ಆಧುನಿಕ ಯುಗದಲ್ಲಿ ಎಲ್ಲವೂ ಸ್ಪಧಾತ್ಮಕವಾಗಿದೆ.ಭವಿಷ್ಯ ದಲ್ಲಿ ಪ್ರಗತಿ ಸಾಧಿಸಲು ಸರ್ವರಿಗೂ ಉತ್ತಮ ಉದ್ಯೋಗ ಅತ್ಯವಶ್ಯಕ. ಇದೀಗ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಉನ್ನತ ಹುದ್ದೆ ಪಡೆಯಬಹುದು.ಇಂತಹ ಪರೀಕ್ಷೆ ಗಳಿಗೆ ವಿದ್ಯಾರ್ಥಿ ದೆಸೆಯಿಂದಲೇ ತಯಾರಾಗುವುದು ಅತ್ಯವಶ್ಯಕ. ಈ ನಿಟ್ಟಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ಪೂರಕವಾಗುವಂತೆ ಶಿಬಿರಗಳನ್ನು ಆಯೋಜಿಸುವುದರಿಂದ ಪರೀಕ್ಷೆ ಬರೆಯಲು ಬೇಕಾದ ಜ್ಞಾನ ಪಡೆಯಲು ವಿದ್ಯಾರ್ಥಿಗಳಿಗೆ ಪೂರಕವಾಗಿದೆ.ಇದರಿಂದ ಪರೀಕ್ಷೆ ತೇರ್ಗಡೆಗೊಂಡು ಉತ್ತಮ ಉದ್ಯೋಗ ಪಡೆಯಲು ಸಹಕಾರಿ ಎಂದು ಗುತ್ತಿಗಾರು ಸರಕಾರಿ ಪ್ರೌಢಶಾಲಾ ಮುಖ್ಯಗುರು ನೆಲ್ಸನ್ ಕ್ಯಾಸ್ಟಲಿನೋ ಹೇಳಿದರು.
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ನೂತನವಾಗಿ ಆರಂಭಗೊಂಡ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಘಟಕ ವನ್ನು ಶುಕ್ರವಾರ
ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿ ದೆಸೆಯಿಂದ ಭವಿಷ್ಯದ ಔನತ್ಯದ ಬಗ್ಗೆ ಚಿಂತನೆ ಮೂಡಲು ಇಂತಹ ಶಿಬಿರಗಳು ಪೂರಕ.ಅಲ್ಲದೆ ಇದರಿಂದ ಸ್ಪಧಾತ್ಮಕ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಧ್ಯೆರ್ಯ ಬರುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಸೋಮಶೇಖರ್ ನಾಯಕ್ ವಹಿಸಿದ್ದರು.ಘಟಕ ದ ನಿರ್ದೇಶಕಿ ಮತ್ತು ಉಪನ್ಯಾಸಕಿ ಜ್ಯೋತಿ.ಪಿ.ರೈ, ವೇದಿಕೆಯಲ್ಲಿ ದ್ದರು.
ವಿದ್ಯಾರ್ಥಿನಿ ಅಭಿಜ್ಞಾ ಸ್ವಾಗತಿಸಿದರು.ದಿವ್ಯಾ ವಂದಿಸಿದರು.ಭಾವನಾ ಪರಿಚಯಿಸಿದರು.
ನಿಷಾ ಗೌರಿ ನಿರೂಪಿಸಿದರು.ಇನ್ನು ಮುಂದೆ ಶನಿವಾರ ಮತ್ತು ಆದಿತ್ತವಾರ ಸಂಪನ್ಮೂಲ ವ್ಯಕ್ತಿಗಳು ಮತ್ತು ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಸ್ಪಧಾತ್ಮಕ ಪರೀಕ್ಷೆ ತಯಾರಿ ಬಗ್ಗೆ ತರಬೇತಿ ನೀಡಲಿದ್ದಾರೆ.