ, ಗ್ರಾಮ ಸಹಾಯಕ ಲೋಕೇಶ್ ಕುಚ್ಚಾಲ, ಸಮಾಜ ಸೇವಕ ಯತೀಂದ್ರ ಕಟ್ಟೆಕೋಡಿ, ಗುತ್ತಿಗೆದಾರ ಪ್ರೀತಂ ಗಣೇಶ್, ಗ್ರಾ.ಪಂ. ಸ್ವಚ್ಚತಾ ಸಿಬ್ಬಂದಿಗಳಾದ ರತ್ನಾವತಿ, ರಮಿತಾ, ವಸಂತಿ, ವೇಣುಗೋಪಾಲ, ಗ್ರಾ.ಪಂ ಸಿಬ್ಬಂದಿಗಳಾದ ಜಯಪ್ರಕಾಶ್ ಕೆ, ತೇಜೇಶ್ವರಿ, ಅನಿತಾ ಬಿ, ಚೋಮಯ್ಯ, ಅಭಿಲಾಷ, ಕಾವೇರಿ ಯವರಿಗೆ ಸನ್ಮಾನ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ರೇವತಿ ಆಚಳ್ಳಿ, ಉಪಾಧ್ಯಕ್ಷೆ ಪ್ರಮೀಳಾ ಭಾಸ್ಕರ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಎನ್. ಭವಾನಿಶಂಕರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧನಪತಿ, ಜಿ.ಪಂ. ಸಹಾಯಕ ಇಂಜಿನಿಯರ್ ಮಣಿಕಂಠ, ಪ್ರಮುಖರಾದ ದ.ಕ. ಜಿಲ್ಲಾ ಬಿ.ಜೆ.ಪಿ. ಉಪಾಧ್ಯಕ್ಷರಾದ ವೆಂಕಟ್ ವಳಲಂಬೆ, ಗುತ್ತಿಗಾರು ಪ್ರಾ.ಕೃ.ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ, ಕೇಂದ್ರ ರಬ್ಬರ್ ಮಂಡಳಿ ನಿರ್ದೇಶಕರಾದ ಮುಳಿಯ ಕೇಶವ ಭಟ್, ಗ್ರಾ.ಪಂ. ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.