Ad Widget

ಆಲಡ್ಕ ಹೋಮ್ ಪ್ರೊಡಕ್ಟ್‌ನವರ ರಾಸಾಯನಿಕ ರಹಿತ ‘ಕಪ್ಪು ದ್ರಾಕ್ಷಿ ಹಣ್ಣಿನ ರಸ ಮಾರುಕಟ್ಟೆಗೆ ಬಿಡುಗಡೆ

. . . . .

ಯಾವುದೇ ರಾಸಾಯನಿಕ ಪದಾರ್ಥಗಳಿಲ್ಲದೆ ಮನೆಯಲ್ಲಿಯೇ ತಯಾರಿಸಲಾಗುವ ರುಚಿಯಾದ ಪಾನೀಯ ‘ಕಪ್ಪು ದ್ರಾಕ್ಷಿ ಹಣ್ಣಿನ ರಸ ಸೆ.26ರಂದು ಬೆಳಿಗ್ಗೆ ಕುರಿಯ ಗ್ರಾಮದ ಬೂಡಿಯಾರ್ ಫಾರ್ಮ್‌ ಹೌಸ್‌ನಲ್ಲಿ ಪುತ್ತೂರು ಮಾರುಕಟ್ಟೆಗೆ ಬಿಡುಗಡೆಗೊಂಡಿದೆ.

ಮೈಸೂರು ಮತ್ತು ಬೆಂಗಳೂರಿನಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುವ ಕಲಬೆರಕೆ ಪದಾರ್ಥಗಳಿಲ್ಲದ ಪಾನೀಯ, ಅಲಡ್ಕ ಹೋಂ ಪೊಡಕ್ಸ್‌ನ ಫ್ರೆಶ್ ಗ್ರೇಪ್ ಪ್ರುಟ್ ಜ್ಯೂಸ್ ‘ಕಪ್ಪು ದ್ರಾಕ್ಷಿ ಹಣ್ಣಿನ ರಸ ಇದೀಗ ಮಾರುಕಟ್ಟೆಗೆ ಬಿಡುಗಡೆಗೊಂಡಿದೆ. ರೈತರ ಉತ್ಪನ್ನಗಳನ್ನು ರೈತರಿಂದಲೇ ಖರೀದಿಸಿ ಸ್ವಾವಲಂಬಿಗಳನ್ನಾಗಿಸುವ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ‘ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ದಗೊಳಿಸುವಿಕೆ ಯೋಜನೆ(ಪಿಎಂಎಫ್‌ಎಂಐ)’ಗೆ ಪೂರಕವಾಗಿ ಇದೇ ಮೊದಲ ಬಾರಿಗೆ ಈ ಭಾಗದಲ್ಲಿ ಈ ಜ್ಯೂಸ್ ತಯಾರಿಸಿ ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸಹಿತ ಯುವ ಸಮುದಾಯ ಹಾಗೂ ಅಬಾಲವೃದ್ಧರಾದಿಯಾಗಿ ಎಲ್ಲ ವಯಸ್ಸಿನವರಿಗೂ ಉಲ್ಲಾಸಭರಿತ ಆರೋಗ್ಯಕ್ಕೆ ಪೂರಕವಾದ ಕಪ್ಪು ದ್ರಾಕ್ಷಿಹಣ್ಣಿನ ರಸವನ್ನು ಸಕ್ಕರೆ ಕಾಯಿಲೆಯವರ ಹೊರತು ಯಾವುದೇ ಅನಾರೋಗ್ಯ ಪೀಡಿತರೂ ಸೇವಿಸಬಹುದಾಗಿದೆ. ಕೆದಂಬಾಡಿ ಗ್ರಾಮದ ಕುಕ್ಕುಂಜೋಡ್ ಹೌಸ್‌ನಲ್ಲಿ ಇದರ ತಯಾರಿಕಾ ಘಟಕವಿದ್ದು ಯಾವುದೇ ಶುಭಸಮಾರಂಭಗಳಿಗೆ ರಖಂ ದರದಲ್ಲಿಯೂ ಪೂರೈಕೆ ಮಾಡಲಾಗುತ್ತದೆ.ಆಸಕ್ತರಿಗೆ,ಜ್ಯೂಸ್ ವಿತರಣಾ ಏಜೆನ್ಸಿಯನ್ನೂ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮಹಾಬಲ ರೈ ಕುಕ್ಕುಂಜೋಡು(ಮೊ:9164991719)ಯಾ ಹರೀಶ್ ಬಿಜತ್ರೆ (ಮೊ:9880310628)ರವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!