ಕೆವಿಜಿ ನರ್ಸಿಂಗ್ ಕಾಲೇಜಿನ ಅಂತಿಮ ಜಿ.ಎನ್. ಎಂ ವಿದ್ಯಾರ್ಥಿಗಳಿಂದ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ ಮತ್ತು ಡೆಂಗ್ಯೂ ರೋಗದ ಕುರಿತು ಜನಜಾಗೃತಿ ಕಾರ್ಯಕ್ರಮವನ್ನು ಪಾತ್ರಾಭಿನಯದ ಮೂಲಕ ಹಿರಿಯ ಪ್ರಾಥಮಿಕ ಶಾಲೆ ಐರ್ವನಾಡು ಇಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಉಪಪ್ರಾಂಶುಪಾಲರಾದ ಶ್ರೀಮತಿ ಹರಿಣಾಕ್ಷಿ, ಕೆ.ವಿ.ಜಿ ನರ್ಸಿಂಗ್ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಚಂದ್ರಾವತಿ ಕೆ. ಎಸ್., ನರ್ಸಿಂಗ್ ಶಿಕ್ಷಕಿಯಾದ ಶ್ರೀಮತಿ ನಿರಂಜಿನಿ, ಸಮುದಾಯ ಆರೋಗ್ಯ ಅಧಿಕಾರಿ ಶ್ರೀಮತಿ ವೀಣಾ ಬಿ. ಆರ್., ಕೆವಿಜಿ ಮೆಡಿಕಲ್ ಕಾಲೇಜಿನ ಆರೋಗ್ಯ ನಿರೀಕ್ಷಕರಾದ ದಯಾನಂದ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಪ್ರಾಂಶುಪಾಲರಾದ ಶ್ರೀಮತಿ ಚಂದ್ರಾವತಿ ಇವರು ಶಾಲಾ ಶುಚಿತ್ವ, ಶಾರೀರಿಕ ಹಾಗೂ ಪರಿಸರವನ್ನು ಕಾಪಾಡಿಕೊಂಡರೆ ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಡೆಗಟ್ಟಬಹುದು ಎಂಬುದನ್ನು ಶಾಲಾ ಮಕ್ಕಳಲ್ಲಿ ಮನವರಿಕೆ ಮಾಡಿದರು. ಕಾರ್ಯಕ್ರಮದಲ್ಲಿ ವಿದ್ಯಾಕುಮಾರಿ, ಹರ್ಷಿಣಿ ಯವರು ಸ್ವಾಗತಿಸಿ, ಆರೋಗ್ಯ ನಿರೀಕ್ಷಕ ದಯಾನಂದರವರು ವಂದಿಸಿದರು.
ಸಾಂಕ್ರಾಮಿಕ ರೋಗ ತಡೆಗಟ್ಟುವುದರ ಪಾತ್ರಭಿನಯವನ್ನು ವಿದ್ಯಾರ್ಥಿ ಕು. ಮಿಶ್ರಿಯರವರು ನಿರೂಪಿಸಿದರು.