ಶ್ರೀ ದುರ್ಗಾ ಭಜನಾ ಮಂಡಳಿ ಮರಕತ ನಡುಗಲ್ಲು – ನಾಲ್ಕೂರು ಗ್ರಾಮ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ನಾಲ್ಕೂರು ಒಕ್ಕೂಟ ಹಾಗೂ ತಾಲೂಕು ಭಜನಾ ಪರಿಷತ್ ಸುಳ್ಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಭಜನಾ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಮರಕತ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ್ ಮಾವಿನಕಟ್ಟೆರವರ ಅಧ್ಯಕ್ಷತೆಯಲ್ಲಿ ಜರಗಿತು.
ಸುಳ್ಯ ತಾಲೂಕಿನ ಭಜನಾ ಪರಿಷತ್ ಅಧ್ಯಕ್ಷರಾದ ಯತೀಶ್ ರೈ ದುಗ್ಗಲಡ್ಕ ರವರು ಮಾತನಾಡು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ ವೀರೇಂದ್ರ ಹೆಗ್ಗಡೆಯವರು ಭಜನೆಯ ಮೂಲಕ ಜನರನ್ನು ಜಾಗೃತಿ ಮೂಡಿಸುವ ಮೂಲಕ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ. ಮಕ್ಕಳು ಪ್ರತಿನಿತ್ಯ ಭಜನೆ ಮಾಡುವುದ್ದರಿಂದ ದೈವಾನುಗ್ರಹ ಬರುತ್ತದೆ. ಮನಶುದ್ಧಿ ಆಗುತ್ತದೆ, ಒಳ್ಳೆಯ ದಾರಿಗೆ ಬರುತ್ತಾರೆ, ಭಜನೆಯನ್ನು ಮನೆಯಲ್ಲಿ ಪ್ರತಿನಿತ್ಯ ಕೂಡ ಮಾಡಿಕೊಂಡು ಬರಬೇಕು ಆಗ ಮಾತ್ರ ನಮಗೆ ದೇವರ ಪ್ರಾಪ್ತಿ ಸಿಗುತ್ತೆ ಎಂದು ಹೇಳಿದರು. ಸುಳ್ಯ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿರವರಾದ ಶ್ರೀಮತಿ ನಳಿನಿ ವಿ ಆಚಾರ್ಯ ರವರು ಮಕ್ಕಳಿಗೆ ಭಜನೆಯ ಮೂಲಕ ನಮ್ಮ ಭಾರತೀಯ ಸಂಸ್ಕೃತಿ ಸಂಸ್ಕಾರವನ್ನು ಕಳುಹಿಸಿ ಕೊಡಬೇಕು, ಇದಕ್ಕೆ ಪೋಷಕರ ಪಾತ್ರ ಮುಖ್ಯ ಇರಬೇಕು ಎಂದು ಹೇಳಿದರು. ಧಾರ್ಮಿಕ ಮುಖಂಡರಾದ ಹೊನ್ನಪ್ಪ ಪೊಯ್ಯೆಮಜಲುರವರು ಮಕ್ಕಳಲ್ಲಿ ಮೊಬೈಲ್ ಬಳಕೆ ಕಡಿಮೆ ಮಾಡಿಸಿ, ಭಜನೆಯಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಡುಗಲ್ಲು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ಚಂದ್ರಶೇಖರ ಪಾರೆಪ್ಪಾಡಿ, ಶ್ರೀ ಕ್ಷೇ ಧ ಗ್ರಾ ಯೋಜನೆಯ ಗುತ್ತಿಗಾರು ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ಗೌಡ, ಶ್ರೀ ದುರ್ಗಾ ಭಜನಾ ಮಂಡಳಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ಪಾಲ್ತಾಡು,ಶ್ರೀದುರ್ಗಾ ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಲೀಲಾವತಿ ಅಂಜೇರಿ ಉಪಸ್ಥಿತರಿದ್ದರು.ಈ ಸಮಾರಂಭ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಭಜನಾ ತರಭೇತಿ ನೀಡಿದ ಭಜನಾ ತರಬೇತಿ ಗುರುಗಳಾದ ರಮೇಶ್ ಮೆಟ್ಟಿನಡ್ಕ ರವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ 70 ಮಂದಿ ತರಭೇತಿ ಮಕ್ಕಳು, ಮಕ್ಕಳ ಪೋಷಕರು, ನಾಲ್ಕೂರು ಶೌರ್ಯ ವಿಪತ್ತು ನಿರ್ವಹಣಾ ತಂಡದ ಸಂಯೋಜಕರು, ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸಿದರು.
ಚಂದ್ರಶೇಖರ ಬಾಳುಗೋಡುರವರು ಸ್ವಾಗತಿಸಿದರು, ನಾಲ್ಕೂರು ಸೇವಾಪ್ರತಿನಿಧಿ ಹರಿಶ್ಚಂದ್ರ ಕುಳ್ಳಂಪಾಡಿರವರು ಕಾರ್ಯನಿರೂಪಿಸಿದರು. ತಾಲೂಕು ಭಜನಾ ಪರಿಷತ್ ವಲಯ ನಿರ್ದೇಶಕರಾದ ವಿಜಯ್ ಕುಮಾರ್ ಚಾರ್ಮತ ವಂದಿಸಿದರು.