ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸುಳ್ಯ ಇದರ ಪ್ರಗತಿಬಂಧು ಹಾಗೂ ಸ್ವಸಹಾಯಸಂಘಗಳ ಸುಳ್ಯ ತಾಲೂಕು ಕೇಂದ್ರ ಒಕ್ಕೂಟದ ನೂತನ ಅಧ್ಯಕ್ಷರಾಗಿ ಸುರೇಶ್ ಕಣೆಮರಡ್ಕ ಇವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಮಂಡೆಕೋಲು ಒಕ್ಕೂಟದ ಹಾಗೂ ಅಜ್ಜಾವರ ವಲಯ ಒಕ್ಕೂಟದ ಅಧ್ಯಕ್ಷರಾಗಿರುವ ಇವರು ಅಖಿಲ ಕರ್ನಾಟಕ ಜನಜಾಗೃತಿ ವೇಧಿಕೆಯ ಸುಳ್ಯ ವಲಯಾಧ್ಯಕ್ಷರಾಗಿ ಕೂಡ ಜವಾಬ್ಧಾರಿ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಸುಳ್ಯ ಯೋಜನಾ ಕಚೇರಿಯಲ್ಲಿ ನಡೆದ ವಲಯಾಧ್ಯಕ್ಷರುಗಳ ಸಭೆಯಲ್ಲಿ ನೂತನ ಪಧಾಧಿಕಾರಿಗಳ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಧರ್ಮಪಾಲ ಕಣ್ಕಲ್ (ಪಂಜ ವಲಯ), ಕಾರ್ಯದರ್ಶಿಯಾಗಿ ನಾರಾಯಣ ಕಳಂಜ (ದೊಡ್ಡತೋಟ ವಲಯ), ಜತೆ ಕಾರ್ಯದರ್ಶಿಯಾಗಿ ತೀರ್ಥರಾಮ (ಸುಬ್ರಹ್ಮಣ್ಯ ವಲಯ), ಕೋಶಾಧಿಕಾರಿಯಾಗಿ ಶ್ರೀಮತಿ ವೇಧಾ ಶೆಟ್ಟಿ (ಬೆಳ್ಳಾರೆ ವಲಯ) ಆಯ್ಕೆಗೊಂಡಿರುತ್ತಾರೆ. ಸುಳ್ಯ ಕೇಂದ್ರ ಒಕ್ಕೂಟವು ಒಟ್ಟು 10 ವಲಯಗಳ 96 ಒಕ್ಕೂಟಗಳನ್ನೊಳಗೊಂಡಿದ್ದು ಇವುಗಳಲ್ಲಿ 20,535 ಸದಸ್ಯರನ್ನೊಳಗೊಂಡ 2915 ಸ್ವಸಹಾಯ ಹಾಗೂ ಪ್ರಗತಿಬಂಧು ಸಂಘಗಳು ಕಾರ್ಯನಿರ್ವಹಿಸುತ್ತಿವೆ.
ಸಭೆಯಲ್ಲಿ ಕೇಂದ್ರ ಒಕ್ಕೂಟದ ನಿಕಟಪೂರ್ವಾಧ್ಯಕ್ಪರಾದ ಯತೀಶ್ ರೈ ದುಗ್ಗಲಡ್ಕ, ಸುಳ್ಯ ತಾಲೂಕು ಯೋಜನಾಧಿಕಾರಿ ನಾಗೇಶ್. ಪಿ, ವಲಯಾಧ್ಯಕ್ಷರುಗಳು, ಮೇಲ್ವಿಚಾರಕರು, ಕೇಂದ್ರ ಒಕ್ಕೂಟದ ನಿಕಟಪೂರ್ವಾಧ್ಯಕ್ಷರುಗಳು, ಉಪಸ್ಥಿತರಿದ್ದರು.