ಸರಕಾರದ ಆದೇಶದಂತೆ ತಿಂಗಳಿಗೊಂದು ದಿನ ಜಿಲ್ಲಾಧಿಕಾರಿಯವರು ಗ್ರಾಮ ವಾಸ್ತವ್ಯ ಮಾಡಬೇಕಾಗಿದ್ದು, ಅದರಂತೆ ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ.ಯವರು ಮಂಡೆಕೋಲು ಗ್ರಾಮವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಗ್ರಾಮ ವಾಸ್ತವ್ಯಕಾರ್ಯಕ್ರಮ ಅಂಗವಾಗಿ ಅ. 14 ರಂದು ಶುಕ್ರವಾರ ಸಂಜೆ ಗಂಟೆ 6.00 ರಿಂದ ಪುತ್ಯ ಸ.ಕಿ.ಪ್ರಾ.ಶಾಲೆಯಲ್ಲಿ ಜಿಲ್ಲಾಧಿಕಾರಿಯವರೊಂದಿಗೆ ಮುಕ್ತ ಚರ್ಚೆ “ಗ್ರಾಮ ಚಾವಡಿ” ಕಾರ್ಯಕ್ರಮ ಹಾಗೂ ಸಾರ್ವಜನಿಕರಿಂದ ಜನಪದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ನಂತರ ಜಿಲ್ಲಾಧಿಕಾರಿಯವರ ಪ್ರಾ.ಕೃ.ಪ.ಸ.ಬ್ಯಾಂಕ್ ಇಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಅ. 15 ರಂದು ಬೆಳಿಗ್ಗೆ 9.ರಿಂದ ಅಪರಾಹ್ನ ಗಂಟೆ 2.00 ರತನಕ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ನಡೆಯಲಿದೆ. ಗ್ರಾಮಸ್ಥರು ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆಯಬಹುದು ಎಂದು ಮಂಡೆಕೋಲು ಗ್ರಾ.ಪಂ.ಅಧ್ಯಕ್ಷೆ ವಿನುತಾ ಪಾತಿಕಲ್ಲು ತಿಳಿಸಿದ್ದಾರೆ.
- Wednesday
- May 21st, 2025